‘ಏನಾದ್ರು ಪರ್ಸನಲ್​ ಅಂತಾ ಅನ್ನಿಸಿತಾ’..? ದಿವ್ಯಾಳನ್ನ ಮತ್ತೆ ಕೆಣಕಿದ ಪ್ರಶಾಂತ್

‘ಏನಾದ್ರು ಪರ್ಸನಲ್​ ಅಂತಾ ಅನ್ನಿಸಿತಾ’..? ದಿವ್ಯಾಳನ್ನ ಮತ್ತೆ ಕೆಣಕಿದ ಪ್ರಶಾಂತ್

ಶುಭಾ ಅವರು ಮಾಡಿಸಿದ ಸಂಧಾನ ಯಾಕೋ ವರ್ಕೌಟ್​ ಆದಂತೆ ಕಾಣುತ್ತಿಲ್ಲ. ಡಿಗ್ರಿ ಕಾಲೇಜ್​ ಚಿತ್ರದ ಕುರಿತು ಮಾತನಾಡಬೇಡಿ ಎಂದು ಶುಭಾ ಪ್ರಶಾಂತ್​ ಅವರಿಗೆ ವಾರ್ನ್​ ಮಾಡಿದ್ದರು. ಆದ್ರೆ ಮತ್ತೆ ಪ್ರಶಾಂತ್​ ಈ ಕುರಿತು ದಿವ್ಯಾ ಸುರೇಶ್​ಗೆ ಟಾಂಟ್​ ಮಾಡಿದ್ದಾರೆ.

ಹೌದು, ​ಶುಭಾ ಅವರು ಬಂದು ಇನ್ಮುಂದೆ ವೈಯಕ್ತಿಕವಾಗಿ ಮಾತನಾಡಬೇಡಿ ಎಂದು ಹೇಳಿದರು ಎಂದು ಪ್ರಶಾಂತ್​ ಹಾಗೂ ಚಂದ್ರಚೂಡ್ ಕಿಚನ್​ ಏರಿಯಾದಲ್ಲಿ ಶಮಂತ್​ ಮತ್ತು ಅರವಿಂದ ಅವರ ಮುಂದೆ ನಡೆದ ವಿಚಾರ ಹೇಳುತ್ತಾರೆ. ಇಷ್ಟಕ್ಕೇ ನಿಲ್ಲಿಸದ ಪ್ರಶಾಂತ್​ ಹೊಸ ತಂತ್ರ ಮಾಡ್ತೀನಿ ಇರಿ ಎನ್ನುತ್ತಾರೆ.

ಅಲ್ಲಿಂದ ದಿವ್ಯಾ ಉರುಡುಗ ಮತ್ತು ದಿವ್ಯಾ ಸುರೇಶ್​ ಕಿಚನ್​ನಲ್ಲಿ ಇದ್ದ ಸಮಯದಲ್ಲಿ ಪ್ರಾಶಾಂತ್​ ಸೀದಾ ಬಂದವರೇ ದಿವ್ಯಾ ಉರುಡುಗ ಅವರನ್ನು ನಿನ್ನ ಹುಲಿರಾಯ ಸಿನಿಮಾ ಯಾವಾಗ ರಿಲೀಸ್​ ಆಗಿದ್ದು ಎನ್ನುತ್ತಾರೆ. ಅದಕ್ಕೆ ಉತ್ತರಿಸಿದ ದಿವ್ಯಾ 2017ರಲ್ಲಿ ಎನ್ನುತ್ತಾರೆ. ಇದಕ್ಕೆ ಪ್ರಶಾಂತ್​ ಮತ್ತೆ ನಿನ್ನ ಸಿನಿಮಾ ಬಗ್ಗೆ ಕೇಳಿದ್ದು ನಿಂಗೆ ಬೇಜಾರಾಯ್ತಾ? ಏನಾದ್ರು ಪರ್ಸನಲ್​ ಅಂತಾ ಅನ್ನಿಸಿತಾ ಎಂದು ಕೇಳಿ ದಿವ್ಯಾ ಸುರೇಶ್​ ಅವರಿಗೆ ಪರೋಕ್ಷವಾಗಿ ಟಾಂಟ್​ ನೀಡುತ್ತಾರೆ.

ಇಷ್ಟಕ್ಕೇ ನಿಲ್ಲಿಸದ ಪ್ರಶಾಂತ್​ ದಿವ್ಯಾ ಉರುಡುಗರನ್ನು ಅಪ್ಪಿ ನಿನಗೆ ಏನೇ ತೊಂದರೆ ಇದ್ದರೂ ಹೇಳು ನಾನು ನಿನ್ನ ಬೆನ್ನಿಗೆ ನಿಲ್ಲುತ್ತೇನೆ ಎನ್ನುತ್ತಾರೆ. ಒಟ್ಟಾರೆ ಅವರ ಉದ್ದೇಶ ದಿವ್ಯಾ ಸುರೇಶ್​ ಅವರನ್ನು ಹಂಗಿಸುವುದಾಗಿತ್ತು ಎಂಬುವುದು ಬಹಿರಂಗವಾಗದೇ ಉಳಿದಿಲ್ಲ.

The post ‘ಏನಾದ್ರು ಪರ್ಸನಲ್​ ಅಂತಾ ಅನ್ನಿಸಿತಾ’..? ದಿವ್ಯಾಳನ್ನ ಮತ್ತೆ ಕೆಣಕಿದ ಪ್ರಶಾಂತ್ appeared first on News First Kannada.

Source: newsfirstlive.com

Source link