ಬಾಕ್ಸ್ ಆಫೀಸ್ ನ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಏಪ್ರಿಲ್ 25 ರಿಂದ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಲಿದೆ.

ತರುಣ್ ಕಿಶೋರ್ ನಿರ್ದೇಶನದ ರಾಬರ್ಟ್ ಸಿನಿಮಾ, ಕನ್ನಡ, ತೆಲುಗು, ತಮಿಳು ಮಲಯಾಳಂತ ಹಾಗೂ ಹಿಂದಿಯಲ್ಲಿ ಪ್ರದರ್ಶನವಾಗಲಿದೆ.

ಮಾರ್ಚ್ 11 ರಂದು ಶಿವರಾತ್ರಿ ಹಬ್ಬದ ದಿನ ರಾಬರ್ಟ್ ಥಿಯೇಟರ್ ಗಳಲ್ಲಿ ರಿಲೀಸ್ ಆಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಉತ್ತಮವಾಗೆ ಕಲೆಕ್ಷನ್ ಕೂಡ ಮಾಡಿತ್ತು. ಎಸ್.ಉಮಾಪತಿ ನಿರ್ಮಾಣದ ರಾಬರ್ಟ್ ಸಿನಿಮಾ ಅತಿ ಕಡಿಮೆ ಅವಧಿಯಲ್ಲಿ 50 ಕೋಟಿ ರು ಹಣ ಗಳಿಸಿ ಎಲ್ಲಾ ದಾಖಲೆ ಮುರಿದಿತ್ತು, ರಾಬರ್ಟ್ ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ.

ರಾಬರ್ಟ್ ನಲ್ಲಿ ದರ್ಶನ್ ಜೊತೆ ಆಶಾ ಭಟ್ ನಾಯಕಿಯಾಗಿ ನಟಿಸಿದ್ದರು. ವಿನೋದ್ ಪ್ರಭಾಕರ್, ಸೋನೆಲ್ ಮಾಂಟೇರಿಯೋ, ರವಿಶಂಕರ್ ಚಿಕ್ಕಣ್ಣ ಮುಂತಾದವರು ನಟಿಸಿದ್ದರು. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More