ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ? | Kannadathi Serial Update Saniya Hamulated In Hospital


ಸಾನಿಯಾಳನ್ನು ರತ್ನಮಾಲಾ ಆಸ್ಪತ್ರೆಯಲ್ಲೇ ಬಿಟ್ಟು ಬಂದಿದ್ದಳು. ಇಷ್ಟೆಲ್ಲ ಘಟನೆ ನಡೆಯೋಕೆ, ಅವಮಾನ ಆಗೋಕೆ ರತ್ನಮಾಲಾನೇ ಕಾರಣ ಎಂಬ ಅಭಿಪ್ರಾಯ ಸಾನಿಯಾದ್ದು. ಈ ಕಾರಣಕ್ಕೆ ಮನೆಗೆ ಬಂದ ಸಾನಿಯಾ ರತ್ನಮಾಲಾ ವಿರುದ್ಧ ಸಿಡಿದೇಳಬಹುದು.

ಕನ್ನಡತಿ (Kannadathi Serial) ಧಾರಾವಾಹಿಯಲ್ಲಿ ರತ್ನಮಾಲಾ (Ratnamala) ಶಿಕ್ಷಣ ಸಂಸ್ಥೆಗೆ ಸಾನಿಯಾ ಎಂಡಿ ಆಗಿದ್ದಾಳೆ. ಈ ಎಂಡಿ ಮಟ್ಟವನ್ನು ಆಕೆ ಪಡೆದುಕೊಂಡಿದ್ದು ಹೇಗೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಕಾರಣಕ್ಕೆ ಆಕೆಗೆ ಯಾರೂ ಹೆಚ್ಚಿನ ಗೌರವ ಕೊಡುತ್ತಿಲ್ಲ. ಎಲ್ಲರೂ ಆಕೆಯನ್ನು ನಿಕೃಷ್ಟವಾಗಿ ನೋಡುತ್ತಾರೆ. ಈ ವಿಚಾರ ಸಾನಿಯಾಗೂ ಗೊತ್ತಿದೆ. ಆದರೆ, ಏನೂ ಮಾಡಲಾಗದ ಸ್ಥಿತಿಯಲ್ಲಿ ಅವಳಿದ್ದಾಳೆ. ಇತ್ತೀಚೆಗಂತೂ ಸಾನಿಯಾ (Saniya) ಸ್ಥಿತಿ ಹಲ್ಲು ಕಿತ್ತ ಹಾವಿನಂತೆ ಆಗಿದೆ. ಈ ಮಧ್ಯೆ ಸಾನಿಯಾ ತೀವ್ರ ಅವಮಾನ ಎದುರಿಸುವಂತಾಗಿದೆ. ಏಕವಚನದಲ್ಲಿ ಬೈಸಿಕೊಂಡಿದ್ದಾಳೆ. ಆಸ್ಪತ್ರೆಯಲ್ಲೇ ಮಲಗಿ ರಾತ್ರಿ ಕಳೆದಿದ್ದಾಳೆ. ಕೊನೆಗೆ ಆಟೋ ಡ್ರೈವರ್​ನಿಂದಲೂ ಸಾನಿಯಾ ಅವಮಾನ ಎದುರಿಸುವಂತಾಗಿದೆ.

ರತ್ನಮಾಲಾಳನ್ನು ನೆಲಕ್ಕೆ ಬೀಳಿಸೋದು ಸಾನಿಯಾ ಪ್ಲ್ಯಾನ್ ಆಗಿತ್ತು. ಆದರೆ, ತಾನೇ ತೋಡಿದ ಹೊಂಡದಲ್ಲಿ ಸಾನಿಯಾ ಬಿದ್ದಿದ್ದಳು. ನೆಲದಮೇಲೆ ಚೆಲ್ಲಿದ ಎಣ್ಣೆಗೆ ಕಾಲು ತಾಕಿ ಅವಳೇ ಬಿದ್ದಳು. ತಲೆಗೆ ಏಟು ಬಿದ್ದಿತ್ತು. ಈ ಕಾರಣಕ್ಕೆ ರತ್ನಮಾಲಾ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಳು. ಆದರೆ, ಆಕೆಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಅರ್ಧದಲ್ಲೇ ಮನೆಗೆ ಬಂದಿದ್ದಾಳೆ ರತ್ನಮಾಲಾ. ಮೊಬೈಲ್​ ಅನ್ನು ಸಾನಿಯಾ ಮನೆಯಲ್ಲೇ ಬಿಟ್ಟಿದ್ದರಿಂದ ಆಸ್ಪತ್ರೆಯಲ್ಲಿ ಆಕೆ ಒಂಟಿಯಾಗಿ ಉಳಿಯುವ ಪರಿಸ್ಥಿತಿ ಬಂತು.

ಸಾನಿಯಾ ಬಳಿ ಹಣ ಇರಲಿಲ್ಲ. ಯುಪಿಐ ಪೇಮೆಂಟ್ ಮಾಡೋಣ ಎಂದರೆ ಮೊಬೈಲ್ ಕೂಡ ಇರಲಿಲ್ಲ. ಹಾಗಿದ್ದರೂ ಕೂಡ ಸಾನಿಯಾ ಆಸ್ಪತ್ರೆಯ ಸಿಬ್ಬಂದಿ ಜತೆ ಜೋರು ಧ್ವನಿಯಲ್ಲಿ ಮಾತನಾಡಿದ್ದಾಳೆ. ಅವಳ ಧಿಮಾಕಿನ ಮಾತನ್ನು ಕಂಡು ಅಲ್ಲಿನ ಸಿಬ್ಬಂದಿ ಬೇಸರಗೊಂಡರು. ಜತೆಗೆ ಇವಳಿಗೆ ಪಾಠ ಕಲಿಸಬೇಕು ಎಂಬ ಹಠಕ್ಕೆ ಬಿದ್ದರು.

‘ನಾನು ಯಾರು ಅನ್ನೋದು ಗೊತ್ತಾ? ನಾನು ಮನಸ್ಸು ಮಾಡಿದರೆ ಈ ಆಸ್ಪತ್ರೆಯನ್ನು ಖರೀದಿ ಮಾಡಿಬಿಡುತ್ತೇನೆ. ನನ್ನ ಜತೆ ನೀವು ಈ ರೀತಿ ಮಾತಾಡ್ತೀರಲ್ಲ’ ಎಂದು ಆಸ್ಪತ್ರೆಯ ಸಿಬ್ಬಂದಿಗೆ ಆವಾಜ್ ಹಾಕಿದಳು ಸಾನಿಯಾ. ಆದರೆ, ಸಾನಿಯಾ ಮಾತನ್ನು ಕೇಳುವ ತಾಳ್ಮೆ ಅಲ್ಲಿ ಯಾರಿಗೂ ಇರಲಿಲ್ಲ. ಆಸ್ಪತ್ರೆಯ ಲ್ಯಾಂಡ್​ಲೈನ್​ನಿಂದ ಮನೆಗೆ ಕರೆ ಮಾಡುವ ಅವಕಾಶವನ್ನೂ ಅವಳಿಗೆ ಆಸ್ಪತ್ರೆ ಸಿಬ್ಬಂದಿ ನೀಡಲಿಲ್ಲ. ಹೀಗಾಗಿ ರಾತ್ರಿ ಇಡೀ ಸಾನಿಯಾ ಆಸ್ಪತ್ರೆಯಲ್ಲೇ ಕಳೆದಿದ್ದಾಳೆ.

TV9 Kannada


Leave a Reply

Your email address will not be published.