ಬೆಂಗಳೂರು: ಐಎಂಎ ಬಹುಕೋಟಿ ಹಗರಣ ಪ್ರಕರಣಕೆ ಸಂಬಂಧಿಸಿದಂತೆ ಐಎಂಎಗೆ ಸಂಬಂಧಪಟ್ಟ ಆಸ್ಪತ್ರೆಯಲ್ಲಿ ದರೋಡೆ ನಡೆದಿರುವ ಘಟನೆ ಶಿವಾಜಿನಗರದಲ್ಲಿ ನಡೆದಿದೆ.

ಶಿವಾಜಿನಗರ ಬಳಿ ಇರುವ ಐಎಂಎಗೆ ಸಂಬಂಧಸಿದ ಫ್ರಂಟ್ ಲೈನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೆಲೆ ಬಾಳುವ ವಸ್ತುಗಳು ಕಳ್ಳತನ ಆಗಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಐಎಂಎ ಹಗರಣ ಆದಾಗ ಐಎಎಂಎ ಸಂಬಂಧ ಪಟ್ಟ ಎಲ್ಲಾ ಬ್ರ್ಯಾಂಚ್​ಗಳನ್ನು ಸೀಜ್​ ​ ಮಾಡಲಾಗಿತ್ತು ಅದರಂತೆ ಈ ಆಸ್ಪತ್ರೆಯನ್ನ ಕೂಡ ಕ್ಲೋಸ್ ಮಾಡಲಾಗಿತ್ತು.

ಬಳಿಕ ಸಿಬಿಐ ಅಧಿಕಾರಿಗಳು ಐಎಂಎ ಸಂಬಂಧಪಟ್ಟ ಪ್ರಾಪರ್ಟಿ ವಾಲ್ಯೂಯೇಷನ್ ಗೆ ಮುಂದಾಗಿದ್ದರು, ಅದೇ ರೀತಿ ಈ ಆಸ್ಪತ್ರೆಗೂ ಭೇಟಿ ಕೊಡುವ ಸಿದ್ಧತೆ ಮಾಡಿಕೊಂಡಿದ್ದರು. 2020 ನವೆಂಬರ್​ ತಿಂಗಳಿನಲ್ಲಿ ಆಸ್ಪತ್ರೆಯ ಎಲ್ಲ ವಸ್ತುಗಳ ಲೆಕ್ಕ ಪಡೆದು ಅದನ್ನು ಆಕ್ಷನ್​ಗೆ ಬಿಟ್ಟಿದ್ದರು. ತದನಂತರ ಆಕ್ಷನ್​ನಲ್ಲಿ ಬಿಡ್​ ಮಾಡಿದವರಿಗೆ ವಸ್ತುಗಳನ್ನು ಕೊಡುವ ಸಲುವಾಗಿ ಆಸ್ಪತ್ರೆಗೆ ಎಂಟ್ರಿ ಕೊಟ್ಟಾಗ ಅಧಿಕಾರಿಗಳಿಗೆ ಶಾಕ್​ ಆಗಿದ್ದು ದರೋಡೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಆಸ್ಪತ್ರೆಯನ್ನ ಕ್ಲೋಸ್ ಮಾಡಿದ ಬಳಿಕ ಅಲ್ಲಿ ಯಾವುದೇ ಸೆಕ್ಯೂರಿಟಿ ಇರಲಿಲ್ಲ ಮತ್ತು ಅಲ್ಲಿನ ಸಿಸಿಟಿವಿ ಕೂಡ ವರ್ಕ್ ಆಗ್ತಿರಲಿಲ್ಲವಂತೆ ಇದನ್ನೇ ಎನ್ಕ್ಯಾಶ್ ಮಾಡಿಕೊಂಡ ದರೋಡೆಕೋರರು ಲಾಕ್​ಡೌನ್​ ಸಮಯದಲ್ಲಿ ಆಸ್ಪತ್ರೆಯಲ್ಲಿನ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಪ್ರಕರಣ ಕುರಿತು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಖತರ್ನಾಕ್​ ಕಳ್ಳರಿಗೆ ಬಲೆ ಬೀಸಿದ್ದಾರೆ.

The post ಐಎಂಎ ಸಂಬಂಧಿಸಿದ ಆಸ್ಪತ್ರೆಯಲ್ಲಿನ ಹೈಫೈ ವಸ್ತುಗಳ ಕದ್ದೊಯ್ದ ಕಳ್ಳರು! appeared first on News First Kannada.

Source: newsfirstlive.com

Source link