ಮುಂಬೈ: ಇತ್ತೀಚೆಗೆ UPSC ಪರೀಕ್ಷೆ ಪಾಸ್ ಮಾಡಿದ್ದ ಪ್ರಂಜಲ್ ಪ್ರಭಾಕರ್ ನಕಾತ್ ಎಂಬವರು ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಜಿಲ್ಲಾಧಿಕಾರಿಯಾಗಬೇಕೆಂಬ ಕನಸು ಕಂಡಿದ್ದ ಪ್ರಾಂಜಲ್ ಮೂಲತಃ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾತೂರ್ ತಾಲೂಕಿನ ತಾಂಡಲಿ ಎಂಬ ಸಣ್ಣ ಸ್ಥಳದಲ್ಲಿ ಜನಸಿದ್ದವರು. ಇವರಿಗೆ ಕಳೆದ ವಾರದ ಕೋವಿಡ್ ಸೋಂಕು ತಗುಲಿರೋದು ದೃಢವಾಗಿತ್ತು.

ಸೋಂಕು ಶ್ವಾಸಕೋಶಕ್ಕೆ ತಗುಲಿ, ಆರೋಗ್ಯ ಸ್ಥಿತಿ ಹದಗೆಡಲು ಶುರುವಾಗಿದ್ದರಿಂದ ಏರ್ ಆ್ಯಂಬುಲೆನ್ಸ್ ಮೂಲಕ ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ಪ್ರಾಂಜಲ್​ರನ್ನ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.

The post ಐಎಎಸ್‌ ಪಾಸ್ ಮಾಡಿದ್ದ ಅಭ್ಯರ್ಥಿ ಕೊರೊನಾದಿಂದ ನಿಧನ appeared first on News First Kannada.

Source: newsfirstlive.com

Source link