1/5
ಬಹುನಿರೀಕ್ಷಿತ ‘ಏಕ್ ಲವ್ ಯಾ’ ಸಿನಿಮಾವನ್ನು ವೀಕ್ಷಿಸಲು ರಾಜಕೀಯದ ಹಲವು ಮುಖಂಡರಿಗೆ ಪ್ರೇಮ್ ಆಹ್ವಾನ ನೀಡಿದ್ದಾರೆ. ಖುದ್ದಾಗಿ ಭೇಟಿ ನೀಡಿ ಅನೇಕರನ್ನು ಅವರು ಆಹ್ವಾನಿಸಿದ್ದಾರೆ.
2/5
ಕನ್ನಡ ಚಿತ್ರರಂಗಕ್ಕೆ ಕರ್ನಾಟಕ ಸರ್ಕಾರ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೂ ಗುಚ್ಛ ನೀಡುವ ಮೂಲಕ ಪ್ರೇಮ್ ಅವರು ಆತ್ಮೀಯವಾಗಿ ಆಹ್ವಾನ ನೀಡಿದ್ದಾರೆ.
3/5
ರಾಜಕೀಯದ ಅನೇಕ ಗಣ್ಯರ ಜೊತೆಗೆ ಪ್ರೇಮ್ ಅವರಿಗೆ ಒಡನಾಟ ಇದೆ. ಅವರೆಲ್ಲರೂ ಬಂದು ತಮ್ಮ ಸಿನಿಮಾ ವೀಕ್ಷಿಸಲಿ ಎಂಬುದು ಪ್ರೇಮ್ ಆಸೆ. ಅದಕ್ಕಾಗಿ ಫೆ.23ರಂದು ವಿಶೇಷ ಪ್ರದರ್ಶನವನ್ನು ಅವರು ಏರ್ಪಡಿಸಲಿದ್ದಾರೆ.