ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹಾಗೂ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಮಧ್ಯೆ ವಾಗ್ವಾದ ನಡೆದಿದೆ ಎನ್ನಲಾಗಿದೆ. 139 ಕೋಟಿ ರೂ ಸಹಕಾರ ಸಂಘದಿಂದ ಸಾಲ ವಸೂಲಾತಿಗೆ ಡಿಸಿಸಿ ಬ್ಯಾಂಕ್ ಮುಂದಾದ ಹಿನ್ನೆಲೆ.. ಡಿಸಿಸಿ ಬ್ಯಾಂಕ್ ಗಳ ಧೋರಣೆಗೆ ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರಂತೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಡಿಸಿಸಿ ಬ್ಯಾಂಕ್‌ ಗಳಿಂದ ಸಾಲ ಪಡೆದು ರೈತರಿಗೆ ಸಾಲ ನೀಡಿತ್ತು.

ಡಿಸಿಸಿ ಬ್ಯಾಂಕ್ ಕ್ರಮಕ್ಕೆ ಮಾಧುಸ್ವಾಮಿ ಅಸಮಾಧಾನಗೊಂಡಿದ್ದು.. ಗ್ರಾಮಗಳಲ್ಲಿ ಪರಿಸ್ಥಿತಿ ಸರಿಯಿಲ್ಲ. ಡಿಸಿಸಿ ಬ್ಯಾಂಕ್ ಗಳು ಪ್ರಾಥಮಿಕ‌ ಪತ್ತಿನ ಸಹಕಾರ ಸಂಘಟಗಳಿಗೆ ನೋಟಿಸ್ ಕೊಡುವುದು ಸರಿಯಲ್ಲ. ಡಿಸಿಸಿ ಬ್ಯಾಂಕ್ ನೋಟೀಸ್ ನೀಡಿದರೆ, ಪ್ರಾಥಮಿಕ ಪತ್ತಿನ‌ ಸಹಕಾರ ಬ್ಯಾಂಕ್ ಗಳು ರೈತರ ಮೇಲೆ ಒತ್ತಡ ಹೇರಲಿದೆ. ರೈತರಿಂದ ಸಾಲ ವಸೂಲಾತಿಗೆ ಮುಂದಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ. ಈಗ ಸದ್ಯ ಸಾಲ ವಸೂಲಾತಿ ಕೈಬಿಡಿ ಎಂದು ಮಾಧುಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ.

ಮಾಧುಸ್ವಾಮಿ ಮಾತಿಗೆ ಎಸ್‌.ಟಿ.ಸೋಮಶೇಖರ್ ಉತ್ತರ ನೀಡಿ ನಿಖರವಾಗಿ ಯಾವ ಡಿಸಿಸಿ ಬ್ಯಾಂಕ್ ನೋಟೀಸ್ ಕೊಟ್ಟಿದೆ ಅಂತ ಸ್ಪಷ್ಟವಾಗಿ ಹೇಳಿ ಎಂದಿದ್ದಾರೆ ಎನ್ನಲಾಗಿದೆ.

The post ಎಸ್​.ಟಿ. ಸೋಮಶೇಖರ್- ಮಾಧುಸ್ವಾಮಿ ನಡುವೆ ವಾಗ್ವಾದ: ಅಸಲಿಗೆ ನಡೆದಿದ್ದೇನು..? appeared first on News First Kannada.

Source: newsfirstlive.com

Source link