ಚಿತ್ರದುರ್ಗ: ಜಿಲ್ಲೆಯ ಮುದ್ದಾಪುರ ಗ್ರಾಮದ ಮನೆಯೊಂದರ ಅಡುಗೆ ಮನೆಗೆ ಏಕಾಏಕಿ ಚಿರತೆ ನುಗ್ಗಿದ ಘಟನೆ ನಡೆದಿದೆ. ಮನೆ ಮಂದಿಯೆಲ್ಲಾ ಅಂಗಳದಲ್ಲಿ ಕೆಲಸ ಮಾಡುತ್ತಿರುವಾಗ, ಚಿರತೆ ಮನೆಯೊಳಗೆ ನುಗ್ಗಿ ಅಡುಗೆ ಮನೆಯ ಶೆಲ್ಫ್​ ಮೇಲೇರಿ ಕುಳಿತಿತ್ತು.

ಚಿರತೆ ಮನೆಯೊಳಗೆ ನುಗ್ಗಿದ ತಕ್ಷಣ ಮಾಲೀಕರು ಬಾಗಿಲು ಹಾಕಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.  ಚಿರತೆಯನ್ನ ನೋಡಲು ಸುತ್ತಮುತ್ತಲ ನಿವಾಸಿಗಳು ತಂಡೋಪತಂಡವಾಗಿ ನೆರೆದಿದ್ದರು. ಕೊರೊನಾ ಭೀತಿಯ ನಡುವೆಯೂ ದೈಹಿಕ ಅಂತರ ಕಾಪಾಡದೇ ಚಿರತೆ ನೋಡಲು ಮುಗಿಬಿದ್ದಿದ್ದರು.

ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ, ಮನೆ ಬಾಗಿಲ ಬಳಿ ಬೋನ್ ಇರಿಸಿ ಕಾರ್ಯಾಚರಣೆ ನಡೆಸಿದ್ದು, ಕೊನೆಗೂ ಚಿರತೆಯನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಚಿರತೆ ಸೆರೆಯಿಂದ  ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

 

The post ಏಕಾಏಕಿ ಅಡುಗೆಮನೆಗೆ ನುಗ್ಗಿ ಆತಂಕ ಹುಟ್ಟಿಸಿದ ಚಿರತೆ appeared first on News First Kannada.

Source: newsfirstlive.com

Source link