ಎ ಮಂಜು ವಿರುದ್ಧ ಬಿಜೆಪಿ ಶಿಸ್ತು ಕ್ರಮ: ನನಗೆ ನೋಟಿಸ್ ಕೊಟ್ಟವನು ಅವಿವೇಕಿ; ವೇದಿಕೆ ಮೇಲೆಯೇ ಕಣ್ಣೀರಿಟ್ಟ ಮಾಜಿ ಸಚಿವ | A Manju Ex Minister breaks down at Stage in Hassan Karnataka BJP Politics


ಎ ಮಂಜು ವಿರುದ್ಧ ಬಿಜೆಪಿ ಶಿಸ್ತು ಕ್ರಮ: ನನಗೆ ನೋಟಿಸ್ ಕೊಟ್ಟವನು ಅವಿವೇಕಿ; ವೇದಿಕೆ ಮೇಲೆಯೇ ಕಣ್ಣೀರಿಟ್ಟ ಮಾಜಿ ಸಚಿವ

ಎ. ಮಂಜು

ಹಾಸನ: ನನಗೆ ನೋಟಿಸ್ ಕೊಟ್ಟವನು ಅವಿವೇಕಿ. ನನಗೆ ನೋಟಿಸ್ ಕೊಡಲು ಅವನಿಗೆ ಅಧಿಕಾರವೇ ಇಲ್ಲ. ನೋಟಿಸ್ ಕೊಡಲು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿದಾಗ ಮಾತ್ರ ನೋಟಿಸ್‌ ಕೊಡಬೇಕು. ಪಕ್ಷದ ರಾಜ್ಯಾಧ್ಯಕ್ಷರು ಮಾತ್ರ ನೋಟಿಸ್‌ ಕೊಡಬೇಕು ಎಂದು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಮಾಜಿ ಸಚಿವ ಎ.ಮಂಜು ಆಕ್ರೋಶ ಹೊರಹಾಕಿದ್ದಾರೆ. ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಪತ್ರ ಬರುವವರೆಗೂ ಏನು ಮಾಡಿದ್ದಾರೆಂದು ಗೊತ್ತಿರಲಿಲ್ಲ. ಬಿಜೆಪಿ ಅಭ್ಯರ್ಥಿ ಜತೆ ಹೋಗಿ ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷ ಕಟ್ಟಲು ನಾವು ಮಂಡ್ಯದಲ್ಲಿ ಜೀತ ಮಾಡುತ್ತಿದ್ದೆವು. ಹುದ್ದೆಯನ್ನು ಕೊಟ್ಟಿಲ್ಲ, ಸಂಘಟನೆ ಜವಾಬ್ದಾರಿ ಹೊತ್ತಿದ್ದೆವು. ಇದರ ಹಿಂದೆ ಯಾರ ಕೈವಾಡವೆಂದು ಮುಂದೆ ತಿಳಿಯುತ್ತೆ. ನನ್ನ ಮನೆ ಒಡೆದಿದ್ದಾರೆ. ಸಂದರ್ಭ ಬಂದಾಗ ಮಾತಾಡುವೆ ಎಂದು ಅರಕಲಗೂಡಿನಲ್ಲಿ ಎ. ಮಂಜು ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಮೇಲೆ ಬಿಜೆಪಿ ಶಿಸ್ತು ಕ್ರಮ ಕೈಗೊಂಡಿದ್ದಕ್ಕೆ ಮಾಜಿ ಸಚಿವ ಎ. ಮಂಜು ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ. ಅರಕಲಗೂಡಿನಲ್ಲಿ‌ ನಡೆದ ಬೆಂಬಲಿಗರ ಸಭೆ ವೇಳೆ ಕಣ್ಣೀರು ಹಾಕಿದ್ದಾರೆ. ಕುಟುಂಬ ಒಡೆದರು ನನಗೆ ವಹಿಸಿದ್ದ ಕೆಲಸವನ್ನು ಮಾಡ್ತಿದ್ದೆ. ಆದರೂ ಹೀಗೆ ಮಾಡಿದ್ದಾರೆ ಎಂದು ಎ.ಮಂಜು ಕಣ್ಣೀರು ಹಾಕಿದ್ದಾರೆ. ಅಭಿಪ್ರಾಯ ಕೇಳಲು ಎ.ಮಂಜು ಬೆಂಬಲಿಗರ ಸಭೆ ಕರೆದಿದ್ದರು. ಈ ವೇಳೆ, ಘಟನೆ ನಡೆದಿದೆ.

ಮಾಜಿ ಸಚಿವ ಎ. ಮಂಜು ಪುತ್ರ ಮಂಥರ್​ ​ಗೌಡಗೆ ಕಾಂಗ್ರೆಸ್​ನಿಂದ ಪರಿಷತ್ ಟಿಕೆಟ್ ಹಿನ್ನೆಲೆ ಕರ್ನಾಟಕ ಬಿಜೆಪಿ ಶಸ್ತು ಕ್ರಮ ಕೈಗೊಂಡಿತ್ತು. ಮಾಜಿ ಸಚಿವ ಎ. ಮಂಜು ವಿರುದ್ಧ ರಾಜ್ಯ ಬಿಜೆಪಿ ಕ್ರಮ ಕೈಗೊಂಡಿತ್ತು. ಮಂಡ್ಯ ಜಿಲ್ಲೆಯ ಜವಾಬ್ದಾರಿಗಳಿಂದ ಎ. ಮಂಜು ಮುಕ್ತಗೊಳಿಸಲಾಗಿತ್ತು. ಪ್ರಭಾರಿ, ಪಕ್ಷದ ಜವಾಬ್ದಾರಿಗಳಿಂದ ಬಿಜೆಪಿ ಮುಕ್ತಗೊಳಿಸಿತ್ತು. ಕೊಡಗು ಕ್ಷೇತ್ರದಿಂದ ಮಂಥರ್ ಗೌಡಗೆ ಕಾಂಗ್ರೆಸ್​ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಿಸ್ತುಕ್ರಮ ಕೈಗೊಂಡಿತ್ತು.

ಮಂಡ್ಯ ಜಿಲ್ಲೆಯ ಪಕ್ಷದ ಉಸ್ತುವಾರಿಯಿಂದ ಬಿಡುಗಡೆಗೊಳಿಸಿ ಪತ್ರ ನೀಡಲಾಗಿತ್ತು. ರಾಜ್ಯ ಶಿಸ್ತು ಸಮಿತಿ ಅದ್ಯಕ್ಷ ಲಿಂಗರಾಜ್ ಪಾಟೀಲ್‌ ಶಿಸ್ತು ಕ್ರಮ ಕೈಗೊಂಡಿದ್ದರು. ಇತ್ತೀಚಿನ ಬೆಳವಣಿಗೆಗಳಿಂದ‌‌ ಕೆಲವು ಸಂಶಯಗಳು ಉಂಟಾಗಿವೆ ಎಂದು ಆರೋಪಿಸಿ‌ ಕ್ರಮ ಕೈಗೊಳ್ಳಲಾಗಿತ್ತು. ಮಂಡ್ಯ ಜಿಲ್ಲೆ ಉಸ್ತುವಾರಿ ಹಾಗು ಇತರೆ ಎಲ್ಲಾ ಜವಾಬ್ದಾರಿ ಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಎ. ಮಂಜುಗೆ ಪತ್ರ ಬರೆಯಲಾಗಿತ್ತು.

ಇದನ್ನೂ ಓದಿ: ಮಾಜಿ ಸಚಿವ ಎ ಮಂಜು ವಿರುದ್ಧ ರಾಜ್ಯ ಬಿಜೆಪಿ ಶಿಸ್ತುಕ್ರಮ; ಎಲ್ಲಾ ಜವಾಬ್ದಾರಿಗಳಿಂದ ಬಿಡುಗಡೆ

ಇದನ್ನೂ ಓದಿ: ಬಿಜೆಪಿ ಇತಿಹಾಸದಲ್ಲಿ ಅತ್ಯಂತ ದುರ್ಬಲ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು: ಆರ್ ಧ್ರುವನಾರಾಯಣ

TV9 Kannada


Leave a Reply

Your email address will not be published. Required fields are marked *