ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿದೆ. ಮತ್ತೆ ಮೊದಲ ಇನ್ನಿಂಗ್ಸ್‍ನಲ್ಲಿ ಜೊತೆಯಾಗಿದ್ದ ಜೊಡಿ ಲ್ಯಾಗ್ ಮಂಜು ಮತ್ತು ದಿವ್ಯ ಸುರೇಶ್ ತಮ್ಮ ಹರಟೆಯನ್ನು ಪ್ರಾರಂಭಿಸಿದ್ದಾರೆ. ಈ ನಡುವೆ ಮಂಜು ತನ್ನ ಇಂಗ್ಲಿಷ್ ಭಾಷೆ ಬಳಕೆಯ ಸಂದರ್ಭ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಆಂಗ್ಲ ಭಾಷೆಯಲ್ಲಿ ಪಡೆದುಕೊಂಡ ಅಂಕದ ಬಗ್ಗೆ ಮಾತನಾಡಿದ್ದಾರೆ.

ದಿವ್ಯ ಜೊತೆ ಮಂಜು ಮಾತನಾಡುವ ವೇಳೆ ಕನ್ನಡ ಮತ್ತು ಇಂಗ್ಲಿಷ್ ಬಳಕೆಯ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಈ ಸಂದರ್ಭ ಮಂಜು ನನಗೆ ಎಸ್‍ಎಸ್‍ಎಲ್‍ಸಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ 40 ಅಂಕ ಪಡೆದಿದ್ದೆ. ನಾನು ಅಷ್ಟು ಅಂಕ ಬರುತ್ತದೆ ಎಂದು ಅಂದುಕೊಂಡಿರಲಿಲ್ಲಾ ನನಗೆ ಆಶ್ಚರ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.

ನಾನು ಕನ್ನಡ ಭಾಷೆಯಲ್ಲಿ ಉತ್ತಮ ಅಂಕ ಪಡೆಯುತ್ತಿದ್ದೆ. ಕನ್ನಡದಲ್ಲಿ ಮಾತ್ರ ತೊಂಬತ್ತು, ತೊಂಬತ್ತೆರಡು ಸ್ಕೋರ್ ಮಾಡುತ್ತಿದ್ದೆ. ಅದನ್ನು ಬಿಟ್ಟರೆ ಇತಿಹಾಸದಲ್ಲಿ ಉತ್ತಮ ಅಂಕ ಬರುತ್ತಿತ್ತು. ಆದರೆ ನನಗೆ ಇಂಗ್ಲಿಷ್‍ನಲ್ಲಿ 40 ಅಂಕ ಬಂದಿದ್ದು ಅರಗಿಸಿಕೊಳ್ಳಲು ಆಗಿಲ್ಲ ಎಂದರು. ಈ ಸಂದರ್ಭ ಜೊತೆಗಿದ್ದ ಅರವಿಂದ್ ಮತ್ತು ದಿವ್ಯ ಸುರೇಶ್ ಜೋರಾಗಿ ನಕ್ಕರು. ಇದನ್ನೂ ಓದಿ: ಕ್ಯಾಪ್ಟನ್ ರೂಮ್‍ನಲ್ಲಿ ಪಾಸ್ ಆಗಿದ್ದೇನು ಶಮಂತ್ ಬಿಚ್ಚಿಟ್ರು ಸತ್ಯ

ನನಗೆ 40 ಅಂಕ ಹೇಗೆ ಕೊಟ್ರು ಎಂದು ಭಾರೀ ಯೋಚನೆ ಮಾಡಿದೆ. ಬಳಿಕ ಮರು ಪರಿಶೀಲನೆಗೆ ಹಾಕಬೇಕು ಎಂದು ಅಂದುಕೊಂಡಿದ್ದೆ ಮತ್ತೆ ಬೇಡ ಎಂದು ಸುಮ್ಮನಿದ್ದೆ ಎಂದು ಮಂಜು ತಮಾಷೆ ಮಾಡಿದರು.

The post ಎಸ್‍ಎಸ್‍ಎಲ್‍ಸಿ ಇಂಗ್ಲಿಷ್ ಪರೀಕ್ಷೆಯಲ್ಲಿನ ಮಂಜು ಸ್ಕೋರ್ ರಿವೀಲ್ appeared first on Public TV.

Source: publictv.in

Source link