ಎಸ್ ಎಸ್ ಎಲ್ ಸಿ ಟಾಪರ್ ಬಾಗಲಕೋಟೆಯ ಇಂದಿರಾಗೆ ಐಎಎಸ್/ಐಪಿಎಸ್ ಪರೀಕ್ಷೆ ಬರೆಯುವ ಗುರಿ | SSLC topper Indira of Bagalkote aims to write competitive exams and become IAS/IPS officer ARBಜಾಸ್ತಿ ಹೊತ್ತು ಓದಿದರೆ ವಿಷಯಗಳು ಚೆನ್ನಾಗಿ ಅರ್ಥವಾಗುತ್ತವೆ ಅಂತ ಅಂದುಕೊಳ್ಳುವ ಬದಲು, ಸ್ವಲ್ಪ ಹೊತ್ತು ಓದಿದರೂ ಪೂರ್ತಿ ಏಕಾಗ್ರತೆ ಓದಿ ಅದನ್ನು ಮನನ ಮಾಡಿಕೊಂಡರೆ ಮತ್ತು ಓದಿದನ್ನೇ ಮತ್ತೇ ಮತ್ತೇ ಓದುದತ್ತಿದ್ದರೆ ಅದು ಬಹಳ ಸಹಕಾರಿಯಾಗುತ್ತದೆ ಎಂದು ಹೇಳುತ್ತಾಳೆ.

TV9kannada Web Team


| Edited By: Arun Belly

May 20, 2022 | 10:20 PM
Bagalkot: ಈ ಬಾರಿಯ ಎಸ್ ಎಸ್ ಎಲ್ ಸಿ (SSLC) ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 145 ಮಕ್ಕಳು ಶತ ಪ್ರತಿಶತ ಅಂಕ ಗಳಿಸಿ ತಮ್ಮ ತಂದೆ ತಾಯಿಗಳಿಗೆ ಮತ್ತು ತಾವು ಓದುತ್ತಿದ್ದ ಶಾಲೆಗೆ ಕೀರ್ತಿ ತಂದಿದ್ದಾರೆ. 625 ಕ್ಕೆ 625 ಅಂಕ ಗಳಿಸಿರುವ ವಿದ್ಯಾರ್ಥಿಗಳ ಪೈಕಿ ಬಾಗಲಕೋಟೆಯ ಇಂದಿರಾ ಅರುಣ್ (Indira Arun) ಕೂಡ ಒಬ್ಬಾಕೆ. ಇಂದಿರಾ ಬಾಗಲಕೋಟೆಯವಳಾದರೂ ಓದುತ್ತಿರೋದು ಮೂಡುಬಿದರೆಯ (Moodubidare) ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರವರ್ತಿತ ಆಳ್ವಾಸ್ ಪ್ರೌಢಶಾಲೆಯಲ್ಲಿ. ಸಾಧನೆಯ ಶ್ರೇಯಸ್ಸನ್ನು ಇಂದಿರಾ ತನ್ನ ತಂದೆ ತಾಯಿಗೆ ಮತ್ತು ತಾನು 1-5 ನೇ ತರಗತಿರೆಗೆ ವಿದ್ಯಾಭ್ಯಾಸ ಮಾಡಿದ ಕಲಾದಗಿಯ ಹಣ್ಣು ಬೆಳಗಾರರ ಶಾಲೆಯ ಶಿಕ್ಷಕರಿಗೆ ನೀಡುತ್ತಾಳೆ. ಅವರು ಹಾಕಿದ ಭದ್ರ ಬುನಾದಿಯಿಂದಾಗೇ ತನಗೆ ಆಳ್ವಾಸ್ ಪ್ರೌಢಶಾಲೆಯಲ್ಲಿ ಪ್ರವೇಶ ಸಿಕ್ಕಿತು ಮತ್ತು ಸಾಧನೆ ಮಾಡುವುದು ಸಾಧ್ಯವಾಯಿತು ಎಂದು ಇಂದಿರಾ ಹೇಳುತ್ತಾಳೆ.

ಇಂದಿರಾ ಒಂದು ರೈತ ಕುಟುಂಬಕ್ಕೆ ಸೇರಿದ ಹುಡುಗಿಯಾಗಿದ್ದಾಳೆ. ತಂದೆ ತಾಯಿ ಮತ್ತು ಕುಟುಂಬದ ಎಲ್ಲ ಸದಸ್ಯರ ಪ್ರೋತ್ಸಾಹವನ್ನು ಅವಳು ಕೊಂಡಾಡುತ್ತಾಳೆ. ಹಾಗೆಯೇ ಆಳ್ವಾಸ್ ಪ್ರೌಢಶಾಲೆಯ ಶಿಕ್ಷಕರ ಸಹಾಯವನ್ನೂ ಕೃತಜ್ಞತೆ ಮತ್ತು ಧನ್ಯತೆಯ ಭಾವದಿಂದ ನೆನೆಯುತ್ತಾಳೆ. ಈ ಹುಡುಗಿಯಲ್ಲಿರುವ ಆತ್ಮವಿಶ್ವಾಸ ನಮ್ಮನ್ನು ದಂಗಾಗಿಸುತ್ತದೆ ಮಾರಾಯ್ರೇ. ಕೆಮೆರಾ ಎದುರು ನಿರ್ಭೀತಿಯಿಂದ ನಿರರ್ಗಳವಾಗಿ ಅರಳು ಹುರಿದಂತೆ ಮಾತಾಡುತ್ತಾಳೆ.

ತನಗಿಂತ ಕಿರಿಯ ವಿದ್ಯಾರ್ಥಿಗಳಿಗೆ ಓದುವ ಕ್ರಮದ ಬಗ್ಗೆ ಇಂದಿರಾ ಅದ್ಭುತವಾದ ಸಲಹೆ ನೀಡುತ್ತಾಳೆ. ಜಾಸ್ತಿ ಹೊತ್ತು ಓದಿದರೆ ವಿಷಯಗಳು ಚೆನ್ನಾಗಿ ಅರ್ಥವಾಗುತ್ತವೆ ಅಂತ ಅಂದುಕೊಳ್ಳುವ ಬದಲು, ಸ್ವಲ್ಪ ಹೊತ್ತು ಓದಿದರೂ ಪೂರ್ತಿ ಏಕಾಗ್ರತೆ ಓದಿ ಅದನ್ನು ಮನನ ಮಾಡಿಕೊಂಡರೆ ಮತ್ತು ಓದಿದನ್ನೇ ಮತ್ತೇ ಮತ್ತೇ ಓದುದತ್ತಿದ್ದರೆ ಅದು ಬಹಳ ಸಹಕಾರಿಯಾಗುತ್ತದೆ ಎಂದು ಹೇಳುತ್ತಾಳೆ.

ಇಂದಿರಾಗೆ ಡಾಕ್ಟರ್ ಆಗಬೇಕು, ಇಂಜಿನೀಯರ್ ಆಗಬೇಕು ಎಂಬ ಮಹತ್ವಾಕಾಂಕ್ಷೆ ಇಲ್ಲ, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಐ ಎ ಎಸ್ ಅಥವಾ ಐಪಿಎಸ್ ಮಾಡಬೇಕೆನ್ನುವ ಗುರಿ ಅವಳಿಗಿದೆ. ಅವಳ ಕನಸು ಈಡೇರಲಿ ಎಲ್ಲ ಒಳ್ಳೆಯದಾಗಲಿ.

TV9 Kannada


Leave a Reply

Your email address will not be published. Required fields are marked *