ಎಸ್​. ನಾರಾಯಣ್​ ಫೇಸ್​ಬುಕ್​ ಅಕೌಂಟ್ ಹ್ಯಾಕ್​; ಹಣಕ್ಕೆ ಬೇಡಿಕೆ ಇಟ್ಟ ಕಿಡಿಗೇಡಿಗಳು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಲವು ರಾಜಕಾರಣಿಗಳ, ಗಣ್ಯರ, ಸಿನಿಮಾ ನಟ, ನಟಿಯರ ಹೆಸರಿನಲ್ಲಿ ಫೇಸ್​ಬುಕ್​ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್​ ಹ್ಯಾಕ್​ ಮಾಡಿ ಅಮಾಯಕರಿಗೆ ವಂಚಿಸುತ್ತಿರುವ ಘಟನೆ ಹೆಚ್ಚಾಗ್ತಾ ಇದೆ. ಅದ್ರಂತೆ ಇದೀಗ ಕನ್ನಡದ ಖ್ಯಾತ ನಿರ್ಮಾಪಕ, ನಿರ್ದೇಶಕ ಕಲಾಸಾಮ್ರಾಟ್​​ ಎಸ್​. ನಾರಾಯಣ್​ ಅವರ ಅಧಿಕೃತ ಫೇಸ್​ಬುಕ್​ ಖಾತೆಯನ್ನ ಹ್ಯಾಕ್​ ಮಾಡಿ ಕಿಡಿಗೇಡಿಗಳು, ಸ್ನೇಹಿತರಿಗೆ ಹಣದ ಬೇಡಿಕೆ ಇಟ್ಟಿದ್ದಾರೆ.

ಖಾತೆ ಹ್ಯಾಕ್​ ಆಗಿರೋ ಬಗ್ಗೆ ಎಸ್​. ನಾರಾಯಣ್​ ಫೇಸ್​ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣದ‌ ಮೂಲಕ ಸ್ಪಷ್ಟನೆ ನೀಡಿದ್ದು, ನನ್ನ ಹೊಸ ಚಿತ್ರ 5ಡಿ ಟ್ರೈಲರ್​ ರಿಲೀಸ್​ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ. ಯಾರು ದಯವಿಟ್ಟು ನನ್ನ ಹೆಸರು ಹೇಳಿಕೊಂಡು ಹಣ ಕೇಳಿದರೆ ಹಾಕಬೇಡಿ ಎಂದಿದ್ದಾರೆ.

ಮೋಸ ಮಾಡೋದಕ್ಕಾಗಿಯೇ ನನ್ನ ಖಾತೆಯನ್ನು ಹ್ಯಾಕ್​​ ಮಾಡಿದ್ದಾರೆ. ಯಾರಾದರು ಅಪ್ಪಿ ತಪ್ಪಿ ಮೋಸ ಹೋದರೆ ನಾನು ಜವಾಬ್ದಾರನಾಗಿರುವುದಿಲ್ಲ. ಜೊತೆಗೆ ಈ ಕುರಿತು ಸೈಬರ್ ಕ್ರೈಂ​ಗೆ ದೂರು ನೀಡಲು ಮುಂದಾಗಿದ್ದೇನೆ. ಇಂತಹ ಸಂದೇಶಗಳಿಂದ ಮೋಸ ಹೋಗಬೇಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಎಸ್​. ನಾರಾಯಣ್​ ಎಚ್ಚರಿಕೆ ನೀಡಿದ್ದಾರೆ.

News First Live Kannada

Leave a comment

Your email address will not be published. Required fields are marked *