ಎ.ಎಸ್.ಐ ಮನೆಗೆ ನುಗ್ಗಿ ಪುತ್ರನ ಮೇಲೆ ಫೈರಿಂಗ್; ಮನೆಯಲ್ಲಿದ್ದ ಚಿನ್ನ, ಹಣ ದರೋಡೆ – Firing and robbery in Bagepalli ASI house in Chikkaballapur


ಎಎಸ್​ಐ ಮನೆಗೆ ನುಗ್ಗಿ ದುಷ್ಕರ್ಮಿಗಳು ಪುತ್ರನ ಮೇಲೆ ಗುಂಡು ಹಾರಿಸಿ ದರೋಡೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ನಡೆದಿದೆ.

ಎ.ಎಸ್.ಐ ಮನೆಗೆ ನುಗ್ಗಿ ಪುತ್ರನ ಮೇಲೆ ಫೈರಿಂಗ್; ಮನೆಯಲ್ಲಿದ್ದ ಚಿನ್ನ, ಹಣ ದರೋಡೆ

ಎಎಸ್ಐ​​ ಮನೆಗೆ ನುಗ್ಗಿ ಪುತ್ರನ ಮೇಲೆ ಫೈರಿಂಗ್​

ಚಿಕ್ಕಬಳ್ಳಾಫುರ: ಎಎಸ್​ಐ (ASI) ಮನೆಗೆ ನುಗ್ಗಿ ದುಷ್ಕರ್ಮಿಗಳು ಎಎಸ್​ಐ ಪುತ್ರನ ಮೇಲೆ ಗುಂಡು ಹಾರಿಸಿ ದರೋಡೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ನಡೆದಿದೆ. ನಾಲ್ವರು ಆರೋಪಿಗಳಿಂದ ಕೃತ್ಯ ಎಸಗಲಾಗಿದೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ನಾರಾಯಣಸ್ವಾಮಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೆರೇಸಂದ್ರ ಗ್ರಾಮದ ಮಂಜುನಾಥ ಕಲ್ಯಾಣ ಮಂಟಪದ ಬಳಿ ಇರುವ ಎಎಸ್​ಐ ನಾರಾಯಣಸ್ವಾಮಿ ಅವರ ಮನೆಗೆ ಬ್ರೀಜಾ ಕಾರಿನಲ್ಲಿ ಬಂದಿದ್ದ ನಾಲ್ವರು ನುಗ್ಗಿದ್ದಾರೆ. ಮನೆಗೆ ನುಗ್ಗಿ ಎಎಸ್​ಐ ಪುತ್ರ ಶರತ್​ಗೆ ಗುಂಡು 3 ಗುಂಡು ಹಾರಿಸಿದ್ದಾರೆ. ನಂತರ ಎಎಸ್​ಐ ಪತ್ನಿ, ಸೊಸೆ ಮೈಮೇಲಿದ್ದ ಚಿನ್ನಾಭರಣ, ನಗದು ದರೋಡೆ ಮಾಡಿದ್ದಾರೆ. ದರೋಡೆಕೋರರು ದರೋಡೆ ಮಾಡುತ್ತಿರುವ ವೇಳೆ ಎಎಸ್​ಐ ನಾರಾಯಣಸ್ವಾಮಿ ಮನೆಗೆ ಬಂದಿದ್ದಾರೆ.

ನಾರಾಯಾಣಸ್ವಾಮಿ ಅವರಿಗೆ ದರೋಡೆಕೋರರು ಮನೆಯಿಂದ ಓಡಿಸಿದ್ದಾರೆ. ನಂತರ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಗಾಯಾಳು ಶರತ್​ನನ್ನು ಚಿಕ್ಕಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೆರೇಸಂದ್ರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.