ಏಕದಿನ ಸರಣಿ ಗೆಲ್ಲೋ ಫೇವರಿಟ್ಸ್​ ಟೀಮ್ ಇಂಡಿಯಾ -ಧವನ್​, ಕೊಹ್ಲಿಯ ಪ್ರದರ್ಶನ ನಿರ್ಣಾಯಕ


ಭಾರತ – ಸೌತ್​ ಆಫ್ರಿಕಾ ನಡುವಿನ ಏಕದಿನ ಸರಣಿ ಕೆಲವರಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಈ ಸರಣಿಯಲ್ಲಿ ಅತ್ಯುದ್ಭುತ ಪ್ರದರ್ಶನ ನೀಡಿದ್ರೆ ಮಾತ್ರ ಕ್ರಿಕೆಟ್​ ಕರಿಯರ್​ ಉಳಿಯಲಿದೆ. ಎಡವಿದ್ರೆ ಕರಿಯರ್​ ಖತಂ ಆಗೋದು ಬಹುತೇಕ ಖಚಿತವಾಗಿದೆ.

ಪ್ರತಿಷ್ಠೆ ಟೆಸ್ಟ್​ ಸರಣಿ ಸೋಲಿನ ಬೆನ್ನಲ್ಲೇ ಏಕದಿನ ಸರಣಿ ಮೇಲೆ ಭಾರತ ಕಣ್ಣಿಟ್ಟಿದೆ. ಈ ಸರಣಿ ಗೆದ್ದು ಸೇಡು ತೀರಿಸಿಕೊಳ್ಳಲು ತಯಾರಿ ನಡೆಸ್ತಿದೆ. ಅದಕ್ಕಾಗಿ ಟೀಮ್ ಇಂಡಿಯಾದ ಆಟಗಾರರು ಭರ್ಜರಿ ಸಿದ್ಧತೆ ಕೂಡ ಮಾಡಿಕೊಳ್ತಿದ್ದಾರೆ. ಇದರ ನಡುವೆಯೇ ಪ್ಲೇಯಿಂಗ್​ ಇಲೆವೆನ್​ ಆಯ್ಕೆಯ ಚರ್ಚೆಯೂ ಹುಟ್ಟಿದ್ದು, ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗಿದೆ. ಬಹುತೇಕ ಅನುಭವಿಗಳಿಗೆ ಮಣೆ ಹಾಕೋ ಸಾಧ್ಯತೆ ದಟ್ಟವಾಗಿದ್ದು, ಇದೇ ಅವರಿಗೆ ಕೊನೆಯ ಅವಕಾಶವೂ ಆಗಿರಲಿದೆ ಎಂದು ಹೇಳಲಾಗ್ತಿದೆ.

  • ನಂಬರ್​ 01 -ಶಿಖರ್​ ಧವನ್​

ಕೊನೆ ಅವಕಾಶದ ಪಟ್ಟಿಯಲ್ಲಿ ಮೊದಲ ಹೆಸರು ಇರೋದೇ ಗಬ್ಬರ್​ ಶಿಖರ್​ ಧವನ್​​ರದ್ದು. ಸದ್ಯ ಟಿ20 ಹಾಗೂ ಟೆಸ್ಟ್​ ಕ್ರಿಕೆಟ್​ನಿಂದ ದೂರವಾಗಿರುವ ಧವನ್​ ಫಾರ್ಮ್​​ ಸಮಸ್ಯೆಗೆ ಸಿಲುಕಿದ್ದು, ಲಯ ಕಂಡುಕೊಳ್ಳಲು ಪರದಾಡ್ತಿದ್ದಾರೆ. ಇತ್ತೀಚೆಗೆ ಮುಗಿದ ವಿಜಯ್​ ಹಜಾರೆ ಟೂರ್ನಿಯಲ್ಲೂ ಕಳಪೆ ಪ್ರದರ್ಶನ ನೀಡಿದ್ದಾರೆ. ಆದರೂ ಮಣೆ ಹಾಕಲಾಗಿದ್ದು, ಈ ಪ್ರವಾಸದಲ್ಲಿ ಮತ್ತೆ ವೈಫಲ್ಯ ಅನುಭವಿಸಿದ್ರೆ, ಧವನ್​ಗೆ ಪರ್ಮನೆಂಟ್​ ಗೇಟ್​ ಪಾಸ್​​ ಗ್ಯಾರಂಟಿ ಎನ್ನಲಾಗ್ತಿದೆ.

  • ನಂಬರ್​ 02 -ಭುವನೇಶ್ವರ್​ ಕುಮಾರ್​​​

ಸ್ವಿಂಗ್​ ಮಾಸ್ಟರ್​ ಎಂದೇ ಖ್ಯಾತಿ ಹೊಂದಿದ್ದ ಭುವನೇಶ್ವರ್​ ಕುಮಾರ್​ ಸ್ವಿಂಗ್​ ಎಲ್ಲೂ ವರ್ಕೌಟ್​ ಆಗ್ತಿಲ್ಲ. ಕಳಪೆ ಪ್ರದರ್ಶನದ ಹೊರತಾಗಿಯೂ ಟಿ20 ವಿಶ್ವಕಪ್​​​ಗೆ ಮಣೆ ಹಾಕಲಾಗಿತ್ತು. ಆದ್ರೆ ಅಲ್ಲೂ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ರು. ವಿಶ್ವಕಪ್​ ಮಾತ್ರವಲ್ಲ, ಅದರ ಹಿಂದಿನ ಸರಣಿಗಳಲ್ಲೂ ಭುವಿದು ಇದೇ ಕಥೆ. ಇನ್ನು ವಿಜಯ್​ ಹಜಾರೆಯಲ್ಲೂ ಕಳಪೆ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಆಫ್ರಿಕಾ ಸರಣಿ ಭುವಿ ಪಾಲಿನ ಅಳಿವು-ಉಳಿವಿನ ಸರಣಿಯಾಗಿದೆ.

  • ನಂಬರ್​ 03 -ಆರ್​​.ಅಶ್ವಿನ್​

ಕಳೆದ ಕೆಲ ವರ್ಷಗಳಿಂದ ಟೆಸ್ಟ್​​ಗೆ ಮಾತ್ರ ಸೀಮಿತವಾಗಿದ್ದ ರವಿಚಂದ್ರನ್​ ಅಶ್ವಿನ್, ಇದೀಗ ಸೀಮಿತ ಓವರ್​ಗಳ ತಂಡಕ್ಕೆ ಕಮ್​ಬ್ಯಾಕ್​ ಮಾಡ್ತಿದ್ದಾರೆ. ಆದ್ರೆ, 4 ವರ್ಷ 6 ತಿಂಗಳ ಬಳಿಕ ಏಕದಿನ ಕ್ರಿಕೆಟ್​​​ಗೆ ಮರಳುತ್ತಿರೋ ಅಶ್ವಿನ್​ ಮುಂದೆ, ಸಾಮರ್ಥ್ಯ ಸಾಬೀತು ಪಡಿಸೋ ಅನಿವಾರ್ಯತೆಯಿದೆ. ಇರೋ ಪೈಪೋಟಿಯ ನಡುವೆ ಸ್ಥಾನ ಉಳಿಸಿಕೊಳ್ಳಬೇಕು ಅಂದ್ರೆ, ಪರಿಮಾಣಾತ್ಮಕ ಪ್ರದರ್ಶನ ನೀಡಬೇಕಿದೆ.

  • ನಂಬರ್​ 04 -ಜಯಂತ್​ ಯಾದವ್​

ಆಲ್​​​ರೌಂಡರ್​​​​​ಗಳಾದ ರವೀಂದ್ರ ಜಡೇಜಾ, ಅಕ್ಷರ್​​ ಪಟೇಲ್​ ಇಂಜುರಿ ಹಿನ್ನೆಲೆ ಜಯಂತ್​ ಯಾದವ್​​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದ್ರೆ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳೊದೇ ಅನುಮಾನ. ಸದ್ಯ ಜಯಂತ್​ ತಂಡದ ಪರ ಒಂದು ಆಡಿದ್ದಾರೆ. ಅದು ಕೂಡ 2016ರಲ್ಲಿ. ಬರೋಬ್ಬರಿ 5 ವರ್ಷಗಳ ನಂತರ ತಂಡಕ್ಕೆ ಮರಳುತ್ತಿರುವ ಜಯಂತ್​​, ಒಂದು ವೇಳೆ ಅವಕಾಶ ಪಡೆದುಕೊಂಡ್ರೆ ತನ್ನನ್ನು ತಾನು ಪ್ರೂವ್​ ಮಾಡಿಕೊಳ್ಳಲೇಬೇಕು. ಆಗ ಮಾತ್ರ ಸ್ಥಾನ ಭದ್ರಪಡಿಸಿಕೊಳ್ಳೋಕೆ ಸಾಧ್ಯ.

ತಂಡದಲ್ಲಿ ಯುವ ಆಟಗಾರರು ಹಾಗೂ ಅನುಭವಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಹಾಗಾಗಿ ಈ ನಾಲ್ವರು ಆಟಗಾರರಿಗೆ ತಂಡದಲ್ಲಿ ಖಾಯಂ ಸ್ಥಾನ ಬೇಕಂದ್ರೆ, ಅತ್ಯದ್ಭುತ ಪ್ರದರ್ಶನ ನೀಡೋದು ಅನಿವಾರ್ಯ.

News First Live Kannada


Leave a Reply

Your email address will not be published. Required fields are marked *