ಡಿಂಪಲ್ ಹಯಾತಿ ಬಾಯ್ಫ್ರೆಂಡ್ ವಿಚಾರ ಗುಟ್ಟಾಗಿ ಇಟ್ಟಿದ್ದರು. ಎಲ್ಲಿಯೂ ಅವರು ಈ ವಿಚಾರ ರಿವೀಲ್ ಮಾಡಿರಲಿಲ್ಲ. ಈಗ ಏನೋ ಮಾಡಲು ಹೋಗಿ ಇನ್ನೇನೋ ಆಗಿದೆ.

ಡಿಂಪಲ್ ಹಯಾತಿ-ಬಾಯ್ಫ್ರೆಂಡ್
ಬಹುತೇಕ ಸೆಲೆಬ್ರಿಟಿಗಳು ಪ್ರೀತಿ, ಪ್ರೇಮ, ಡೇಟಿಂಗ್ ವಿಚಾರದಲ್ಲಿ ತುಟಿ ಬಿಚ್ಚುವುದಿಲ್ಲ. ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡ ಹೊರತಾಗಿಯೂ ಪ್ರೀತಿ ವಿಚಾರವನ್ನು ಅಲ್ಲಗಳೆಯುತ್ತಾರೆ. ನಟಿ ಡಿಂಪಲ್ ಹಯಾತಿ (Dimple Hayathi) ಕೂಡ ಇಷ್ಟು ದಿನ ಪ್ರೀತಿ ವಿಚಾರವನ್ನು ಮುಚ್ಚಿಟ್ಟಿದ್ದರು. ಆದರೆ, ಈಗ ಏನೋ ಮಾಡಲು ಹೋಗಿ ಇನ್ನೇನೋ ಆಗಿದೆ. ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ (Rahul Hegde) ಜೊತೆಗಿನ ಜಗಳದಲ್ಲಿ ಅವರ ಲವ್ಸ್ಟೋರಿ ವಿಚಾರ ಹೊರಬಿದ್ದಿದೆ. ಇದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಡಿಂಪಲ್ ಹಯಾತಿ ಹಾಗೂ ವಿಕ್ಟರ್ ಡೇವಿಡ್ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಹೈದರಾಬಾದ್ನ ಅಪಾರ್ಟ್ಮೆಂಟ್ ಒಂದರಲ್ಲಿ ಲಿವಿನ್ ರಿಲೇಶನ್ಶಿಪ್ನಲ್ಲಿದ್ದರು. ಇದನ್ನು ಡಿಂಪಲ್ ಹಯಾತಿ ಗುಟ್ಟಾಗಿ ಇಟ್ಟಿದ್ದರು. ಎಲ್ಲಿಯೂ ಅವರು ಈ ವಿಚಾರ ರಿವೀಲ್ ಮಾಡಿರಲಿಲ್ಲ. ಆದರೆ, ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ ಜೊತೆಗಿನ ಕಿತ್ತಾಟದ ವಿಚಾರದಲ್ಲಿ ವಿಕ್ಟರ್ ಹೆಸರು ಹೊರ ಬಂದಿದೆ.
ಡಿಂಪಲ್ ಹಯಾತಿ ಹಾಗೂ ಅವರ ಬಾಯ್ಫ್ರೆಂಡ್ ವಿಕ್ಟರ್ ವಾಸವಾಗಿರುವ ಅಪಾರ್ಟ್ಮೆಂಟ್ನಲ್ಲೇ ರಾಹುಲ್ ಹೆಗ್ಡೆ ಸಹ ವಾಸವಿದ್ದಾರೆ. ಡಿಂಪಲ್ ಹಯಾತಿ ಹಾಗೂ ರಾಹುಲ್ ಮಧ್ಯೆ ಕೆಲ ಸಮಯದಿಂದ ಪಾರ್ಕಿಂಗ್ ವಿಚಾರದಲ್ಲಿ ಕಿತ್ತಾಟ ನಡೆದಿತ್ತು. ನಟಿ ಈ ವಿಚಾರದಲ್ಲಿ ರಿವೇಂಜ್ ತೆಗೆದುಕೊಂಡಿದ್ದರು. ಐಪಿಎಸ್ ಅಧಿಕಾರಿ ಕಾರಿಗೆ ಡ್ಯಾಮೇಜ್ ಮಾಡಿದ್ದರು. ಈ ವಿಚಾರದಲ್ಲಿ ರಾಹುಲ್ ಹೆಗ್ಡೆ ಕೇಸ್ ದಾಖಲು ಮಾಡಿದ್ದರು. ಡಿಂಪಲ್ ಜೊತೆ ಅವರು ವಿಕ್ಟರ್ ವಿರುದ್ಧವೂ ಕೇಸ್ ದಾಖಲಿಸಿದ್ದರು.