ಏರ್‌ಪೋರ್ಟ್‌ನ ಆರಿಗಾ ಲ್ಯಾಬ್‌ನಲ್ಲಿ ಗೋಲ್ಮಾಲ್ ಆರೋಪ; ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡದಿಂದ ಪರಿಶೀಲನೆ | Fake corona report at airport Auriga Lab Inspection by a team of District health officers in Bengaluru


ಏರ್‌ಪೋರ್ಟ್‌ನ ಆರಿಗಾ ಲ್ಯಾಬ್‌ನಲ್ಲಿ ಗೋಲ್ಮಾಲ್ ಆರೋಪ; ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡದಿಂದ ಪರಿಶೀಲನೆ

ಲ್ಯಾಬ್‌ನಲ್ಲಿ ಪರಿಶೀಲನೆ ಬಳಿಕ ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ

ಬೆಂಗಳೂರು: ವಿಮಾನ ನಿಲ್ದಾಣದ ಆರಿಗಾ ಲ್ಯಾಬ್​ನಲ್ಲಿ(Auriga Lab) ಕೊರೊನಾ ಟೆಸ್ಟಿಂಗ್ ಗೋಲ್ಮಾಲ್ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಪಟ್ಟಂತೆ ಟಿವಿ9 ವರದಿ ಪ್ರಕಟಿಸಿತ್ತು. ಬಳಿಕ ಎಚ್ಛೆತ್ತುಕೊಂಡ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಅದರಂತೆ ಇಂದು ದೇವನಹಳ್ಳಿಯ ವಿಮಾನ ನಿಲ್ದಾಣದ ಆರಿಗಾ ಲ್ಯಾಬ್​ಗೆ  ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದೆ. ಬೆಂಗಳೂರು ಗ್ರಾಮಾಂತರ ಡಿಹೆಚ್ಒ (DHO) ತಿಪ್ಪೇಸ್ವಾಮಿ ನೇತೃತ್ವದ ತಂಡ, ಲ್ಯಾಬ್​ನಲ್ಲಿ ಎರೆಡೆರಡು ರೀತಿಯ ರಿಪೋರ್ಟ್ (Airport) ಹೇಗೆ ಬಂತು ಎಂದು ತನಿಖೆ ನಡೆಸುತ್ತಿದೆ.

ಸಂಪೂರ್ಣ ಪರಿಶೀಲನೆ ನಡೆಸಿ ಡಿಸಿಗೆ ಅಧಿಕಾರಿಗಳು ವರದಿ ನೀಡಲಿದ್ದಾರೆ, ನಿನ್ನೆ ಯುವತಿಯೋರ್ವಳಿಗೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಲ್ಯಾಬ್​ನಲ್ಲಿ ತಪ್ಪು ವರದಿ ನೀಡಿರುವ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ವರದಿಯಿಂದ ಎಚ್ಚೇತ್ತ ಅಧಿಕಾರಿಗಳಿಂದ ಇಂದು ಪರಿಶೀಲನೆ ಕಾರ್ಯ ನಡೆಯುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು 54 ವಿದ್ಯಾರ್ಥಿಗಳಿಗೆ ಕೊರೊನಾ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು ಒಂದೆ ದಿನ 54 ವಿದ್ಯಾರ್ಥಿಗಳಿಗೆ ಕೊರೊನಾ ಪತ್ತೆಯಾಗಿದೆ. ಜತೆಗೆ ಇದೇ ಶಾಲೆಯ 14 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 14 ಶಾಲೆಗನ್ನು 4 ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ.

ಒಂದೆ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ಧೃಡವಾದರೆ ಶಾಲೆ ಸಿಲ್​ಡೌನ್​ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಇದುವರೆಗೂ 142 ಜನ ಶಾಲಾ‌ ವಿದ್ಯಾರ್ಥಿಗಳಿಗೆ ಕೊರೊನಾ ದೃಡವಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 58 ಶಾಲಾ ಶಿಕ್ಷಕರಿಗೆ  ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಟಿವಿ9 ಡಿಜಿಟಲ್​ಗೆ ಚಿಕ್ಕಬಳ್ಳಾಪುರ ಡಿಡಿಪಿಐ ಜಯರಾಮರೆಡ್ಡಿ ಮಾಹಿತಿ ನೀಡಿದ್ದಾರೆ.

ಹಾಸನ‌: ಚನ್ನರಾಯಪಟ್ಟಣ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

ಹಾಸನ‌ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ, ಚನ್ನರಾಯಪಟ್ಟಣ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಾಳೆಯಿಂದ ಜ.26ರವರೆಗೆ ರಜೆ ನೀಡಿ ಡಿಸಿ ಗಿರೀಶ್‌ ಆದೇಶ ನೀಡಿದ್ದಾರೆ. ಮಕ್ಕಳಿಗೆ ಸೋಂಕು ಹಿನ್ನೆಲೆ 1 ರಿಂದ 9ನೇ ತರಗತಿವರೆಗೆ ರಜೆ ನೀಡಲಾಗಿದೆ. ಹಾಸನ, ಆಲೂರು ತಾಲೂಕಿನ ಶಾಲೆಗಳಿಗೂ ರಜೆ ನೀಡಿದ್ದಾರೆ.

TV9 Kannada


Leave a Reply

Your email address will not be published. Required fields are marked *