ಐಟಂ ಸಾಂಗ್​​​ನಲ್ಲಿ ಸಮಂತಾ ಸೊಂಟ ಬಳುಕಿಸೋರು ಯಾರು? ಕೊನೆಗೂ ಫಿಕ್ಸ್ ಆಯ್ತು ಆ ಹೆಸರು.!


ಡಿವೋರ್ಸ್​ ಆದ ನಂತರ ಸ್ವಲ್ಪ ಗ್ಯಾಪ್​ ತೆಗೆದುಕೊಂಡಿದ್ದ ಸಮಂತಾ ಈಗ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀರೋಯಿನ್​ ಆಗಿ ಬ್ಯಾಕ್​ ಟು ಬ್ಯಾಕ್​ ಹಿಟ್​ ಸಿನಿಮಾಗಳನ್ನು ನೀಡಿದ ಸಮಂತಾ, ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿರೋದನ್ನು ನಾವೆ ನಿಮಗೆ ಸಾಕಷ್ಟು ಬಾರಿ ಹೇಳಿದ್ದೇವೆ. ಅದೇನಂದ್ರೆ ‘ಪುಷ್ಪ’ ಸಿನಿಮಾದಲ್ಲಿ ಸಮಂತಾ ಐಟಂ ಸಾಂಗ್​ ನಲ್ಲಿ ಕಾಣಿಸಿಕೊಳ್ಳುತ್ತಿರೋದು.

ಸಮಂತಾ ಸಿನಿ ಕೆರಿಯರ್​ನಲ್ಲಿ ಇದು ಮೊದಲ ಐಟಂ ಸಾಂಗ್​. ಹಾಗಾಗಿ ಈ ಹಾಡಿನ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಫ್ಯಾನ್ಸ್​. ಯಾಕಂದ್ರೆ ಅಲ್ಲು ಅರ್ಜುನ್​ ಜೊತೆ ಸ್ಟೆಪ್​ ಹಾಕೋದು ಅಂದ್ರೆ ಅಷ್ಟು ಸುಲುಭದ ಮಾತಲ್ಲ. ಸಾಮಾನ್ಯವಾಗಿ ಅಲ್ಲು ಅರ್ಜುನ್​ ಸಿನಿಮಾಗಳಿಗೆ ಟಾಲಿವುಡ್​ ಸ್ಟಾರ್​ ಕೊರಿಯೋಗ್ರಾಫರ್​ಗಳಾದ, ಜಾನಿ ಮಾಸ್ಟರ್​ ಆಥವಾ ಶೇಖರ್​ ಮಾಸ್ಟರ್​ ನೃತ್ಯ ಸಂಯೋಜಿಸುತ್ತಾರೆ.

ಸ
ಗಣೇಶ್​ ಆಚಾರ್ಯ

ಆದರೆ ಈ ಬಾರಿ ‘ಪುಷ್ಪ’ ಸಿನಿಮಾದ ನಿರ್ದೇಶಕ ಸುಕುಮಾರ್ ಅಲ್ಲು ಅರ್ಜುನ್​ ಗೆ ಡ್ಯಾನ್ಸ್ ಹೇಳಿಕೊಡಲು ಬಾಲಿವುಡ್​ ಕೊರಿಯೋಗ್ರಾಫರ್​ಗೆ ಚಾನ್ಸ್​ ನೀಡಿದ್ದಾರೆ. ಬಾಲಿವುಡ್​ನ ಖ್ಯಾತ ಡ್ಯಾನ್ಸ್​ ಮಾಸ್ಟರ್​ ಗಣೇಶ್​ ಆಚಾರ್ಯ, ಈ ಬಾರಿ ಡ್ಯಾನ್ಸ್​ ಕೊರಿಯೋಗ್ರಾಫಿ​ ಮಾಡಲಿದ್ದಾರೆ. ಅಲ್ಲು ಅರ್ಜುನ್​ಗೆ ಗಣೇಶ್​ ಆಚಾರ್ಯ ಕೊರಿಯೋಗ್ರಾಫ್​ ಮಾಡುತ್ತಿರುವುದು ಇದೇ ಮೊದಲೇನಲ್ಲ. ‘ಡಿ ಜೆ’ ಸಿನಿಮಾದ ‘ಬಡಿಲೋ ಗುಡಿಲೋ’ ಅನ್ನೋ ಸಾಂಗ್​ ಕೊರಿಯೋಗ್ರಾಫ್​ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಈಗ ಮತ್ತೆ ಈ ಜೋಡಿ ಒಂದಾಗಿದ್ದು, ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ‘ಪುಷ್ಪ’ ಸಿನಿಮಾ ಐಟಂ ಸಾಂಗ್​ಗಾಗಿ ಸಮಂತಾ 5 ದಿನಗಳ ಕಾಲ್​ ಶೀಟ್​ ನೀಡಿದ್ದು ಆದಷ್ಟು ಬೇಗ ಸಾಂಗ್​ ಶೂಟ್​ ಆಗಲಿದೆ ಎಂದು ಮಾಹಿತಿ ತಿಳಿದು ಬಂದಿದೆ.

 

The post ಐಟಂ ಸಾಂಗ್​​​ನಲ್ಲಿ ಸಮಂತಾ ಸೊಂಟ ಬಳುಕಿಸೋರು ಯಾರು? ಕೊನೆಗೂ ಫಿಕ್ಸ್ ಆಯ್ತು ಆ ಹೆಸರು.! appeared first on News First Kannada.

News First Live Kannada


Leave a Reply

Your email address will not be published. Required fields are marked *