ಸಾಂಬಾರು ಪದಾರ್ಥಗಳಲ್ಲಿ ಪ್ರಮುಖ ಎನ್ನಿಸಿಕೊಂಡಿರುವ ಏಲಕ್ಕಿಯನ್ನು ಔಷಧಿಯ ಸಸ್ಯವಾಗಿಯೂ ಬಳಸುತ್ತಾರೆ. ತನ್ನ ಪರಿಮಳದಿಂದಾಗಿಯೇ ಪ್ರಸಿದ್ಧಿ ಯಾಗಿರುವ ಏಲಕ್ಕಿ ಪಾಯಸ ಹಾಗೂ ಸಿಹಿ ತಿಂಡಿಗಳಲ್ಲಿಯೂ ಕೂಡ ಉಪಯೋಗಿಸುತ್ತಾರೆ.

ಏಲಕ್ಕಿ ಕ್ಯಾನ್ಸರ್ ನಿರೋಧಕ ಶಕ್ತಿಯನ್ನು ಹೊಂದಿದೆ :

ಏಲಕ್ಕಿಯಲ್ಲಿ ಕ್ಯಾನ್ಸರ್ ನಿರೋಧಕ ಶಕ್ತಿ ಇದೆ ಎಂದು ಸಂಶೋಧನೆಯ ಮೂಲಕ ತಿಳಿಯುತ್ತಿದ್ದಂತೆ, ವೈದ್ಯಕೀಯ ರಂಗದಲ್ಲಿ ಬಾರಿ ಬೇಡಿಕೆ ಉಂಟಾಗಿದೆ.

ಓದಿ :  ಬಿಜೆಪಿ ವಿರುದ್ಧ ನಾವೆಲ್ಲರೂ ಒಂದಾಗೋಣ : ಸೋನಿಯಾ ಮತ್ತು ಇತರ ನಾಯಕರಿಗೆ ಮಮತಾ ಪತ್ರ

ನಮ್ಮ ಹಿರಿಯರು ಪ್ರತಿದಿನವೂ ಏಲಕ್ಕಿಯ ಉಪಯೋಗವನ್ನು ಮನೆಗಳಲ್ಲಿ ಬಳಸುತ್ತಿದ್ದಿದ್ದು ಅವರ ಆರೋಗ್ಯ ಕಾಳಜಿಯನ್ನು ಪ್ರತಿ ಬಿಂಬಿಸುತ್ತಿದ್ದದ್ದು  ಸುಳ್ಳಲ್ಲ. ಅದಕ್ಕೆ ಮುಖ್ಯ ಕಾರಣ ಏಲಕ್ಕಿಯಲ್ಲಿರುವ ಕ್ಯಾನ್ಸರ್ ನಿರೋಧಕ  ಶಕ್ತಿ.

ಇನ್ನು, ಜೀರ್ಣಕ್ರಿಯೆಯನ್ನು ಸರಾಗಗೊಳಿಸುವುದಷ್ಟೆ ಅಲ್ಲದೇ, ಏಲಕ್ಕಿ ಹಲವು ಔಷಧೀಯ ಗುಣಗಳನ್ನು ಹೊಂದಿದೆ.

ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಏಲಕ್ಕಿ ಸಹಕಾರಿ ಎಂದು ಹೇಳಲಾಗುತ್ತದೆ. ಇದು ಶ್ವಾಸಕೋಶ ಸಂಬಂಧೀ ಕಾಯಿಲೆಗಳನ್ನೂ ನಿವಾರಿಸುವ ಶಕ್ತಿಯನ್ನು ಕೂಡ ಹೊಂದಿದೆ.. ಏಲಕ್ಕಿ ಚಹ ಸೇವಿಸುವುದರಿಂದ ಖಿನ್ನತೆ ಮಾಯವಾಗುತ್ತದೆಯಂತೆ.

ಇನ್ನು, ರಕ್ತ ಸಂಚಾರ ಸರಾಗವಾಗಲು ಸಹಾಯಮಾಡುತ್ತದೆ. ನೆಗಡಿ ಮತ್ತು ಕೆಮ್ಮನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಸಂಶೋಧನೆಗಳ ಪ್ರಕಾರ ಕ್ಯಾನ್ಸರ್ ಗುಣಪಡಿಸುವ ಶಕ್ತಿ ಏಲಕ್ಕಿಗಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಳೂ ನಡೆಯುತ್ತಿವೆ. ಅತೀ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಏಲಕ್ಕಿ ಸಹಕಾರಿ. ಶ್ವಾಸಕೋಶದಲ್ಲಿ ನೋವುಂಟಾದರೆ ಏಲಕ್ಕಿ ಸೇವನೆಯಿಂದ ನಿವಾರಣೆಯಾಗುತ್ತದೆ. ಅಸ್ತಮಾ ಸಮಸ್ಯೆಯಿಂದ ಬಳಲುವವರು ಹೆಚ್ಚು ಏಲಕ್ಕಿ ಉಪಯೋಗಿಸುವುದು ಒಳ್ಳೆಯದು.ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಓದಿ :  FIR ಎಲ್ಲಿದೆ..? ನೀವು ಕಾನೂನಿಗಿಂತ ಮೇಲಿದ್ದೀರಾ..? : ಪರಮ್ ಗೆ ಬಾಂಬೆ ಹೈ ಕೋರ್ಟ್ ಪ್ರಶ್ನ

ಆರೋಗ್ಯ – Udayavani – ಉದಯವಾಣಿ
Read More

Leave a comment