ಐಟಿ ದಾಳಿಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ -ಸಿಎಂ ಬೊಮ್ಮಾಯಿ

ಬೆಂಗಳೂರು: ಇವತ್ತಿನ ಐಟಿ ದಾಳಿಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಬಿಎಸ್‌ವೈ ಆಪ್ತ ಸಹಾಯಕನ ನಿವಾಸದ ಮೇಲೆ ಐಟಿ ದಾಳಿ ನಡೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು.. ದಾಳಿಯಲ್ಲಿರುವುದರಿಂದ ಅಧಿಕಾರಿಗಳು ನನಗೆ ಮಾಹಿತಿ ನೀಡಿಲ್ಲ. ಸಂಪೂರ್ಣ ಮಾಹಿತಿ ಪಡೆದುಕೊಳ್ತಿದ್ದೀನಿ ಎಂದರು.

ಐಟಿ ದಾಳಿಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಐಟಿ ದಾಳಿಯಿಂದ ಸರ್ಕಾರದ ಆಡಳಿತದ ಮೇಲೆ ಹೇಗೆ ಪರಿಣಾಮ‌ ಬೀರುತ್ತದೆ. ಐಟಿ ದಾಳಿ ಬಗ್ಗೆ ನನಗೇ ಏನೂ ಮಾಹಿತಿ ಇಲ್ಲ ಎಂದು ಇದೇ ವೇಳೆ ಪುನರುಚ್ಚರಿಸಿದರು.

ನಂತರ ಬೆಳಗಾವಿ ಮನೆ ಕುಸಿತ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ.. ಮೃತ ಕುಟುಂಬಗಳ ಜೊತೆ ಮಾತನಾಡಿದ್ದೇನೆ. ಐದು ಲಕ್ಷ ಪರಿಹಾರ‌ವನ್ನ ಘೋಷಿಸಿದ್ದೇನೆ ಎಂದರು.

News First Live Kannada

Leave a comment

Your email address will not be published. Required fields are marked *