ಬೀದರ್: ಇಬ್ಬರು ಏನು ಬೇಕಾದ್ರು ಚರ್ಚೆ ಮಾಡಲಿ, ಆದರೆ ನೋಡಿಕೊಂಡು ಪದಗಳನ್ನು ಬಳಸಬೇಕು ಎಂದು ಸಚಿವ ಈಶ್ವರಪ್ಪ ಅವರು ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬುದ್ಧಿವಾದ ಹೇಳಿದ್ದಾರೆ.

ಸುಮಲತಾ ವರ್ಸ್‍ಸ್ ಹೆಚ್‍ಡಿಕೆ ಆರೋಪ-ಪ್ರತ್ಯಾರೋಪಕ್ಕೆ ಈಶ್ವರಪ್ಪ ತೀವ್ರ ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಈ ವಿಚಾರವಾಗಿ ಬೀದರ್ ನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಇಬ್ಬರ ಸಮರಕ್ಕೆ ಯಾವ ಪದ ಬಳಸಬೇಕು ಎಂದು ನನಗೂ ಗೊತ್ತಾಗುತ್ತಿಲ್ಲ. ಹೀಗಾಗಿ ಇಬ್ಬರು ಬಳಸುವ ಪದದಿಂದಾಗಿ ನನಗೆ ತುಂಬ ನೋವಾಗಿದೆ. ಇಬ್ಬರು ಏನು ಬೇಕಾದ್ರು ಚರ್ಚೆ ಮಾಡಲಿ, ಆದರೆ ನೋಡಿಕೊಂಡು ಪದಗಳನ್ನು ಬಳಸಬೇಕು ಎಂದು ಹೇಳಿದರು. ಇದನ್ನೂ ಓದಿ: ಅಂಬರೀಶ್ ಪಾರ್ಥಿವ ಶವ ತಂದಿದ್ದೇ ಹೆಚ್‍ಡಿಕೆ, ಆ ಫೋಟೋವನ್ನೂ ವೈರಲ್ ಮಾಡ್ಲಿ: ಕೆಟಿಎಸ್ ಆಗ್ರಹ

ಮೋದಿ ಸಂಪುಟದಲ್ಲಿ ರಾಜ್ಯದ ನಾಲ್ವರು ಮಂತ್ರಿ ಸ್ಥಾನ ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿ, ಮೋದಿ ದೇಶಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ದೇಶದ ಇತಿಹಾಸದಲ್ಲಿಯೇ ಐಎಎಸ್, ಐಪಿಎಸ್, ದಲಿತ, ಹಿಂದುಳಿದ ವರ್ಗ ಸೇರಿದಂತೆ ಎಲ್ಲರಿಗೂ ಮಂತ್ರಿ ಮಂಡಲದಲ್ಲಿ ಮೋದಿ ಅವಕಾಶ ನೀಡಿದ್ದಾರೆ ಎಂದರು.  ಇದನ್ನೂ ಓದಿ: ನಾನು ಕ್ಷಮೆ ಕೇಳೋದಿಲ್ಲ ಸುಮಲತಾ ಕುತಂತ್ರಿ: ಎಚ್‍ಡಿಕೆ

ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ರಾಜ್ಯದ ಆರು ಜನಕ್ಕೆ ಅವಕಾಶ ನೀಡಿದ್ದಾರೆ. ಈ ಮೂಲಕ ರಾಜ್ಯದ ಎಲ್ಲಾ ಭಾಗಗಳಿಗೆ ಮೋದಿ ಕೊಡುಗೆ ನೀಡಿದ್ದು ವಿಶೇಷವಾಗಿದೆ. ಹೀಗಾಗಿ ನಾನು ರಾಜ್ಯದ ಜನರ ಪರವಾಗಿ ಮೋದಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ V/S ಕುಮಾರಸ್ವಾಮಿ – ಹೆಚ್‍ಡಿಕೆ ಪರ ಪ್ರತಾಪ್ ಸಿಂಹ ಬ್ಯಾಟಿಂಗ್

ಇದೇ ವೇಳೆ ಕಾಂಗ್ರೆಸ್ಸಿನಲ್ಲಿ ಸಿಎಂ ಕೂಗಿನ ಬಗ್ಗೆ ಮಾತನಾಡಿದ ಈಶ್ವರಪ್ಪ, ಬಿಜೆಪಿಗೆ ಹೇಳೋರು ಕೇಳೋರು ಇದ್ದಾರೆ. ಆದರೆ ಕಾಂಗ್ರೆಸ್ಸಿನವರಿಗೆ ಹೇಳೋರು ಇಲ್ಲಾ, ಕೇಳೋರು ಯಾರೂ ಇಲ್ಲ. ಹೀಗಾಗಿ ಕಾಂಗ್ರೆಸ್ಸಿನಲ್ಲಿ ನಾನೇ ಸಿಎಂ, ನಾನೇ ಅಭ್ಯರ್ಥಿ ಎಂದು ಹೇಳಬಹುದು. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೈ ನಾಯಕರ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ರು.

The post ಏನ್ ಬೇಕಾದ್ರೂ ಚರ್ಚೆ ಮಾಡಲಿ, ಆದ್ರೆ ಪದ ಬಳಕೆ ಸರಿಯಾಗಿರಲಿ: ಈಶ್ವರಪ್ಪ appeared first on Public TV.

Source: publictv.in

Source link