T20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಕನಸು, ಬಹುತೇಕ ಭಗ್ನಗೊಂಡಿದೆ. ಇದರೊಂದಿಗೆ ಕೊಹ್ಲಿ ಪಡೆ ವಿಶ್ವಕಪ್ ಗೆಲ್ಲಬೇಕೆಂಬ ಕೋಟ್ಯಾಂತರ ಅಭಿಮಾನಿಗಳ ಕನಸು, ನುಚ್ಚುನೂರಾಗಿದೆ. ಇದಕ್ಕೆ ಕಾರಣ ಸ್ಟಾರ್ ಆಟಗಾರರ ವೈಫಲ್ಯ. ಅದ್ರಲ್ಲೂ ಆ ಒಬ್ಬ ಆಟಗಾರನ ಮೇಲೆ ನಿರೀಕ್ಷೆ ಬೆಟ್ಟವನ್ನೇ ಕಟ್ಟಿದ್ದರೂ, ಆತ ತಂಡದ ಕೈ ಹಿಡಿಯಲೇ ಇಲ್ಲ. ಹೀಗೆ ಅನ್ಯ ಹೊಗಳಿಕೆಗೆ ಪಾತ್ರರಾಗಿದ್ದ ಆ ಆಟಗಾರ ಯಾರು ಅಲ್ಲ. ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ.
ಐಪಿಎಲ್ನಲ್ಲಿ ಜಾದೂ ಮಾಡಿದ್ದ ಈ ಮಿಸ್ಟ್ರಿ ಸ್ಪಿನ್ನರ್, ಟಿ20 ವಿಶ್ವಕಪ್ನಲ್ಲಿ ಪರಿಣಾಮವನ್ನೇ ಬೀರಲಿಲ್ಲ. ಟೀಮ್ ಇಂಡಿಯಾದ ಯಶಸ್ಸಿನ ಮಂತ್ರವಾಗ್ತಾರೆ ಅಂತ ಊಹಿಸಿದ್ದೇವೋ..? ಆ ಆಟಗಾರನೇ ವಿಕೆಟ್ ಲೆಸ್ ಪರ್ಫಾಮೆನ್ಸ್ ನೀಡಿದ್ದಾರೆ ಅನ್ನೋದನ್ನ ಹೇಳಬೇಕಿಲ್ಲ..
ವರುಣ್ ಚಕ್ರವರ್ತಿಯನ್ನ ಬಿಟ್ಟು ಮುಂದೆ ಸಾಗಬೇಕಿದೆ ಟೀಮ್ ಇಂಡಿಯಾ
ವಿಶ್ವಕಪ್ನ ಎರಡೇ ಎರಡು ಪಂದ್ಯಗಳ ವೈಫಲ್ಯದಿಂದ, ಈ ಮಿಸ್ಟ್ರಿ ಸ್ಪಿನ್ನರ್ ಚಕ್ರವರ್ತಿಯನ್ನ ಕೈಬಿಡಬೇಕಾ.? ಎಂಬುವುದು ನಿಮ್ಮ ಪ್ರಶ್ನೆಯಾಗಿರಬಹುದು. ಅದಕ್ಕೆ ಎಲ್ಲರ ಉತ್ತರ, ಹೌದು ಎನ್ನೋದೇ ಆಗಿದೆ. ಇದು ಜಸ್ಟ್ ಎರಡು ಪಂದ್ಯಗಳ ಪ್ರದರ್ಶನದಿಂದ ಮಾತ್ರವೇ ಹೇಳ್ತಿರೋ ಮಾತಲ್ಲ. ಇದಕ್ಕೆ ಕಾರಣಗಳೂ ಇವೆ. ಸ್ಪಿನ್ ಸ್ನೇಹಿ ಪಿಚ್ಗಳಲ್ಲಿ ಬಿಟ್ಟರೇ ವರುಣ್, ಇತರೆ ಟ್ರ್ಯಾಕ್ನಲ್ಲಿ ಪರಿಣಾಮಕಾರಿ ಬೌಲರ್ ಅಲ್ಲವೇ ಅಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಐಪಿಎಲ್ ಟೂರ್ನಿಯೇ ಆಗಿದೆ. ಅಷ್ಟೇ ಅಲ್ಲ, ವರುಣ್ ಇಂಜುರಿ ಮೇಲೆ ಇಂಜುರಿ ಆಗ್ತಿರೋದು, ಇವ್ರ ಫಿಟ್ನೆಸ್ ಸಮಸ್ಯೆಯನ್ನ ಪ್ರಶ್ನಿಸುವಂತಾಗಿದೆ.
ಮಿಸ್ಟ್ರಿ ಸ್ಪಿನ್ನರ್ ಚಕ್ರವರ್ತಿ ಪದೇ ಪದೇ ಅನ್ಫಿಟ್ ಆಗ್ತಾರೆ..!
ಹೌದು..! ಓರ್ವ ಕ್ರಿಕೆಟಿಗನಿಗೆ ಮನೋ ಸಾಮರ್ಥ್ಯದ ಜೊತೆಗೆ, ಫಿಟ್ನೆಸ್ ಬಹುಮುಖ್ಯ. ಆದ್ರೆ ವರುಣ್ ಚಕ್ರವರ್ತಿ ಇದಕ್ಕೆ ಭಿನ್ನವಾಗಿ ನಿಲ್ತಾರೆ.. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಒಂದೇ ವರ್ಷದೊಳಗೆ 4 ಬಾರಿ ಇಂಜುರಿಗೆ ತುತ್ತಾಗಿರದಾಗಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದಾಗ ಭುಜದ ಗಾಯದಕ್ಕೆ ತುತ್ತಾಗಿದ್ದರು. ಇಂಗ್ಲೆಂಡ್ ವಿರುದ್ಧದ ಹೋಮ್ ಸಿರೀಸ್ ವೇಳೆ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ನಂತರ ಐಪಿಎಲ್ ಸೀಸನ್-14ರಲ್ಲಿ ಮಂಡಿನೋವಿನಲ್ಲೇ ಬೌಲಿಂಗ್, ಫೀಲ್ಡಿಂಗ್ ಮಾಡಿದ್ದಾಗಿದೆ. ಇದೆಲ್ಲವೂ ಆಗಿದ್ದು, ಜಸ್ಟ್ ಒಂದು ವರ್ಷದಲ್ಲೇ.
ಈಗ ವಿಶ್ವಕಪ್ ಟೂರ್ನಿಯಲ್ಲೂ ಕಾಫ್ (calf) ಮಸಲ್ ಇಂಜುರಿಯಿಂದಲೇ ಬಳಲುತ್ತಿದ್ದಾರೆ. ಹೀಗಾಗಿಯೇ ಟೀಮ್ ಮ್ಯಾನೇಜ್ಮೆಂಟ್ಗೆ ತಲೆನೋವಾಗಿ ಮಾರ್ಪಡುತ್ತಿರುವ ವರುಣ್ ಬದಲಿಗೆ, ಮತ್ತೋರ್ವ ಯಂಗ್ ಟ್ಯಾಲೆಂಟೆಡ್ ಸ್ಪಿನ್ನರ್ಗಳ ಜೊತೆ ಮುನ್ನಡೆಯಬೇಕಾದ ಅಗತ್ಯತೆ ಟೀಮ್ ಇಂಡಿಯಾಕ್ಕಿದೆ. ಆದ್ರೆ ಬಿಸಿಸಿಐ ಮತ್ತು ಸೆಲೆಕ್ಷನ್ ಕಮಿಟಿ, ಅನ್ಫಿಟ್ ವರುಣ್ ಚಕ್ರವರ್ತಿ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
The post ‘ಏನಾಗಲಿ ಮುಂದೆ ಸಾಗು ನೀ..’ ಅನ್ಫಿಟ್ ಇರೋರ ಬಗ್ಗೆ ತಜ್ಞರ ಸಲಹೆ ಏನು ಗೊತ್ತಾ..? appeared first on News First Kannada.