ಐದು ದಿನ ಕೊಪ್ಪಳ ಸಂಪೂರ್ಣ ಲಾಕ್​ಡೌನ್​ಗೆ ಸೂಚಿಸಿದ ಸಚಿವ ಬಿ.ಸಿ.ಪಾಟೀಲ್

ಐದು ದಿನ ಕೊಪ್ಪಳ ಸಂಪೂರ್ಣ ಲಾಕ್​ಡೌನ್​ಗೆ ಸೂಚಿಸಿದ ಸಚಿವ ಬಿ.ಸಿ.ಪಾಟೀಲ್

ಕೊಪ್ಪಳ: ರಾಜ್ಯದಾದ್ಯಂತ ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಸರ್ಕಾರ ಸೆಮಿ ಲಾಕ್‍ಡೌನ್ ಮಾಡಿದ್ದರೂ ಸೋಂಕಿನ ಪ್ರಕರಣ ಸಂಖ್ಯೆ ಜಾಸ್ತಿ ಆಗ್ತಿದೆ. ಈ ಹಿನ್ನೆಲೆಯಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಕೊಪ್ಪಳ ಜಿಲ್ಲೆಯನ್ನು ಐದು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಮಾಡುವಂತೆ ಸೂಚನೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮೇ 17ರಿಂದ ಸಂಪೂರ್ಣ ಜಿಲ್ಲೆಯನ್ನು ಬಂದ ಮಾಡಲಾಗುವುದು. ಅಗತ್ಯ ವಸ್ತುಗಳು ಹೊರತು ಪಡೆಸಿ ಸಂಪೂರ್ಣ ಲಾಕ್‍ಡೌನ್ ಮಾಡುತ್ತೇವೆ. ಎಲ್ಲಾ ಮದುವೆ ಸಮಾರಂಭಗಳಿಗೆ ಮೇ 30 ರವರೆಗೆ ಬ್ರೇಕ್ ಹಾಕಲಾಗಿದೆ. ತರಕಾರಿ ಮಾರುಕಟ್ಟೆಯನ್ನು ಬಂದ್ ಮಾಡಲಾಗುವುದು. ಗ್ರಾಮೀಣ ಮಟ್ಟದಲ್ಲಿ ಅಲ್ಲಿನ ಜನಪ್ರತಿನಿಧಿಗಳಿಗೆ ಕಟ್ಟುನಿಟ್ಟನ ಕ್ರಮಕ್ಕೆ ಪತ್ರ ಬರೆಯಲಾಗಿದೆ.

ಖಾಸಗಿ ಆಸ್ಪತ್ರೆಗಳಿಗೆ ಖಡಕ್ ಸೂಚನೆ ನೀಡಲಾಗಿದ್ದು, ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಇದ್ದರೆ ತಕ್ಷಣ ತಿಳಿಸಬೇಕು. ಅನುಮತಿ ಇಲ್ಲದೆ ಕೋವಿಡ್ ಕೇಂದ್ರಗಳನ್ನು ಆರಂಭ ಮಾಡುವಂತಿಲ್ಲ. ಐಸೋಲೇಷನ್ ಆಗಿರುವವರನ್ನು ಕ್ವಾರಂಟೀನ್ ಮಾಡಲಾಗುವುದು. ಕೊರೊನಾ ಯಾರನ್ನು ಬಿಡುತ್ತಿಲ್ಲ ಸಾಕಷ್ಟು ಡೇಂಜರ್ ಇದೆ ಎಂದರು.

The post ಐದು ದಿನ ಕೊಪ್ಪಳ ಸಂಪೂರ್ಣ ಲಾಕ್​ಡೌನ್​ಗೆ ಸೂಚಿಸಿದ ಸಚಿವ ಬಿ.ಸಿ.ಪಾಟೀಲ್ appeared first on News First Kannada.

Source: newsfirstlive.com

Source link