ಏಕದಿನ ಸರಣಿ ಗೆದ್ದ ಸೌತ್​​ ಆಫ್ರಿಕಾ.. ಟೀಂ ಇಂಡಿಯಾ ವಿರುದ್ಧ 7 ವಿಕೆಟ್​​ ಭರ್ಜರಿ ಜಯ


ಸೌತ್​​ ಆಫ್ರಿಕಾ ವಿರುದ್ಧ ಪರ್ಲ್​​ನ ಬೊಲ್ಯಾಂಡ್​​​ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ 50 ಓವರ್​ಗಳಲ್ಲಿ 287 ರನ್​​ ಗಳಿಸಿತ್ತು. ಆರು ವಿಕೆಟ್​​ ಕಳೆದುಕೊಂಡು ಸೌತ್​ ಆಫ್ರಿಕಾಗೆ 288 ರನ್​​ ಟಾರ್ಗೆಟ್​ ನೀಡಿತ್ತು. ಈ ಟಾರ್ಗೆಟ್​ ಬೆನ್ನತ್ತಿದ ಸೌತ್​​ ಆಫ್ರಿಕಾ 3 ವಿಕೆಟ್​​ ನಷ್ಟಕ್ಕೆ 48.1 ಓವರ್​​ನಲ್ಲಿ 288 ರನ್​​​ ಗಳಿಸೋ ಮೂಲಕ ಭರ್ಜರಿ ಜಯ ಸಾಧಿಸಿದೆ.

ಭಾರತದ ಪರ ಬ್ಯಾಟಿಂಗ್​​ ಮಾಡಿದ ರಿಷಭ್​​ ಪಂತ್ 85​, ರಾಹುಲ್​ 55, ಶಾರ್ದುಲ್​ ಅಜೇಯ 40 ರನ್​ ಗಳಿಸಿದ್ದಾರೆ. ಇನ್ನು, ಸೌತ್​ ಆಫ್ರಿಕಾ ಪರ ಶಂಸಿ 2 ವಿಕೆಟ್​​ ಕಬಳಿಸಿದ್ಧಾರೆ. ಅಲ್ಲದೇ ಮರ್ಕರಮ್​, ಮಹಾರಾಜ್​, ಮಗಾಲಾಗೆ ತಲಾ 1 ವಿಕೆಟ್​ ಸಿಕ್ಕಿದೆ.

ಇನ್ನು, ಸೌತ್​ ಆಫ್ರಿಕಾ ಪರ ಡಿ ಕಾಕ್​​ 78, ಮಲನ್​​ 91 ರನ್​ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

News First Live Kannada


Leave a Reply

Your email address will not be published. Required fields are marked *