ಏಕದಿನ ಕ್ರಿಕೆಟ್​​​ನಲ್ಲಿ ಕೆಟ್ಟ ದಾಖಲೆ ಬರೆದ ವಿಶ್ವ ಕ್ರಿಕೆಟ್​ನ ಬಲಿಷ್ಠ ತಂಡ

ಏಕದಿನ ಕ್ರಿಕೆಟ್​​​ನಲ್ಲಿ ಕೆಟ್ಟ ದಾಖಲೆ ಬರೆದ ವಿಶ್ವ ಕ್ರಿಕೆಟ್​ನ ಬಲಿಷ್ಠ ತಂಡ

ವಿಶ್ವ ಕ್ರಿಕೆಟ್​ ಲೋಕದ ಬಲಿಷ್ಠ ತಂಡ​ ಎನಿಸಿರುವ ಟೀಮ್​ ಇಂಡಿಯಾ, ಏಕದಿನ ಕ್ರಿಕೆಟ್​ನಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದಿದೆ. 2020ರ ಬಳಿಕ ಬೌಲಿಂಗ್ ಸರಾಸರಿಯಲ್ಲಿ ಸ್ಕಾಟ್ಲೆಂಡ್​, ಜಿಂಬಾಬ್ವೆ, ಆಫ್ಘಾನಿಸ್ತಾನಕ್ಕಿಂತಲೂ ಟೀಮ್​ ಇಂಡಿಯಾ ಬೌಲಿಂಗ್​ ಅತ್ಯಂತ ಕಡೆಯಾಗಿದೆ. ಈ ಅವಧಿಯಲ್ಲಿ ಏಕದಿನ ಕ್ರಿಕೆಟ್​ನ ಮೊದಲ 10 ಓವರ್​ಗಳಲ್ಲಿ ಟೀಮ್​ ಇಂಡಿಯಾ, 81ರ ಸರಾಸರಿ ಹೊಂದಿದ್ದು, ಇದು ಅತ್ಯಂತ ಕಳಪೆ ಸರಾಸರಿ ದಾಖಲೆಯಾಗಿದೆ.

ಭಾರತದ ನಂತರದ ಸ್ಥಾನದಲ್ಲಿ ಜಿಂಬಾಬ್ವೆ 76.67, ಶ್ರೀಲಂಕಾ 51.6, ಆಫ್ಘಾನಿಸ್ತಾನ 48.3, ಮತ್ತು ಸ್ಕಾಟ್ಲೆಂಡ್​ 45.7 ಸರಾಸರಿ ದಾಖಲಾಗಿದೆ. ಆದರೆ ಡೆಡ್ಲಿ ಅಟ್ಯಾಕಿಂಗ್​ ಬೌಲಿಂಗ್​ ಹೊಂದಿದ್ದರೂ ಭಾರತ, ಈ ದಾಖಲೆ ಬರೆದಿರೋದು ಅಚ್ಚರಿ ಮೂಡಿಸಿದೆ. ಪ್ರಸ್ತುತ ಸರಣಿಯಲ್ಲೂ ಭಾರತ, ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದ ಪವರ್​ ಪ್ಲೇನಲ್ಲಿ 55ರನ್, ​ 2ನೇ ಪಂದ್ಯದಲ್ಲಿ 59 ರನ್​ ಬಿಟ್ಟುಕೊಟ್ಟಿದೆ. ಆದರೆ ವಿಕೆಟ್​ ಪಡೆಯುವಲ್ಲಿ ವಿಫಲವಾಗಿದೆ.

The post ಏಕದಿನ ಕ್ರಿಕೆಟ್​​​ನಲ್ಲಿ ಕೆಟ್ಟ ದಾಖಲೆ ಬರೆದ ವಿಶ್ವ ಕ್ರಿಕೆಟ್​ನ ಬಲಿಷ್ಠ ತಂಡ appeared first on News First Kannada.

Source: newsfirstlive.com

Source link