ಐದನೇ ದಿನ ತಲುಪಿದ ಪಾದಯಾತ್ರೆ: ಇಂದು ಹೈಡ್ರಾಮಾ ಸಾಧ್ಯತೆ.. ಯಾಕೆ ಗೊತ್ತಾ..?


ಬೆಂಗಳೂರು: ಕೋರ್ಟ್​​ ಮಂಗಳಾರತಿ ನಡುವೆ ಕಾಂಗ್ರೆಸ್​​ ಪಡೆಯ ಮೇಕೆದಾಟು ನಡಿಗೆ ನಾಲ್ಕನೇ ದಿನ ಪೂರ್ಣಗೊಳಿಸಿದೆ. ಇಂದೇ ನೀರಿಗಾಗಿ ನಡಿಗೆ ಅಂತ್ಯವಾಗುತ್ತಾ ಅನ್ನೋ ಅನುಮಾನ ಮೂಡಿದೆ. ಕೋರ್ಟ್ ಬೀಸಿದ ಚಾಟಿಗೆ ಸರ್ಕಾರ ಕಾಂಗ್ರೆಸ್ ಪಾದಯಾತ್ರೆಗೆ ನಿರ್ಬಂಧ ವಿಧಿಸಿದೆ. ಡಿ.ಕೆ.ಸುರೇಶ್​ ಸರ್ಕಾರದ ಆದೇಶಕ್ಕೆ ಡೋಂಟ್​ ಕೇರ್​ ಎಂದಿದ್ದಾರೆ. ಆದ್ರೆ ಸರ್ಕಾರ ಕಾಂಗ್ರೆಸ್​​ ಘಟಾನುಘಟಿ ನಾಯಕರನ್ನ ವಶ ಪಡೆಯೋ ಪ್ಲಾನ್ ಮಾಡಿದೆ.

ಮೇಕೆದಾಟು ಪಾದಯಾತ್ರೆ ಬಗ್ಗೆ ಕೋರ್ಟ್ ಗರಂ ಆಗ್ತಿದ್ದಂತೆ ಸರ್ಕಾರ ಅಲರ್ಟ್ ಆಗಿದೆ. ಕೋರ್ಟ್ ಆದೇಶ ಪಾಲನೆಗೆ ಸಿದ್ಧ ಅಂತಾ ಸರ್ಕಾರ ಹೇಳಿದೆ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆಯನ್ನ ಸರ್ಕಾರ ನಿರ್ಬಂಧಿಸಿದೆ. ತಕ್ಷಣವೇ ಪಾದಯಾತ್ರೆ ನಿಲ್ಲಿಸಬೇಕೆಂದು ಆದೇಶ ಹೊರಡಿಸಿದೆ. ಡಿಸಿಗಳು, ಎಸ್ಪಿಗಳು, ಸಾರಿಗೆ ಆಯುಕ್ತರು ಆದೇಶ ಜಾರಿಗೊಳಿಸಬೇಕು ಎಂದು ಸೂಚನೆ ನೀಡಿದೆ. ಇನ್ನು ಸರ್ಕಾರದ ಆದೇಶದಲ್ಲಿ ಏನಿದೆ.

ರಾಮನಗರಕ್ಕೆ ‘ಆದೇಶ’ದ ದಿಗ್ಬಂಧನ

  • ನಿರ್ಬಂಧ 1: ಜನರು ಪಾದಯಾತ್ರೆಯಲ್ಲಿ ಭಾಗಿಯಾಗಲು ಅವಕಾಶವಿಲ್ಲ
  • ನಿರ್ಬಂಧ 2: ಪಾದಯಾತ್ರೆಯಲ್ಲಿ ಭಾಗಿಯಾಗುವ ವಾಹನ ಸಂಚಾರಕ್ಕೂ ಬ್ರೇಕ್
  • ನಿರ್ಬಂಧ 3: ಅಂತರ್​ ಜಿಲ್ಲಾ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿ ಆದೇಶ
  • ನಿರ್ಬಂಧ 4: ರಾಮನಗರ ಜಿಲ್ಲೆಯೊಳಗೆ ಹೊರಗಿನ ವಾಹನಗಳ ಪ್ರವೇಶವಿಲ್ಲ
  • ನಿರ್ಬಂಧ 5: ಪಾದಯಾತ್ರೆಗೆ ಹೊರಗಡೆಯಿಂದ ಬರುವವರಿಗೂ ಅವಕಾಶವಿಲ್ಲ

ಪಾದಯಾತ್ರೆ ತಡೆ ಆದೇಶದ ಬೆನ್ನಲ್ಲೇ ಪೊಲೀಸರು ಅಲರ್ಟ್
ಇಂದು ಕಾಂಗ್ರೆಸ್​​ ಪಾದಯಾತ್ರೆ ಅಂತ್ಯ ಹಾಡಲು ಸರ್ಕಾರ ತಯಾರಿ ಮಾಡಕೊಂಡಿದೆ. ಕಾಂಗ್ರೆಸ್​​ ಘಟಾನುಘಟಿ ನಾಯಕರನ್ನ ವಶಕ್ಕೆ ಪ್ಲಾನ್ ರೂಪಿಸಲಾಗುತ್ತಿದೆ. ​​​ಈಗಾಗಲೇ ಕೈ ನಾಯಕರ ಮೇಲೆ ಸರ್ಕಾರ ಮೂರು ಐಐಆರ್​ ಹಾಕಿದೆ. ಡಿ.ಕೆ. ಶಿವಕುಮಾರ್​ ಹಾಗೂ ಸಿದ್ದರಾಮಯ್ಯರನ್ನು ಗೃಹ ಬಂಧನದಲ್ಲಿರಿಸುವ ಸಾಧ್ಯತೆಯಿದೆ.

ಪೊಲೀಸರು ಅಲರ್ಟ್​
ಪಾದಯಾತ್ರೆ ತಡೆ ಆದೇಶ ಬೆನ್ನಲ್ಲೇ ಪೊಲೀಸರು ಅಲರ್ಟ್​ ಆಗಿದ್ದಾರೆ. ರಾಮನಗರದಲ್ಲಿ ರಾತ್ರೋರಾತ್ರಿ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದಾರೆ. ನಿನ್ನೆ ರಾತ್ರಿಯೇ ರಾಮನಗರಕ್ಕೆ 3 ಸಾವಿರಕ್ಕೂ ಹೆಚ್ಚು ಪೊಲೀಸರು ಆಗಮಿಸಿದ್ದಾರೆ. ನಗರದ ಐಜೂರು ವೃತ್ತದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪಾದಯಾತ್ರೆಯಲ್ಲಿ ಭಾಗವಹಿಸಲು ವಾಹನಗಳು ಬರುವದನ್ನ ತಡೆಯಲು ಪೊಲೀಸರು ಸಜ್ಜಾಗಿದ್ದಾರೆ. ಆರ್​​ಸಿಎಸ್ ಕಲ್ಯಾಣ ಮಂಟಪದ ಬಳಿ 6 ರಿಸರ್ವ್ ವ್ಯಾನ್ ಕೂಡ ಸಿದ್ಧವಾಗಿ ನಿಂತಿವೆ.

ಯಾವುದೇ ಕಾರಣಕ್ಕೂ ನಾವು ಪಾದಯಾತ್ರೆ ನಿಲ್ಲಿಸಲ್ಲ
ಸರ್ಕಾರ ರಾಮನಗರಕ್ಕೆ ಆದೇಶದ ದಿಗ್ಬಂಧನ ವಿಧಿಸಿದ್ರೆ, ಡಿ.ಕೆ.ಸುರೇಶ್​​ ಮಾತ್ರ ಡೋಂಟ್​ ಕೇರ್​ ಎಂದಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಪಾದಯಾತ್ರೆ ನಿಲ್ಲಲ್ಲ, ಇಂದು ಬೆಳಗ್ಗೆ ನಾವು ಪಾದಯಾತ್ರೆ ಮಾಡೇ ಮಾಡ್ತೇವೆ ಅಂತ ಸರ್ಕಾರಕ್ಕೆ ಸವಾಲೆಸಿದ್ದಾರೆ. ಅತ್ತ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಅನುಸರಿಸುತ್ತೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.

ಪಾದಯಾತ್ರೆ ಕೈಬಿಡುವಂತೆ ಕಾಂಗ್ರೆಸ್​​ ನಾಯಕರಿಗೆ ಮಾಜಿ ಸಿಎಂ ಎಸ್​.ಎಂ.ಕೃಷ್ಣ ಕೂಡ ಪತ್ರ ಬರೆದಿದ್ದಾರೆ. ಅತ್ತ ಸಿಎಂ ಬೊಮ್ಮಾಯಿ ಟ್ವೀಟರ್​ ಮೂಲಕ ಪಾದಯಾತ್ರೆ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಒಟ್ಟಾರೆ ಕಾಂಗ್ರೆಸ್​​​​​​ ಮೇಕೆದಾಟು ನಡಿಗೆ ದಳಪತಿಗಳ ಭದ್ರಕೋಟೆಗೆ ಪ್ರವೇಶಿಸಿದೆ. ಇದರ ನಡುವೆ ಸರ್ಕಾರ ಪಾದಯಾತ್ರೆಗೆ ತಡೆ ನೀಡಿದೆ. ಕೈನಾಯಕರು ಪಾದಯಾತ್ರೆ ಇಂದೇ ನಿಲ್ಲೂತ್ತೋ, ಅಥವಾ ಮುಂದೆ ಸಾಗೂತ್ತೋ ಅನ್ನೋದೆ ಸಾಧ್ಯದ ಕುತೂಹಲವಾಗಿದೆ.

The post ಐದನೇ ದಿನ ತಲುಪಿದ ಪಾದಯಾತ್ರೆ: ಇಂದು ಹೈಡ್ರಾಮಾ ಸಾಧ್ಯತೆ.. ಯಾಕೆ ಗೊತ್ತಾ..? appeared first on News First Kannada.

News First Live Kannada


Leave a Reply

Your email address will not be published. Required fields are marked *