‘ಏನೋ ಮಚ್ಚು ಹಿಡ್ಕೊಂಡು ಓಡಾಡೋದು ಫ್ಯಾಶನ್​ ನಾ..’ ರೌಡಿಶೀಟರ್​​ಗಳಿಗೆ ಪೊಲೀಸರ ಖಡಕ್ ವಾರ್ನಿಂಗ್​


ಕಲಬುರಗಿ: ಒಂದೇ ಒಂದು ಮರ್ಡರ್​.. ಇಡೀ ಕಲಬುರಗಿ ಜನರನ್ನ ಬೆಚ್ಚಿ ಬೀಳಿಸಿತ್ತು. ಹಾಡಹಗಲೇ ಯುವಕನ ಬರ್ಬರ ಕೊಲೆ ಜಿಲ್ಲೆಯಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿತ್ತು. ಇದೀಗ ಎಚ್ಚೆತ್ತಿರೋ ಪೊಲೀಸರು ರೌಡಿಗಳನ್ನ ಕರೆಸಿ ಎಚ್ಚರಿಕೆ ಕೊಟ್ಟಿದ್ದಾರೆ.

ಮೊನ್ನೆಯಷ್ಟೇ ಕಲಬುರಗಿಯ ನಡುರಸ್ತೆಯಲ್ಲಿ ಹಾಡಹಗಲೇ ಯುವಕನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೇಂದ್ರ ಬಸ್ ​ನಿಲ್ದಾಣದ ಸಮೀಪ ನಡೆದ ಭೀಕರ ಮರ್ಡರ್​ ಮೊಬೈಲ್‌ನಲ್ಲಿ ಸೆರೆಯಾಗಿತ್ತು. ಇದೇ ಕಾರಣಕ್ಕೆ ಕಲಬುರಗಿ ಪೊಲೀಸರು ಇವತ್ತು ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಮರ್ಡರ್​ಗೆ ಪ್ರತಿಕಾರ ತೀರಿಸಕೊಳ್ಳಲು ಮತ್ತೊಂದು ಅಟ್ಯಾಕ್​ ನಡೆಯೋ ಸೂಚನೆ ಹಿನ್ನೆಲೆ, ಡಿಸಿಪಿ ಶ್ರೀನಿವಾಸುಲು ನೇತೃತ್ವದಲ್ಲಿ ರೌಡಿಗಳ ಮನೆ ಮೇಲೆ ರೇಡ್​ ಮಾಡಲಾಗಿದೆ. ಬಳಿಕ ಐವತ್ತಕ್ಕೂ ಹೆಚ್ಚು ರೌಡಿಗಳನ್ನ ಕರೆತಂದು ಪೊಲೀಸರು ಪರೇಡ್ ನಡೆಸಿದ್ರು.

ಇವತ್ತಿಗಷ್ಟೇ ಅಲ್ಲ ಇನ್ಮುಂದೆ ಕೂಡ ಈ ಕಾರ್ಯಾಚರಣೆ ನಡೆಸಲಾಗುತ್ತೆ. ಅದಕ್ಕಾಗಿ ವಿಶೇಷ ತಂಡ ಕೂಡ ರಚನೆಯಾಗಿದೆ ಅಂತಾ ಡಿಸಿಪಿ ಹೇಳಿದ್ದಾರೆ. ಕಲಬುರಗಿ ನಗರ ವ್ಯಾಪ್ತಿಯಲ್ಲಿ ಕ್ರಿಮಿನಲ್​ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಎಲ್ಲಾ ಪೊಲೀಸ್​ ಠಾಣಾ ವ್ಯಾಪ್ತಿಗಳಲ್ಲಿ ರೌಡಿಶೀಟರ್​ಗಳ ನಿವಾಸದ ಮೇಲೆ ದಿಢೀರ್​ ದಾಳಿ ನಡೆಸಿದ್ದೇವು. ಈ ವೇಳೆ ತಲೆಮರೆಸಿಕೊಂಡಿದ್ದ ಕೆಲವು ಆರೋಪಿಗಳು, ಮಾರಕಾಸ್ತ್ರಗಳು ದೊರೆತಿದೆ. ಇನ್ನು ಅಪರಾಧ ಚಟುವಟಿಕೆ ಹಿನ್ನೆಲೆ ಹೊಂದಿರೋವವರಿಗೆ ಠಾಣೆಗೆ ಕರೆದು ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ನಡುರಸ್ತೆಯಲ್ಲಿ ಕೊಲೆಯಾದ ಬಳಿಕ ಕಲಬುರಗಿ ಪೊಲೀಸರು ಫುಲ್​ ಅಲರ್ಟ್ ಆಗಿದ್ದಾರೆ. ರೌಡಿಗಳ ಮನೆ ಮೇಲೆ ದಾಳಿ ಮಾಡಿ, ಕರೆಸಿಕೊಂಡು ಎಚ್ಚರಿಕೆಯೆನೋ ಕೊಟ್ಟಿದ್ದಾರೆ. ಆದ್ರೆ, ಅವ್ರೆಲ್ಲಾ ಪೊಲೀಸರ ಎಚ್ಚರಿಕೆಗೆ ತಣ್ಣಗಾಗ್ತಾರಾ? ಕಲಬುರಗಿಯಲ್ಲಿ ಕ್ರೇಮ್​ ಕಡಿಮೆಯಾಗುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ.

ವಿಶೇಷ ವರದಿ: ಬಜರಂಗಿ, ಕಲಬುರಗಿ, ನ್ಯೂಸ್​ಫಸ್ಟ್

News First Live Kannada


Leave a Reply

Your email address will not be published. Required fields are marked *