ಬೆಂಗಳೂರು: ಪುನೀತ್ ಪುಣ್ಯಸ್ಮರಣೆ ನಿಮಿತ್ತ ಅರಮನೆ ಮೈದಾನದ ತ್ರಿಪುರನಿವಾಸಿಯಲ್ಲಿ ಅಪ್ಪು ಅಭಿಮಾನಿಗಳಿಗೆ ದೊಡ್ಮನೆ ಕುಟುಂಬ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಿದೆ. ಮತ್ತೊಂದು ಕಡೆ ಪತ್ರಕರ್ತರು ರಕ್ತದಾನ, ನೇತ್ರದಾನ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದ್ದು ನೇತ್ರದಾನದ ನೋಂದಣಿಯಲ್ಲಿ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು ಅಪ್ಪು ತ್ಮ ಸಾವಿನ ನಂತರ ನೇತ್ರದಾನ ಮಾಡಿದ ವಿಷಯ ತಿಳಿಯುತ್ತದ್ದಂತೆ ರಾದ್ಯಾದ್ಯಂತ ನೇತ್ರದಾನ ವಿಚಾರದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ. ನೆಚ್ಚಿನ ನಟನ ಅಗಲಿಕೆಯ ನೋವಿನಿಂದ ಇನ್ನು ಹೊರಬಾರದ ಜನ ಪುನೀತ್ ಆದರ್ಶಗಳನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಪುನೀತ್ ನಡೆದ ದಾರಿಲ್ಲೇ ನಾವು ಸಾಗುವುದಾಗಿ ವಾಗ್ದಾನ ಮಾಡುತ್ತಿದ್ದಾರೆ.
ನೇತ್ರದಾನ ನೋಂದಣಿಯಲ್ಲಿ ಐತಿಹಾಸಿಕ ದಾಖಲೆ..
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಪ್ಪು ಅಭಿಮಾನಿಗಳು ಆಸ್ಪತ್ರೆಗೆ ಬಂದು ನೇತ್ರದಾನ ಮಾಡಲು ಹೆಸರು ನೋಂದಾಯಿಸಿಕೊಂಡಿದ್ದಾರೆ, ಮತ್ತು ನೋಂದಾಯಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಬಂದ ಮಾಹಿತಿ ಪ್ರಕಾರ ರಾಜ್ಯದಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ದಿಢೀರ್ ಶೇ. 30ಕ್ಕೆ ಏರಿಕೆ ಕಂಡಿದೆ. ಇವತ್ತು ಅರಮನೆ ಮೈದಾನದಲ್ಲಿ ಪುನೀತ್ ಪುಣ್ಯಸ್ಮರಣೆ ನಿಮಿತ್ತ ದೊಡ್ಮನೆ ಅಭಿಮಾನಿಗ ದೇವರುಗಳಿಗೆ ಅನ್ನಸಂತರ್ಪಣೆ ಆಯೋಜಿಸಿತ್ತು. ಈ ವೇಳೆ ಪತ್ರಕರ್ತ ಮಿತ್ರರು ನಾರಾಯಣ ನೇತ್ರಾಲಯ ಸಹಯೋಗದೊಂದಿಗೆ ನೇತ್ರದಾನ ಕ್ಯಾಂಪ್ ಆಯೋಜಿಸಿತ್ತು.
ಇದನ್ನೂ ಓದಿ:ಕನ್ನಡಿಗರಿಗೆ ಸ್ಫೂರ್ತಿಯಾದ ’ದೊಡ್ಮನೆ ಹುಡ್ಗ’; ನೇತ್ರದಾನದಲ್ಲಿ ಶೇ.30 ರಷ್ಟು ಏರಿಕೆ
ಈ ಕ್ಯಾಂಪ್ನಲ್ಲಿ ಬರೋಬ್ಬರಿ ಒಂದೇ ದಿನ 3100 ಜನರು ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡಿದ್ದು ದಾಖಲೆ ಎನ್ನಲಾಗಿದೆ. ರಾಜ್ಯದಲ್ಲಿ ಇದುವರೆಗೆ ಒಂದು ದಿನಕ್ಕೆ ಒಂದು ಸಾವಿರದ ಮೇಲೆ ನೇತ್ರದಾನ ಮಾಡುವವರ ನೋಂದಣಿಯಾಗಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಅಪ್ಪು ಅಭಿಮಾನಿಗಳು ನೇತ್ರದಾನಕ್ಕೆ ಮುಂದಾಗುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣಕ್ಕೆ ಕಾರಣವಾಗಿದ್ದಾರೆ.