ಬೆಂಗಳೂರು: ಬೆಳಗಾವಿ ಲೋಕಸಭಾ ಉಪಚುನಾವಣೆಯ ಮತ ಎಣಿಕೆ ಕಾರ್ಯ ಸಾಗುತ್ತಿದ್ದು, ಕಾಂಗ್ರೆಸ್​ ಹಾಗೂ ಬಿಜೆಪಿ ಅಭ್ಯರ್ಥಿಗಳು ಗೆಲುವಿಗಾಗಿ ಭಾರೀ ಪೈಪೋಟಿ ನಡೆಸಿದ್ದಾರೆ. ಪ್ರತಿಯೊಂದು ಬೂತ್​​ ಮತ ಎಣಿಕೆಯ ಬಳಿಕವೂ ಎರಡೂ ಪಕ್ಷಗಳ ಸ್ಪರ್ಧಿಗಳ ನಡುವೆ ಪೈಪೋಟಿ ಮುಂದುವರೆದಿದೆ. ಫಲಿತಾಂಶ ಏನಾಗುತ್ತೆ ಎಂಬ ಕುತೂಹಲ ಹಾಗೂ ಲೆಕ್ಕಾಚಾರಗಳು ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ನಡೆಯುತ್ತಿದೆ. ಈ ನಡುವೆಯೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ ಕರೆ ಮಾಡಿ ಮತ ಎಣಿಕೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಸತೀಶ್​ ಜಾರಕಿಹೊಳಿ ಅವರಿಗೆ ಕರೆ ಮಾಡಿರುವ ಸಿದ್ದರಾಮಯ್ಯ ಅವರು, ಏನಯ್ಯಾ? ಸತೀಶ್.. ಫಲಿತಾಂಶ ನೋಡ್ತಿದ್ರೆ ಟೆನ್ಶನ್ ಕೊಡ್ತಿದ್ಯಾ..? ಹೇಗಿದೆ ಅಲ್ಲಿ..? ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಿರುವ ಸತೀಸ್​ ಜಾರಕಿಹೊಳಿ ಅವರು, ತೊಂದರೆ ಇಲ್ಲ ಸರ್ 30,000 ಮತಗಳ ಲೀಡ್​​​ನಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಡೋಂಟ್ ವರಿ.. ಟೆನ್ಶನ್ ಮಾಡ್ಕೊಬೇಡ, ಗೆಲುವು ನಮ್ದೇ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಕ್ಷೇತ್ರದ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಕಾಂಗ್ರೆಸ್​ ಪಕ್ಷದ ಅಭ್ಯರ್ಥಿ ಸತೀಸ್​ ಜಾರಿ ಹೊಳಿ 3,84,883 ಮತಗಳನ್ನು ಪಡೆದುಕೊಂಡಿದ್ದು, ಬಿಜೆಪಿ ಅಭ್ಯರ್ಥಿ ಮಂಗಲ ಸುರೇಶ್​ ಅಂಗಡಿ ಅವರು 3,80,247 ಮತ ಪಡೆದುಕೊಂಡಿದ್ದಾರೆ. ಆ ಮೂಲಕ ಸತೀಸ್​ 4,636 ಮತಗಳೊಂದಿಗೆ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ.

The post ‘ಏನಯ್ಯಾ.. ಫಲಿತಾಂಶ ನೋಡ್ತಿದ್ರೆ ಟೆನ್ಶನ್ ಕೊಡ್ತಿದ್ಯಾ..’- ಸತೀಶ್​​ ಜಾರಕಿಹೊಳಿಗೆ ಸಿದ್ದರಾಮಯ್ಯ ಕರೆ appeared first on News First Kannada.

Source: newsfirstlive.com

Source link