ಅಲ್ಮಾಟಿ (ಕಜಾಕ್‌ಸ್ಥಾನ್‌) : ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಪಡೆದಿರುವ ಭಾರತದ ಭರವಸೆಯ ಕುಸ್ತಿಪಟುಗಳಾದ ವಿನೇಶ್‌ ಫೋಗಟ್‌ ಮತ್ತು ಅಂಶು ಮಲಿಕ್‌ “ಏಶ್ಯನ್‌ ರೆಸ್ಲಿಂಗ್‌ ಚಾಂಪಿಯನ್‌ಶಿಪ್‌’ನಲ್ಲಿ ಮೊದಲ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ.

ವಿನೇಶ್‌ 53 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಚೈನೀಸ್‌ ತೈಪೆಯ ಮೆಂಗ್‌ ಸುವಾನ್‌ ಶೀ ವಿರುದ್ಧ ಗೆದ್ದು ಬಂದರು. ಇದು ಮಾರ್ಚ್‌ ಬಳಿಕ 3 ಕೂಟಗಳಲ್ಲಿ ವಿನೇಶ್‌ ಗೆದ್ದ 3ನೇ ಸ್ವರ್ಣ ಪದಕವಾಗಿದೆ.

ಅಂಶು ಮಲಿಕ್‌ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಮಂಗೋಲಿಯಾದ ಬತ್ಸೆಸೆಗ್‌ ಅಲ್ಟಾಂತ್ಸೆಗ್‌ ವಿರುದ್ಧ 3-0 ಅಂತರದ ಗೆಲುವು ಸಾಧಿಸಿದರು.

ಕ್ರೀಡೆ – Udayavani – ಉದಯವಾಣಿ
Read More