ಬೆಂಗಳೂರು: ಲಾಕ್​ಡೌನ್ ಮಧ್ಯೆಯೂ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಟ್ರಾಫಿಕ್ ಜಾಮ್ ಉಂಟಾಗಿದೆ. ಕೆಲವೇ ದಿನಗಳಲ್ಲಿ ಸರ್ಕಾರ ಲಾಕ್​ಡೌನ್ ಸಡಿಲಿಕೆ ಮಾಡುತ್ತೆ ಅಂದಿದ್ದಕ್ಕೋ ಏನೋ ಸಾವಿರಾರು ವಾಹನಗಳು ಇಂದು ರಸ್ತೆಗಿಳಿದಿವೆ. ಈ ಪರಿಣಾಮ ಎಂಟನೇ ಮೈಲಿ ಹಾಗೂ ದಾಸರಹಳ್ಳಿಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.

ಇನ್ನು ಟ್ರಾಫಿಕ್ ಜಾಮ್ ಮಧ್ಯೆ ಸಿಲುಕಿದ ಆ್ಯಂಬುಲೆನ್ಸ್​ ಒಂದು ಸುಮಾರು 10 ನಿಮಿಷಗಳ ಕಾಲ ಟ್ರಾಫಿಕ್​ನಿಂದ ಹೊರಬರಲು ಪರದಾಡುವಂತಾಯ್ತು. ನಂತರ ಫ್ಲೈ ಓವರ್ ಬ್ಯಾರಿಕೇಡ್ ತೆಗೆದು ಆ್ಯಂಬುಲೆನ್ಸ್​ಗೆ ದಾರಿ ಮಾಡಿಕೊಡಲಾಯ್ತು.

The post ಏನಾಗಿದೆ ಈ ನಗರಕ್ಕೆ..? ಲಾಕ್​ಡೌನ್ ಮಧ್ಯೆಯೂ ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ appeared first on News First Kannada.

Source: newsfirstlive.com

Source link