ದುಬೈ: ಪುರುಷರ ಏಕದಿನ ಕ್ರಿಕೆಟ್ ನ ರಾಂಕಿಂಗ್ ಇಂದು ಪ್ರಕಟವಾಗಿದೆ. ಇದುವರೆಗೆ ಅಗ್ರಸ್ಥಾನದಲ್ಲಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಪಾಕಿಸ್ಥಾನ ತಂಡದ ನಾಯಕ ಬಾಬರ್ ಅಜಮ್ ಅಗ್ರ ಸ್ಥಾನ ಅಲಂಕರಿಸಿದ್ದಾರೆ.

ಈ ಮೂಲಕ ಬಾಬರ್ ಅಜಮ್ ಏಕದಿನ ಕ್ರಿಕೆಟ್ ನಲ್ಲಿ ಅಗ್ರಸ್ಥಾನಕ್ಕೇರಿದ ಪಾಕಿಸ್ಥಾನದ ನಾಲ್ಕನೇ ಬ್ಯಾಟ್ಸಮನ್ ಎನಿಸಿದರು. ಈ ಮೊದಲು ಜಹೀರ್ ಅಬ್ಬಾಸ್, ಜಾವೆದ್ ಮಿಯಾಂದಾದ್ ಮತ್ತು ಮೊಹಮ್ಮದ್ ಯೂಸುಫ್ ಈ ಸಾಧನೆ ಮಾಡಿದ್ದರು.

ಇದನ್ನೂ ಓದಿ:ಮೊದಲ ಪಂದ್ಯದಲ್ಲಿ ಸೋಲುಂಡ ರಾಜಸ್ಥಾನ್ ಗೆ ಆಘಾತ: ಕೂಟದಿಂದಲೇ ಹೊರಬಿದ್ದ ವಿದೇಶಿ ಆಲ್ ರೌಂಡರ್

ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸರಣಿಯಲ್ಲಿ ಅಜಮ್ ಉತ್ತಮ ಪ್ರದರ್ಶನ ತೋರಿದ್ದರು. ಸರಣಿಯಲ್ಲಿ ಶತಕ ಬಾರಿಸಿದ್ದ ವೇಳೆ ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದಿಂದ 13 ಶತಕ ಬಾರಿಸಿದ್ದ ಆಟಗಾರ ಎಂಬ ದಾಖಲೆ ಬರೆದಿದ್ದರು.

ವಿರಾಟ್ ಕೊಹ್ಲಿ ಅವರು 2017 ಆಗಸ್ಟ್ ನಿಂದ ಇಂದಿನವರೆಗೆ ಅಂದರೆ ಒಟ್ಟು 1258 ದಿನಗಳ ಕಾಲ ಪ್ರಥಮ ಸ್ಥಾನದಲ್ಲಿದ್ದರು.

ಕ್ರೀಡೆ – Udayavani – ಉದಯವಾಣಿ
Read More