ಐತಿಹಾಸಿಕ ಸೇತುವೆ ಕೆಡವಲು ನಿಂತ ಅಮೇಜಾನ್​ ಒಡೆಯ..! ಜೆಫ್​ ಬೆಜೋಸ್​ ಹೊಸ ಪ್ಲಾನ್​ ಏನು..?


ಸೇತುವೆಗಳು ಇನ್ನೇನು ಮುರಿದು ಬೀಳುತ್ತವೆ ಅನ್ನುವಾಗ ಅದನ್ನು ಕೆಡವಿ ಪುನಃ ಕಟ್ಟುವುದನ್ನು ನಾವು ನೀವು ನೋಡಿದ್ದೇವೆ. ಇನ್ನು ಸೇತುವೆಗಳು ಮುರಿದು ಬೀಳುವವರೆಗೂ ಕಾಯುವ ಸರ್ಕಾರಗಳು ಇವೆ. ಅಂತಹದ್ರದಲ್ಲಿ ಕಟ್ಟಿರೋ ಸೇತುವೆ ಗಟ್ಟಿಮುಟ್ಟಾಗಿ ಚೆನ್ನಾಗಿ ಇದ್ರೂ, ನೂರಾರು ವರ್ಷ ಬಾಳಿಕೆ ಬರೋಹಾಗೆ ಇದ್ರೂ ಅದನ್ನು ಕೆಡವೋದನ್ನ ನೋಡಿದ್ದೀರಾ? ಅಂತಹ ಕೆಲಸವನ್ನು ನೆದರ್ಲ್ಯಾಂಡ್ಸ್​​ ಮಾಡಲು ಮುಂದಾಗಿದೆ. ಅದು ಏನಕ್ಕೆ ಅನ್ನೋದೇ ಸಖತ್‌ ಇಂಟ್ರೆಸ್ಟಿಂಗ್‌.

ಈ ಸೇತುವೆಯನ್ನು ಗಮನಿಸಿ ನೋಡಿ. ಏನಾದ್ರು ಮುರಿದು ಬೀಳುವ ಹಾಗೇ ಇದೆಯಾ? ಖಂಡಿತ ಇಲ್ಲ. ಇನ್ನು ಏನಾದ್ರೂ ದುರಸ್ತಿ ಮಾಡಬೇಕಾಗುವ ಹಾಗೇ ಕಾಣಿಸುತ್ತಾ ಇದೆಯಾ? ಅದೂ ಇಲ್ಲ. ಅದ್ಯಾವ ಕೋನದಲ್ಲಿ ನೋಡಿದ್ರೂ ನೂರಾರು ವರ್ಷ ಬಾಳಿಕೆ ಬರೋ ಹಾಗೇ ಗಟ್ಟಿಮುಟ್ಟಾಗಿ ಕಾಣಿಸುತ್ತಿದೆ. ಅಂದ ಹಾಗೇ ಇದು ಇರೋದು ನೆದರ್ಲ್ಯಾಂಡ್ಸ್‌ನಲ್ಲಿ. ಇದನ್ನು ಕೊನಿಂಗ್‌ಶೇವನ್‌ ಸೇತುವೆ ಎಂದೇ ಕರೆಯಲಾಗುತ್ತಿದೆ. ಐತಿಹಾಸಿಕವಾಗಿರೋ ಈ ಸೇತುವೆಯನ್ನು ಕೆಡುಗಲು ನೆದರ್ಲ್ಯಾಂಡ್ಸ್‌ ಪ್ಲಾನ್‌ ಮಾಡಿಕೊಂಡಿದೆ. ಅದು ಏನಕ್ಕೆ ಅನ್ನೋದನ್ನು ಹೇಳ್ತೀವಿ. ಅದಕ್ಕೂ ಮುನ್ನ ನಾವು ಒಬ್ಬ ಖ್ಯಾತ ಬ್ಯುಸಿನೆಸ್‌ ಮ್ಯಾನ್‌, ಜಗತ್ತಿನ ಶ್ರೀಮಂತ ವ್ಯಕ್ತಿ ಬಗ್ಗೆ ಹೇಳ್ತೀವಿ ನೋಡಿ.

ಈತ ಅಮೆರಿಕಾದ ಖ್ಯಾತ ಬ್ಯುಸಿನೆಸ್‌ ಮ್ಯಾನ್‌ ಜೆಫ್‌ ಬೆಜೋಸ್‌. ಬಹುಶಃ ಹೀಗೆ ಹೇಳಿದ್ರೆ ನಿಮ್ಗೆ ತಕ್ಷಣ ಫ್ಲಾಶ್‌ ಆಗದೇ ಇರಬಹುದು. ಅದೇ, ಇ-ಕಾರ್ಮಸ್‌ನ ದೈತ್ಯ ಕಂಪನಿ ಅಮೇಜಾನ್‌ ಇದೆಯಲ್ವಾ? ಅದರ ಸ್ಥಾಪಕ ಈತ. ಇಂದು ಅನೇಕ ಕಂಪನಿಗಳ ಮಾಲಿಕತ್ವ ಹೊಂದಿರೋ ಜೆಫ್‌ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ. ಏನಾದ್ರೂ ಒಂದು ಹೊಸ ಹೊಸ ಪ್ರಯತ್ನ ಮಾಡತ್ತಲೇ ಇರೋ ವ್ಯಕ್ತಿ. ಇದೀಗ ನೆದರ್ಲ್ಯಾಂಡ್ಸ್‌ನಲ್ಲಿ ಕೆಡುವಲು ಮುಂದಾಗಿರೋ ಸೇತುವೆಗೂ ಜೆಫ್‌ಗೂ ಒಂದು ಲಿಂಕ್‌ ಇದೆ.

ವ್ಹಾವ್‌! ಸಮುದ್ರದಲ್ಲಿ ತೇಲುತ್ತಿರುವ ಸ್ವರ್ಗ, ನೋಡ್ತಾ ಇದ್ರೇ ನೋಡ್ತಾನೇ ಇರಬೇಕು ಅನಿಸುವಷ್ಟು ಆಕರ್ಷಣೆ ಇದೆ. ಮಂತ್ರಮುಗ್ಧವಾಗಿಸೋ ವೈಭವವಿದೆ. ಸಿನಿಮಾ ಥಿಯೇಟರ್‌ಗಳು, ಸಿಮ್ಮಿಂಗ್‌ ಪೂಲ್‌ಗಳು, ಡ್ಯಾನ್ಸಿಂಗ್‌ ಪ್ಲೋ, ಹೆಲಿಪ್ಯಾಡ್‌ಗಳು. ಅಬ್ಬಾ! ಒಂದಾ ಎರಡಾ ಎಲ್ಲವೂ ಕಣ್ಮನ ಸಳೆಯುವಂತಿವೆ. ಅಂದಹಾಗೇ ಇದು ಜೆಫ್‌ ಬೆಜೋಸ್‌ ಖರೀದಿಸಿರೋ ಸೂಪರ್‌ ಯಾಚ್‌. ಅಂದ್ರೆ, ವಿಹಾರ ನೌಕೆ.

ದುಬಾರಿ ಮೊತ್ತದ ವಿಹಾರ ನೌಕೆ ಖರೀದಿಸಿದ ಜೆಫ್‌
ನೆದರ್ಲ್ಯಾಂಡ್ಸ್‌ನಲ್ಲಿ ನಿರ್ಮಾಣವಾಯ್ತು ಸುಂದರ ನೌಕೆ

ನೆದರ್ಲ್ಯಾಂಡ್ಸ್‌ ಅನ್ನು ಶ್ರೀಮಂತರ ನೌಕಾ ತಯಾರಿಕೆಯ ರಾಜಧಾನಿ ಎಂದೇ ಕರೆಯಲಾಗುತ್ತಿದೆ. ಇಲ್ಲಿ ನಾನಾ ರೀತಿಯ ದೋಣಿಗಳನ್ನು, ವಿಹಾರ ನೌಕೆಗಳನ್ನು, ಬೃಹತ್‌ ಹಡಗುಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಶ್ರೀಮಂತ ಉದ್ಯಮಿಗಳು, ಬೇರೆ ಬೇರೆ ದೇಶಗಳು ಇಲ್ಲಿ ಆರ್ಡರ್‌ ಕೊಟ್ಟು ದೋಣಿ, ವಿಹಾರ ನೌಕೆ, ಹಡಗುಗಳನ್ನು ಮಾಡಿಸಿ ತೆಗೆದುಕೊಂಡು ಹೋಗುತ್ತಾರೆ. ಹಾಗೇ, ಅಮೇಜಾನ್‌ ಕಂಪನಿ ಸ್ಥಾಪಕನಾಗಿರೋ ಜೆಫ್‌ ಬೆಜೋಸ್‌ ಕೂಡ ಕಳೆದ ವರ್ಷ ಸೂಪರ್‌ ಯಾಚ್‌ ಅಂದ್ರೆ ವಿಹಾರ ನೌಕೆ ನಿರ್ಮಾಣಕ್ಕೆ ಆರ್ಡರ್‌ ಮಾಡಿದ್ದರು. ಇದೀಗ ಅದು ಪೂರ್ಣಗೊಂಡಿದ್ದು, ಸಮುದ್ರದ ಮೂಲಕ ಪ್ರಯಾಣ ಬೆಳೆಸಲು ಸಜ್ಜಾಗಿ ನಿಂತುಕೊಂಡಿದೆ. ಆ ವಿಹಾರ ನೌಕೆ ಹೇಗಿದೆ ಗೊತ್ತಾ?

ತೇಲುವ ಸ್ವರ್ಗ!
417 ಅಡಿ ಅಗಲ, 130 ಅಡಿ ಎತ್ತರ ಹೊಂದಿದೆ ವಿಹಾರ ನೌಕೆ
ಸಿನಿಮಾ ಥಿಯೇಟರ್‌, ಐಶಾರಾಮಿ ಹೋಟೆಲ್‌ಗಳು ಇವೆ

ಸೂಪರ್‌ ಯಾಚ್‌ನ ವಿಶೇಷತೆ ಏನು ಅಂದ್ರೆ, ಅದೊಂದು ತೇಲುವ ಸ್ವರ್ಗ, 417 ಅಡಿ ಅಗಲ, 130 ಅಡಿ ಎತ್ತರವನ್ನು ಈ ವಿಹಾರ ನೌಕೆ ಹೊಂದಿದೆ. ಅದರಲ್ಲಿ ಸಿನಿಮಾ ವೀಕ್ಷಣೆಗೆ ಥಿಯೇಟರ್‌ಗಳು ಇದ್ದು, ಬೇಕಾದಾಗ ಸಿನಿಮಾಗಳನ್ನು ವೀಕ್ಷಣೆ ಮಾಡಬಹುದು. ಐಶಾರಾಮಿ ಹೋಟೆಲ್‌ಗಳು ನಿರ್ಮಾಣವಾಗಿದ್ದು, ಬಗೆ ಬಗೆಯ ಖಾದ್ಯಗಳನ್ನು ಮಾಡಲಾಗಿರುತ್ತದೆ. ಇನ್ನು ಬೇಕಾದಾಗ ಸ್ವಿಮ್ಮಿಂಗ್‌ ಮಾಡಲು ಸ್ವಿಮ್ಮಿಂಗ್‌ ಪೂಲ್‌ಗಳು ಇವೆ. ಖುಷಿಗೆ ಡ್ಯಾನ್ಸ್ ಮಾಡ್ಬೇಕು ಅಂದ್ರೆ ಡ್ಯಾನ್ಸಿಂಗ್‌ ಪ್ಲೋರ್‌ಗಳು ನಿರ್ಮಾಣವಾಗಿವೆ. ಅಗತ್ಯ ಸಂದರ್ಭದಲ್ಲಿ ಹೆಲಿಕಾಪ್ಟರ್‌ಗಳನ್ನು ಲ್ಯಾಂಡ್‌ ಮಾಡಲು ಎರಡು ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಹಾಗೇ ಸಮುದ್ರಲ್ಲಿ ಅಡ್ವೆಂಚರ್‌ಗೆ ಸಂಬಂಧಿಸಿದ ಸಲಕರಣೆಗಳು ಅದರಲ್ಲಿವೆ. ಅಂದ ಹಾಗೇ ಈ ವಿಹಾರ ನೌಕೆಯ ಬೆಲೆ ಸುಮಾರು 3600 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ನೆದರ್ಲ್ಯಾಂಡ್ಸ್‌ನಲ್ಲಿ ಇಲ್ಲಿಯವರೆಗೆ ನಿರ್ಮಾಣವಾಗಿರೋ ವಿಹಾರ ನೌಕೆಗಳಲ್ಲಿಯೇ ಇದು ಅತೀ ದೊಡ್ಡದಾಗಿದೆ.

ಯೆಸ್‌, ಭೂಲೋಕದಲ್ಲಿಯೇ ಎರಡನೇ ಶ್ರೀಮಂತನಾಗಿರೋ ಜೆಫ್‌ ಐಶಾರಾಮಿ ನೌಕೆಯೊಂದರ ನಿರ್ಮಾಣಕ್ಕೆ ಆರ್ಡರ್‌ ಮಾಡಿದ್ರು. ಹಾಗೇ ಸಿದ್ಧವಾಗಿರೋ ವಿಹಾರ ನೌಕೆಯನ್ನು ಸಮುದ್ರದ ಮೂಲಕ ತೆಗೆದುಕೊಂಡು ಹೋಗಲು ಪ್ಲಾನ್‌ ಸಿದ್ಧವಾಗಿತ್ತು. ಆದ್ರೆ, ಅಲ್ಲೊಂದು ಸಮಸ್ಯೆ ಆತನಿಗೆ ಅಡ್ಡಿಯಾಗಿತ್ತು. ಬಹುಶಃ ಬೇರೆಯಾರೇ ಆಗಿದ್ರು ಆ ಸಮಸ್ಯೆಯನ್ನು ಎದುರಿಸಿ ನೌಕೆಯನ್ನು ಸಮುದ್ರಕ್ಕೆ ಇಳಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದ್ರೆ, ಜೆಫ್‌ ಸಾಮಾನ್ಯ ವ್ಯಕ್ತಿ ಅಲ್ಲ. ಆತ ಅಂದುಕೊಂಡಿದ್ದನ್ನು ಸಾಧಿಸುವ ವ್ಯಕ್ತಿ.

ವಿಹಾರ ನೌಕೆ ಸಾಗಾಟಕ್ಕೆ ಐತಿಹಾಸಿಕ ಸೇತುವೆ ಅಡ್ಡಿ
ಕೊನಿಂಗ್‌ಶೇವನ್‌ ಸೇತುವೆ ಇತಿಹಾಸ ಹೇಗಿದೆ ಗೊತ್ತಾ?

ಯೆಸ್‌, ರಿಯಲ್‌ ಸಮಸ್ಯೆ ಇರೋದೇ ಇಲ್ಲಿ ನೋಡಿ. ಅದೇನೋ ಉತ್ಸಾಹದಲ್ಲಿ ಜೆಫ್‌ ಬೃಹತ್ ವಿಹಾರ ನೌಕೆಯನ್ನು ನಿರ್ಮಾಣ ಮಾಡಿಸಿದ್ದರು. ಅತ್ಯದ್ಭುತವಾಗಿ ಒಳಾಂಗಣದ ವಿನ್ಯಾಸವೂ ಆಗಿತ್ತು. 130 ಅಡಿ ಎತ್ತರ ಇದ್ದ ಇದು ನೀರಿನ ಮೇಲೆ ತೇಲುವ ಸ್ವರ್ಗದಂತೆ ಕಾಣುತ್ತಿದೆ. ಆದ್ರೆ, ಅದ್ಯಾವಾಗ ಈ ಸೂಪರ್‌ ಯಾಚ್‌ ಸಾಗಾಟದ ವಿಷ್ಯ ಬಂತೋ ಆವಾಗಲೇ ನಿಜವಾದ ಸಮಾಲು ಎದುರಾಗಿದ್ದು. ಹೌದು, ಇದನ್ನು ಸಮುದ್ರಕ್ಕೆ ಇಳಿಸಬೇಕು ಅಂದ್ರೆ ಇರೋದು ಒಂದೇ ಮಾರ್ಗ. ಅದೇ ಮಾರ್ಗದಲ್ಲಿ ಕೊನಿಂಗ್‌ ಶೇವನ್‌ ಸೋತುವೆಯೊಂದು ಅಡ್ಡ ಇದೆ. ಇದು 130 ಅಡಿ ಎತ್ತರದ ವಿಹಾರ ನೌಕೆಯ ಸಾಗಾಟಕ್ಕೆ ಅಡ್ಡಿಯಾಗಿದೆ.

ಇದೊಂದು ರೀತಿಯಲ್ಲಿ ಜೆಫ್‌ಗೆ ಸಂಕಷ್ಟ ತಂದಿತ್ತು. ಯಾಕೆಂದ್ರೆ ಅದೇನು ಸಾಮಾನ್ಯ ಸೇತುವೆ ಅಲ್ಲ, ನೆದರ್ಲ್ಯಾಂಡ್ಸ್‌ ಜನತೆಗೆ ಸೇತುವೆ ಜೊತೆ ಭಾವನಾತ್ಮಕ ಸಂಬಂಧ ಇದೆ. 1878 ರಲ್ಲಿ ನಿರ್ಮಿಸಲಾಗಿದ್ದ ಈ ಸೇತುವೆ 1940 ರಲ್ಲಿ 2ನೇ ಮಾಹಾಯುದ್ಧ ನಡೆಯುವಾಗ ನಾಜಿಗಳ ಬಾಂಬ್‌ ದಾಳಿಗೆ ನಾಶವಾಗಿತ್ತು. ಇದೀಗ ಅದನ್ನು ಮರು ನಿರ್ಮಿಸಲಾಗಿದೆ. ಹೀಗಿದ್ದಾಗ ಅದನ್ನು ಕೆಡುವಿ ವಿಹಾರ ನೌಕೆಯನ್ನು ತೆಗೆದುಕೊಂಡು ಹೋಗಲು ನೆದರ್ಲ್ಯಾಂಡ್ಸ್‌ ಸರ್ಕಾರ ಅವಕಾಶ ನೀಡುತ್ತಾ? ಅಂತಹವೊಂದು ಯೋಚನೆಯನ್ನು ಊಹಿಸುವುದು ಕಷ್ಟವಾಗಿತ್ತು. ಆದ್ರೆ, ಅಲ್ಲಿರೋದು ಭೂಲೋಕದ ಎರಡನೇ ಶ್ರೀಮಂತ ಜೆಫ್‌ ಆಗಿದ್ದರು.

ಐತಿಹಾಸಿಕ ಸೇತುವೆ ಒಡೆಯಲು ಒಪ್ಪಿಗೆ ಸಿಕ್ತು
ಒಪ್ಪಿಗೆ ನೀಡುವ ಮುನ್ನ ನಡೆಯಿತು ವೆಚ್ಚದ ಮಾತುಕತೆ

ಯೆಸ್‌, ಸೂಪರ್‌ ಯಾರ್ಚ್‌ ಚಲಾಯಿಸಿಕೊಂಡು ಹೋಗಲು ಬೇರೆ ಮಾರ್ಗವೇ ಇಲ್ಲ. ಪರ್ಯಾಯ ಐಡಿಯಾವೂ ಇಲ್ಲ. ಇರೋದು ಮೂರೇ ದಾರಿಯಾಗಿತ್ತು. ಒಂದು ಯಾರ್ಚ್‌ ಅನ್ನು ಅಲ್ಲಿಯೇ ಬಿಟ್ಟು ಹೋಗೋದು, ಎರಡು ಯಾಚ್​ ಎತ್ತರ ಕಡಿಮೆ ಮಾಡಿಸೋದು. ಮೂರನೇ ಮಾರ್ಗ ಅಂದ್ರೆ ಸೇತುವೆ ಒಡೆಯುವುದು. ಈ ಬಗ್ಗೆ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಲಾಗಿದೆ. ಒಮ್ಮೆ ಯಾರ್ಚ್‌ ಹೈಟ್‌ ತಗ್ಗಿಸಲು ಮುಂದಾದ್ರೆ ಸೌಂದರ್ಯಕ್ಕೆ ಧಕ್ಕೆಯಾಗುತ್ತೆ. ಅದೆಷ್ಟೇ ಮರು ನಿರ್ಮಾಣ ಮಾಡಿದ್ರೂ ಮೊದಲಿನ ರೂಪಕ್ಕೆ ಬರಲು ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ಸೇತುವೆ ಒಡೆಯಲು ಅನುಕೂಲ ಮಾಡಿಕೊಡುವಂತೆ ನೆದರ್ಲ್ಯಾಂಡ್ಸ್‌ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಕರಾರು ಪತ್ರದೊಂದಿದೆ ಅಲ್ಲಿಯ ಸರ್ಕಾರ ಪರಿಸ್ಥಿತಿಯನ್ನು ಅರಿತು ಸೇತುವೆ ಒಡೆಯಲು ಅನುಮತಿ ಕೊಟ್ಟಿದೆ.

ಸೇತುವೆ ಕೆಡವಿ, ಮರು ನಿರ್ಮಿಸುವುದು ಜೆಫ್‌ ಹೊಣೆ
ಸಂಪೂರ್ಣ ವೆಚ್ಚ ನೋಡಿಕೊಳ್ತಾರೆ ಶ್ರೀಮಂತ ಉದ್ಯಮಿ

ಜೆಫ್‌ ಪ್ರೀತಿಯಿಂದ ಸೂಪರ್‌ ಯಾರ್ಚ್‌ ರೆಡಿ ಮಾಡಿಸಿದ್ರು. ಆದ್ರೆ, ಅದನ್ನು ತೆಗೆದುಕೊಂಡು ಹೋಗಲು ಭರ್ಜರಿ ಸವಾಲು ಇತ್ತು. ಇದೀಗ ಸೇತುವೆ ಕೆಡುವಿ ಯಾರ್ಚ್‌ ಸಾಗಾಟ ಮಾಡಲು ಒಪ್ಪಿಗೆ ಸಿಕ್ಕಿದೆ. ಹಾಗೇ ಸಾಗಾಟದ ನಂತರ ಸೇತುವೆಯನ್ನು ಪುನಃ ನಿರ್ಮಿಸಬೇಕು. ಹಾಗಾದ್ರೆ, ಅಷ್ಟೊಂದು ಖರ್ಚನ್ನು ಯಾರು ನಿಭಾಯಿಸುತ್ತಾರೆ? ಅನ್ನೋ ಪ್ರಶ್ನೆ ನಿಮ್ಮಲ್ಲಿ ಬಂದಿರಬಹುದು. ಬಟ್‌ ಅದರ ಸಂಪೂರ್ಣ ಹೊಣೆ ಜೆಫ್‌ ಹೊಂದಿದ್ದಾರೆ. ಎಲ್ಲಾ ರೀತಿಯ ಖರ್ಚನ್ನು ನೀಡುವುದಾಗಿ ಕರಾರು ಪತ್ರಕ್ಕೆ ಸಹಿ ಹಾಕಿದ್ದಾರೆ. ಇದೇ ಕಾರಣಕ್ಕೆ ಅಲ್ಲಿಯ ಸರ್ಕಾರ ಸೇತುವೆಯನ್ನು ಕೆಡುವಲು ಅನುಮತಿ ನೀಡಿದೆ.

ಸೇತುವೆ ಕೆಡವಲು ಸ್ಥಳೀಯರಿಂದ ಭಾರೀ ವಿರೋಧ
ಐತಿಹಾಸಿಕ ಸೇತುವೆ ಕೆಡುವುದು ಬೇಡ ಅಂತಾರೆ ಜನ

ನೆದರ್ಲ್ಯಾಂಡ್ಸ್‌ ಸರ್ಕಾರವೇನೋ ಪರಿಸ್ಥಿತಿ ಅರಿತು ಸೇತುವೆ ಕೆಡುವಲು ಒಪ್ಪಿಗೆ ನೀಡಿದೆ. ಇನ್ನು ಜೆಫ್‌ ಸಂಪೂರ್ಣ ವೆಚ್ಚ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಆದ್ರೆ, ಅದು ಐತಿಹಾಸಿಕ ಸೇತುವೆ ಅದನ್ನು ಕೆಡುವುದು ಬೇಡ ಅಂತಿದ್ದಾರೆ ಅಲ್ಲಿಯ ಜನ. ಇದು ಒಂದು ರೀತಿಯಲ್ಲಿ ನೆದರ್ಲ್ಯಾಂಡ್ಸ್‌ ಸರ್ಕಾರಕ್ಕೆ ಇಕ್ಕಟ್ಟಿನ ಪರಿಸ್ಥಿತಿಯಾಗಿದೆ. ಅತ್ತ, ಯಾರ್ಚ್‌ ಸಾಗಾಟಕ್ಕೆ ತಡೆಯೊಡ್ಡುವಂತೆಯೂ ಇಲ್ಲ. ಇತ್ತ ಜನರ ಅಭಿಪ್ರಾಯವನ್ನು ನಿರ್ಲಕ್ಷ್ಯ ಮಾಡುವಂತೆಯೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅದನ್ನು ಸರ್ಕಾರ ಹೇಗೆ ನಿಭಾಯಿಸುತ್ತೆ ಅನ್ನೋದನ್ನು ಕಾದು ನೋಡೋಣ.

ಯಾವುದಾದ್ರೂ ಕಠಿಣ ಸಮಸ್ಯೆ ಎದುರಾಗಿ ಬಿಟ್ರೆ ಆಕಾಶವೇ ಮೈಮೇಲೆ ಬಿದ್ದಿರೋ ರೀತಿ ವರ್ತಿಸುತ್ತೇವೆ. ಇಡೀ ಭೂಮಂಡಲವನ್ನೇ ತಲೆ ಮೇಲೆ ಹೊತ್ತು ನಿಂತಿರುವಂತೆ ಚಟಪಡಿಸುತ್ತೇವೆ. ಆದ್ರೆ, ವಿಶ್ವದ 2ನೇ ಶ್ರೀಮಂತ ಉದ್ಯಮಿ ಜೆಫ್‌ ಬೆಜೋಸ್‌ ಚಿಟಿಕೆ ಹೊಡೆಯೋದ್ರಲ್ಲಿ ತನ್ನ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾನೆ.

News First Live Kannada


Leave a Reply

Your email address will not be published.