ಏನ್ ತಪ್ಪು ಮಾಡಿ ತಿಹಾರ್ ಜೈಲಿಗೆ ಹೋಗಿದ್ರಿ ಮೊದಲು ಹೇಳಿ; ಡಿ.ಕೆ.ಶಿವಕುಮಾರ್ ವಿರುದ್ದ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ | Let us tell why dk shivakumar went jail KS eshwarappa slams dk shivakumar in shivamogga


ಏನ್ ತಪ್ಪು ಮಾಡಿ ತಿಹಾರ್ ಜೈಲಿಗೆ ಹೋಗಿದ್ರಿ ಮೊದಲು ಹೇಳಿ; ಡಿ.ಕೆ.ಶಿವಕುಮಾರ್ ವಿರುದ್ದ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ

ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಡಿ.ಕೆ.ಶಿವಕುಮಾರ್ ವಿರುದ್ದ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಏನ್ ತಪ್ಪು ಮಾಡಿ ತಿಹಾರ್ ಜೈಲಿಗೆ ಹೋಗಿದ್ರಿ ಮೊದಲು ಹೇಳಿ. ಹೆತ್ತ ತಾಯಿ ಕಣ್ಣೀರಿನ ಶಾಪ ಯಾರಿಗೆ ತಟ್ಟುತ್ತದೆ. ತಾಯಿಗೆ ಕಣ್ಣೀರು ಹಾಕಿಸಿದ್ದು ಯಾರ ತಪ್ಪು ಉತ್ತರಸಲಿ. ಡಿಕೆಶಿ ಬಂಡೆಯಲ್ಲಿ ಎಷ್ಟು ದುಡ್ಡು ಮಾಡಿದ್ದಾರೆ ಎಂದು ಗೋತ್ತಿದೆ ನಮ್ಮನ್ನು ಹೊಗಳಿದ ಡಿಕೆಶಿಗೆ ಧನ್ಯವಾದಗಳು ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ದಿ ಸಚಿವ K.S.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿಗೆ ಏಕೆ ಹೋಗಿದ್ದರು. ಅವರು ಏನು ತಪ್ಪು ಮಾಡಿದ್ದರು ಎಂಬುದನ್ನು ಹೇಳಬೇಕು. ಹೆತ್ತ ತಾಯಿಯ ಕಣ್ಣೀರಿನ ಶಾಪ ಯಾರಿಗೆ ತಟ್ಟುತ್ತದೆ. ತಾಯಿ ಕಣ್ಣೀರು ಹಾಕುವಂತೆ ಮಾಡಿದ್ದು ಯಾರ ತಪ್ಪು? ರಾಜ್ಯದ ಜನರಿಗೆ ಡಿ.ಕೆ.ಶಿವಕುಮಾರ್ ಉತ್ತರ ನೀಡಬೇಕು. ಡಿಕೆಶಿ ಬಂಡೆಯಲ್ಲಿ ಎಷ್ಟು ಹಣ ಮಾಡಿದ್ದಾರೆ ಗೊತ್ತಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.

ಇನ್ನು ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಟೀಕೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಜ್ಞಾನಿ. ನನ್ನ ಇಲಾಖೆಯ ಸಾಧನೆ ಕುರಿತು ಪ್ರಶ್ನೆ ಹಾಕಿದ್ದಾರೆ. ಒಂದೇ ಒಂದು ಮನೆ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. ಮನೆ ಕೊಡುವುದು ವಸತಿ ಇಲಾಖೆ. ನನ್ನ ಇಲಾಖೆಯಲ್ಲಿ ಮನೆ ಹಂಚಲು, ಕಟ್ಟಲು ಬರುವುದಿಲ್ಲ. ನನ್ನನ್ನು ಟೀಕಿಸದಿದ್ದರೆ ಅವರಿಗೆ ತಿಂದಿದ್ದು ಕರಗುವುದಿಲ್ಲ ಎಂದಿದ್ದಾರೆ.

ಆರಗಜ್ಞಾನೇಂದ್ರ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಈಶ್ವರಪ್ಪ
ಗೃಹಸಚಿವರಿಂದ ಪೊಲೀಸರ ವಿರುದ್ಧ ಅವೇಹಳನ ಪದ ಬಳಕೆಗೆ ಸಂಬಂಧಿಸಿದಂತೆ ಆರಗಜ್ಞಾನೇಂದ್ರ ಹೇಳಿಕೆಯನ್ನು ಸಚಿವ ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ. ಗೋವುಗಳನ್ನು ರಕ್ಷಿಸಲು ಹೊರಟಿದ್ದ ಇಬ್ಬರು ಯುವಕರನ್ನು ನೋಡಿದರೆ, ಸಂಕಟವಾಗುತ್ತೆ. ಅವರ ತಾಯಿಗೆ ಈ ಪರಿಸ್ಥಿತಿ ಉಂಟಾಗಿದ್ದರೆ. ಆ ಪದಗಳು ನನ್ನ ಬಾಯಲ್ಲಿ ಬರಬೇಕಿತ್ತು. ಆದರೆ, ಅವರು ಯಾಕೆ ಆ ಪದಗಳು ಬಳಸಿದರೋ ಗೊತ್ತಿಲ್ಲ. ನಾನು ಗೃಹ ಸಚಿವರ ಪರವಾಗಿ ಇರುತ್ತೇನೆ ಎಂದಿದ್ದಾರೆ.

TV9 Kannada


Leave a Reply

Your email address will not be published. Required fields are marked *