ನವದೆಹಲಿ: ಈ ಚಳಿಗಾಲದಲ್ಲಿ ಎಲ್ಲರೂ ಬೆಚ್ಚಗೆ ಇರ್ಬೇಕು ಅಂತ ದೊಡ್ಡ ದೊಡ್ಡ ಹೊದಿಕೆಗಳನ್ನ ಹೊದುಸ್ಕೊಂಡ್​ ಇರ್ತೀವಿ. ಆದ್ರೆ ಇಲ್ಲಿ ಹೆಬ್ಬಾವೊಂದು ಏಸಿಯೊಳಕ್ಕೆ ಹೋಗಿ ಅಡವಿ ಕೂತಿತ್ತಂತೆ.

ದೆಹಲಿಯ ದಂಪತಿಯೊಬ್ಬರು ತಮ್ಮ ಮನೆಯಲ್ಲಿ ಏಸಿ ವರ್ಕ್​ ಆಗ್ತಾಯಿರ್ಲಿಲ್ಲ ಅಂತ ಏಸಿ ಏಜೆನ್ಸಿಗೆ ಕರೆ ಮಾಡಿದ್ದಾರೆ. ಅವ್ರು ಅದನ್ನ ಸರಿ ಮಾಡೋದಕ್ಕೆ ಮನೆಗೆ ಬಂದು, ಎಲ್ಲವನ್ನ ತೆಗೆದು ಹಾಕಿ ಏನ್​ ಪ್ರಾಬ್ಲಂ ಆಗಿದೆ ಅಂತ ಹುಡುಕಬೇಕಾದ್ರೆ ಅದರೊಳಗೆ ಐದು ಅಡಿ ಉದ್ದದ ಇಂಡಿಯನ್​ ರಾಕ್​ ಹೆಬ್ಬಾವು ಕಾಣಿಸಿಕೊಂಡಿದೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅಧಿಕಾರಿಗಳು ಬಂದು ಹಾವನ್ನ ವೈರ್​ನಿಂದ ನಿಧಾನವಾಗಿ ಬಿಡಿಸಿ ರಕ್ಷಿಸಿದ್ದಾರೆ.

The post ಏಸಿ ವರ್ಕ್ ಆಗ್ತಿಲ್ಲ ಅಂತ ತೆಗೆದು ನೋಡಿದಾಗ ಪ್ರತ್ಯಕ್ಷವಾಗಿದ್ದು ಹೆಬ್ಬಾವು appeared first on News First Kannada.

Source: newsfirstlive.com

Source link