ಏರ್​ಪೋರ್ಟ್​ನಲ್ಲೇ ಸಖತ್​ ಆಗಿ ಸ್ಟೆಪ್​ ಹಾಕಿದ ಸಮಂತಾ; ಅವರ ಎನರ್ಜಿ ನೋಡಿ ಅಚ್ಚರಿಪಟ್ಟ ಫ್ಯಾನ್ಸ್​​   | Samantha energetic dance in Airport for Beast Movie Arabic Kuthu Song


ಏರ್​ಪೋರ್ಟ್​ನಲ್ಲೇ ಸಖತ್​ ಆಗಿ ಸ್ಟೆಪ್​ ಹಾಕಿದ ಸಮಂತಾ; ಅವರ ಎನರ್ಜಿ ನೋಡಿ ಅಚ್ಚರಿಪಟ್ಟ ಫ್ಯಾನ್ಸ್​​  

ಸಮಂತಾ

ನಟಿ ಸಮಂತಾ ಅವರು (Samantha) ನಟನೆ ಮಾತ್ರವಲ್ಲದೆ ತಮ್ಮ ಅದ್ಭುತ ಡ್ಯಾನ್ಸ್​ ಮೂಲಕವೂ ಪ್ರೇಕ್ಷಕರಿಗೆ ಇಷ್ಟವಾಗಿದ್ದಾರೆ. ಅವರು ಹಾಕೋ ಸ್ಟೆಪ್​​ಗೆ ಪಡ್ಡೆಗಳು ಹುಚ್ಚೆದ್ದು ಕುಣಿಯುತ್ತಾರೆ. ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದ ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಚಿತ್ರದ (Pushpa Movie) ‘ಹೂ ಅಂತೀಯಾ ಮಾವ.. ಊಹೂ ಅಂತಿಯಾ ಮಾವ..’ ಹಾಡು ಸೂಪರ್ ಡೂಪರ್​ ಹಿಟ್​ ಆಗಿದೆ. ಈ ಚಿತ್ರದಲ್ಲಿ ಸಮಂತಾ ಹಾಕಿರೋ ಸ್ಟೆಪ್​ಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ‘ಪುಷ್ಪ’ ಸಿನಿಮಾ ಹಿಟ್​ ಆಗೋಕೆ ಈ ಹಾಡಿನ ಕೊಡುಗೆಯೂ ದೊಡ್ಡದಿದೆ. ಈಗ ಅವರು ಏರ್​ಪೋರ್ಟ್​ನಲ್ಲಿ (Airport) ಸ್ಟೆಪ್​ ಹಾಕಿರೋ ಹೊಸ ವಿಡಿಯೋ​ ಸಖತ್​ ವೈರಲ್​ ಆಗುತ್ತಿದೆ. ಇದನ್ನು ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಂತಾ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜತೆಗೆ ಅನೇಕ ಜಾಹೀರಾತು ಶೂಟಿಂಗ್​​ನಲ್ಲೂ ಅವರು ಪಾಲ್ಗೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಫ್ಲೈಟ್​ನಲ್ಲಿ ಸುತ್ತಾಡುತ್ತಾರೆ. ಕೆಲವೊಮ್ಮೆ ವಿಮಾನ ಲೇಟ್​ ಆದಾಗ, ನಿಲ್ದಾಣದಲ್ಲೇ ಕಾಯಬೇಕಾಗುತ್ತದೆ. ಮಧ್ಯರಾತ್ರಿ ವಿಮಾನ ಏರೋಕೆ ಹೋದರೆ ನಿದ್ರೆಯೆಲ್ಲ ಹಾಳು. ಸಮಂತಾಗೂ ಮಧ್ಯರಾತ್ರಿ ಫ್ಲೈಟ್​ ಇತ್ತು. ಈ ಸಂದರ್ಭದಲ್ಲಿ ಅವರು ಸಖತ್​ ಆಗಿ ಸ್ಟೆಪ್​ ಹಾಕಿದ್ದಾರೆ.

ದಳಪತಿ ವಿಜಯ್​ ಹಾಗೂ ಪೂಜಾ ಹೆಗ್ಡೆ ನಟನೆಯ ‘ಬೀಸ್ಟ್’ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಈ ಚಿತ್ರದ ‘ದಿ ಅರೇಬಿಕ್​ ಕುಥು..’ ಹಾಡು ಇತ್ತೀಚೆಗೆ ರಿಲೀಸ್​ ಆಗಿದ್ದು ಸಖತ್​ ವೈರಲ್​ ಆಗುತ್ತಿದೆ. ಯೂಟ್ಯೂಬ್ ಟ್ರೆಂಡಿಂಗ್​​​ನಲ್ಲಿ ಈ ಹಾಡು ಎರಡನೇ ಸ್ಥಾನದಲ್ಲಿದೆ. ಈ ಹಾಡನ್ನು ಮತ್ತಷ್ಟು ವೈರಲ್​ ಮಾಡೋಕೆ ತಂಡ ಒಂದು ಚಾಲೆಂಜ್​ ಕೂಡ ನೀಡಿದೆ. ‘ಬೀಸ್ಟ್’ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿ ಆ ವಿಡಿಯೋ ಶೇರ್​ ಮಾಡಿಕೊಳ್ಳಬೇಕು. ಸಮಂತಾ ಕೂಡ ಈಗ ಅದನ್ನೇ ಮಾಡಿದ್ದಾರೆ.

ಸಮಂತಾ ಅವರು ವಿಮಾನ ನಿಲ್ದಾಣದಲ್ಲೇ  ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋದಲ್ಲಿ ಅವರ ಡ್ಯಾನ್ಸ್ ನೋಡಿ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ. ಅವರ ಎನರ್ಜಿ ನೋಡಿ ಅನೇಕರು ಅಚ್ಚರಿ ಹೊರ ಹಾಕಿದ್ದಾರೆ. ಈ ವಿಡಿಯೋ ಈಗ ಸಖತ್​ ವೈರಲ್​ ಆಗುತ್ತಿದೆ. ಕೆಲವು ಸೆಲೆಬ್ರಿಟಿಗಳು ಈ ಪೋಸ್ಟ್​ನ ಕಮೆಂಟ್​ ಬಾಕ್ಸ್​ನಲ್ಲಿ ಫೈರ್​ ಎಮೋಜಿ ಪೋಸ್ಟ್ ಮಾಡಿದ್ದಾರೆ.

ಸಮಂತಾ ಸದ್ಯ ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಫಿಲಿಪ್​ ಜಾನ್​ ನಿರ್ದೇಶನದ ‘ಅರೇಂಜ್​ಮೆಂಟ್ಸ್​ ಆಫ್ ಲವ್​’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ, ಇನ್ನೂ ಕೆಲವು ಪ್ರಾಜೆಕ್ಟ್​ಗಳಲ್ಲಿ ಅವರು ಬ್ಯುಸಿ ಇದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಹಲವು ಆಫರ್​ ಒಪ್ಪಿಕೊಳ್ಳುತ್ತಿದ್ದಾರೆ.

TV9 Kannada


Leave a Reply

Your email address will not be published. Required fields are marked *