
ಭೋವಿ ಅಭಿವೃದ್ಧಿ ನಿಗಮ ಎಂಡಿ ಲೀಲಾವತಿ
ಭೋವಿ ಅಭಿವೃದ್ಧಿ ನಿಗಮದಲ್ಲಿ IAS ಅಧಿಕಾರಿ ಲೀಲಾವತಿ ಸುದ್ದಿಗೋಷ್ಠಿ ನಡೆಸಿದ್ದು, ರವಿ ಎಂಬ ಡೈರೆಕ್ಟರ್ ಇದ್ದಾರೆ ಅವ್ರು ಎರಡು ಮೂರು ಚೆಕ್ ಕಳ್ಳತನ ಮಾಡಿದ್ರು ಹಾಗೂ ಜನರ ಬಳಿ ಹಣ ಇಸ್ಕೊಂಡಿದ್ದಾರೆ. ಐವತ್ತು ಸಾವಿರದಂತೆ ವಸೂಲಿ ಮಾಡಿ ಸುಮಾರು ಮೂರು ಕೋಟಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ, ಭೋವಿ ಅಭಿವೃದ್ಧಿ ನಿಗಮ ಎಂಡಿ ಲೀಲಾವತಿ ತಮಗೆ ಜೀವಬೆದರಿಕೆ ಇದ್ದು ಕಿರುಕುಳ ಆರೋಪ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಇಲಾಖೆ ಕಾರ್ಯದರ್ಶಿಗೆ ದೂರು ನೀಡಿದ್ರು ಕ್ರಮ ಕೈಗೊಳ್ಳದ ಹಿನ್ನಲೆ ಮಹಿಳಾ ಐಎಎಸ್ ಅಧಿಕಾರಿ ಲೀಲಾವತಿ ಐಎಎಸ್ ಅಧಿಕಾರಿಯ ಅಕ್ರಮ ಕುರಿತು ದಾಖಲೆ ಬಿಡುಗಡೆಗೆ ಮುಂದಾಗಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದಲ್ಲಿ IAS ಅಧಿಕಾರಿ ಲೀಲಾವತಿ ಸುದ್ದಿಗೋಷ್ಠಿ ನಡೆಸಿದ್ದು, ರವಿ ಎಂಬ ಡೈರೆಕ್ಟರ್ ಇದ್ದಾರೆ ಅವ್ರು ಎರಡು ಮೂರು ಚೆಕ್ ಕಳ್ಳತನ ಮಾಡಿದ್ರು ಹಾಗೂ ಜನರ ಬಳಿ ಹಣ ಇಸ್ಕೊಂಡಿದ್ದಾರೆ. ಐವತ್ತು ಸಾವಿರದಂತೆ ವಸೂಲಿ ಮಾಡಿ ಸುಮಾರು ಮೂರು ಕೋಟಿ ಪಡೆದಿದ್ದಾರೆ. ಈ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ ಎಂದು ಲೀಲಾವತಿ ಅವರು ಆರೋಪಿಸಿದ್ದು ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.