ಏಕದಿನ ತಂಡದ ನಾಯಕತ್ವದಿಂದ ಕೊಹ್ಲಿಗೆ ಕೊಕ್?- ನೂತನ ನಾಯಕನ ನೇಮಕಕ್ಕೆ BCCI ಪ್ಲಾನ್


ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬಿಸಿಸಿಐ, ಸಿದ್ಧತೆಗಳನ್ನ ಆರಂಭಿಸಿದೆ. ಆದ್ರೆ ಅದಕ್ಕೂ ಮುನ್ನ ಬಿಗ್​ಬಾಸ್​ಗಳಿಗೆ, ಸವಾಲೊಂದು ಎದುರಾಗಿದೆ. ವಾರಾಂತ್ಯದಲ್ಲಿ ಆಫ್ರಿಕಾ ಸರಣಿಗೆ ತಂಡವನ್ನ ಪ್ರಕಟಿಸಲಿರುವ ಬಿಸಿಸಿಐ, ವಿರಾಟ್ ಕೊಹ್ಲಿ ಏಕದಿನ ತಂಡದ ನಾಯಕತ್ವದ ಭವಿಷ್ಯವನ್ನೂ ನಿರ್ಧರಿಸುವ ಸಾಧ್ಯತೆ ಹೆಚ್ಚಿದೆ.

ದಕ್ಷಿಣ ಆಫ್ರಿಕಾ ಸರಣಿಗೆ ಕೌಂಟ್​ಡೌನ್ ಶುರುವಾಗಿದೆ. ಒಮಿಕ್ರಾನ್ ವೇರಿಯಂಟ್​​​ ಭೀತಿಯ ನಡುವೆಯೂ, ಟೀಮ್ ಇಂಡಿಯಾ ಆಫ್ರಿಕಾ ಪ್ರವಾಸ ಕೈಗೊಳ್ಳಲು ಮುಂದಾಗಿದೆ. ಆದ್ರೆ ಅದಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ ಕೆಲ ಬದಲಾವಣೆಗಳನ್ನ ಮಾಡಲು, ಬಿಸಿಸಿಐ ಮುಂದಾಗಿದೆ. ಹೌದು, ಟಿ-ಟ್ವೆಂಟಿ ವಿಶ್ವಕಪ್ ನಂತರ ತಂಡಕ್ಕೆ ಕಮ್​ಬ್ಯಾಕ್ ಮಾಡ್ತಿರುವ ವಿರಾಟ್​​ ಕೊಹ್ಲಿಗೆ, ಬಿಗ್​ಬಾಸ್​ಗಳು ಶಾಕ್ ನೀಡೋ ಸಾಧ್ಯತೆ ಇದೆ. ಏಕದಿನ ತಂಡದ ನಾಯಕತ್ವ ತ್ಯಜಿಸಲು ಸೂಚಿಸಲಾಗುತ್ತದೆ ಅಂತ, ಹೇಳಲಾಗ್ತಿದೆ.

ವೈಟ್ ಬಾಲ್ ಕ್ರಿಕೆಟ್​​ಗೆ ನೂತನ ನಾಯಕ..?
ಬಿಸಿಸಿಐ ಈಗಾಗಲೇ ಏಕದಿನ ತಂಡದ ನಾಯಕ ವಿರಾಟ್ ಕೊಹ್ಲಿಯನ್ನ ಕೆಳಗಿಳಿಸಲು, ಸಾಕಷ್ಟು ಚಿಂತನೆ ನಡೆಸ್ತಿದೆ. ಏಕದಿನ ತಂಡದ ನಾಯಕನಾಗಿ ವಿರಾಟ್, ಉತ್ತಮ ಟ್ರ್ಯಾಕ್ ರೆಕಾರ್ಡ್​ ಹೊಂದಿದ್ದಾರೆ. ಆದ್ರೆ ಕೊಹ್ಲಿ, ಐಸಿಸಿಯ ಮೇಜರ್ ಟೂರ್ನಿಗಳನ್ನ ಗೆಲ್ಲಲು ವಿಫಲರಾಗಿದ್ದಾರೆ. ಹೀಗಾಗೇ ಬಿಸಿಸಿಐ, ಕೊಹ್ಲಿಯನ್ನ ಕೆಳಗಿಳಿಸುವ ಬಗ್ಗೆ ಹಲವು ದಿನಗಳಿಂದ ಪ್ಲಾನ್ ಮಾಡುತ್ತಿದೆ. ಕೊಹ್ಲಿ ಬದಲಿಗೆ ಮತ್ತೋರ್ವ ನಾಯಕನನ್ನ, ಏಕದಿನ ತಂಡಕ್ಕೆ ನೇಮಿಸಲು ಉತ್ಸಾಹ ತೋರುತ್ತಿದೆ.​​

2022ರಲ್ಲಿ ಟೀಮ್ ಇಂಡಿಯಾ ಆಡಲಿದೆ 9 ಏಕದಿನ ಪಂದ್ಯಗಳು..!
ವಿರಾಟ್ ಕೊಹ್ಲಿಯನ್ನ ಕೆಳಗಿಳಿಸಲು, ಮತ್ತೊಂದು ಕಾರಣ ಕೂಡ ಇದೆ. ಮುಂದಿನ ವರ್ಷ.. ಅಂದ್ರೆ 2022ರ ಇಂಟರ್​ನ್ಯಾಷನಲ್ ಕ್ರಿಕೆಟ್ ಕ್ಯಾಲೆಂಡರ್​ನಲ್ಲಿ, ಟಿ-ಟ್ವೆಂಟಿ ಪಂದ್ಯಗಳ ಸಂಖ್ಯೆ ಹೆಚ್ಚಾಗಿವೆ. ಮತ್ತೊಂದೆಡೆ ಟೀಮ್ ಇಂಡಿಯಾ ಮುಂದಿನ ವರ್ಷ ಆಡೋದು ಕೇವಲ 9 ಏಕದಿನ ಪಂದ್ಯಗಳನ್ನ ಮಾತ್ರ..! ದಕ್ಷಿಣ ಆಫ್ರಿಕಾ ವಿರುದ್ಧ 3, ಇಂಗ್ಲೆಂಡ್ ವಿರುದ್ಧ 3 ಮತ್ತು ತವರಿನಲ್ಲಿ 3 ಏಕದಿನ ಪಂದ್ಯಗಳನ್ನ ಮಾತ್ರ ಆಡಲಿದೆ. ಹೀಗಾಗಿ, ಕೊಹ್ಲಿಯನ್ನ ಕೆಳಗಿಳಿಸಿ, ನೂತನ ನಾಯಕನನ್ನ ನೇಮಕ ಮಾಡೋದೇ ಬೆಸ್ಟ್ ಅನ್ನೋದು, ಬಿಸಿಸಿಐ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಬಿಸಿಸಿಐನಲ್ಲಿ ಒಂದು ತಂಡ ಕೊಹ್ಲಿ ಪರ…
ಮತ್ತೊಂದು ತಂಡ ರೋಹಿತ್ ಪರ..
ಇನ್ನು ವಿರಾಟ್ ಕೊಹ್ಲಿಯನ್ನ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸೋದು, ಅಷ್ಟು ಸುಲಭವಲ್ಲ. ಯಾಕಂದ್ರೆ ಮಂಡಳಿಯಲ್ಲೇ ಕೆಲವರು, ಕೊಹ್ಲಿ ಪರ ಸ್ಟ್ರಾಂಗ್ ಆಗೇ ಬ್ಯಾಟ್ ಬೀಸ್ತಿದ್ದಾರೆ. ಹಾಗಂತ ಮುಂಬೈ ಲಾಬಿ ಇಲ್ಲ ಅಂತಲ್ಲ..! ರೋಹಿತ್​ ಶರ್ಮಾನೇ ವೈಟ್​​ಬಾಲ್​​ ಕ್ರಿಕೆಟ್​​ನ ಎರಡೂ ಫಾರ್ಮೆಟ್​ಗಳಲ್ಲೂ ನಾಯಕನಾಗಬೇಕು ಅನ್ನೋದು, ಮತ್ತೊಂದು ತಂಡದ ವಾದವಾಗಿದೆ.

ಕೊಹ್ಲಿ ನಾಯಕತ್ವದ ಭವಿಷ್ಯ ನಿರ್ಧರಿಸ್ತಾರೆ ಆ ಇಬ್ಬರು ಬಾಸ್​ಗಳು..
ಬಿಸಿಸಿಐನಲ್ಲಿ ಕೊಹ್ಲಿ ಮತ್ತು ರೋಹಿತ್ ಪರ-ವಿರೋಧ ಲಾಬಿಗಳು ನಡೆಯುತ್ತಿರೋದೇನೋ ನಿಜ. ಆದ್ರೆ ಅಂತಿಮವಾಗಿ ಯಾರಿಗೆ ನಾಯಕತ್ವ ನೀಡಬೇಕು ಅಂತ ನಿರ್ಧಾರ ಮಾಡೋದು, ಆ ಇಬ್ಬರು ಪ್ರಭಾವಿಗಳೇ.! ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ, ನಾಯಕತ್ವದ ಬದಲಾವಣೆ ಬಗ್ಗೆ, ಮುಂದಿನ ದಿನಗಳಲ್ಲಿ ನಿರ್ಧಾರ ಮಾಡಲಿದ್ದಾರೆ.

ದಕ್ಷಿಣ ಆಫ್ರಿಕಾ ಸರಣಿಗೆ ನೂತನ ನಾಯಕನ ಪ್ರಕಟ ಸಾಧ್ಯತೆ..?
ಹೌದು, ಬಿಸಿಸಿಐ ಮೂಲಗಳ ಪ್ರಕಾರ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೇ, ನೂತನ ನಾಯಕನನ್ನ ನೇಮಕ ಮಾಡಲಾಗುತ್ತದೆ ಅಂತ ಹೇಳಲಾಗ್ತಿದೆ. ಆದ್ರೆ ಅಧಿಕಾರಿಗಳು, ಕನ್ಫರ್ಮ್​ ಮಾಡಲು ಹಿಂದೇಟು ಹಾಕ್ತಿದ್ದಾರೆ. ಒಟ್ನಲ್ಲಿ..! ಬಿಸಿಸಿಐ, ಆಯ್ಕೆ ಸಮಿತಿ ಮತ್ತು ಕೋಚ್ ರಾಹುಲ್ ದ್ರಾವಿಡ್​ರ ಮುಂದಿನ ಪ್ಲಾನ್ ಏನು ಅನ್ನೋದು, ಕೆಲವೇ ದಿನಗಳಲ್ಲಿ ಬಯಲಾಗುತ್ತದೆ.

News First Live Kannada


Leave a Reply

Your email address will not be published. Required fields are marked *