ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾದ ಸಾಂಗ್ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಮೇಕಿಂಗ್ ಸಾಂಗ್ ವಿಶೇಷವೆನಂದ್ರೆ ಐದು ಭಾಷೆಯಲ್ಲಿ ಚಾರ್ಲಿ ಸಿನಿಮಾದ ಹಾಡು ಹೇಗೆ ಮೂಡಿತು ಅನ್ನೊ ಸ್ವಾರಸ್ಯವನ್ನ ಈ ಮೇಕಿಂಗ್ ವಿಡಿಯೋ ಬಿಚ್ಚಿಟ್ಟಿದೆ.

ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ಬರ್ತ್​​​​​ಡೇ ಪ್ರಯುಕ್ತ ಬಿಡುಗಡೆಯಾದ ಚಾರ್ಲಿ ಸಾಂಗ್ ಟೀಸರ್ ಸಖತ್ ಮೆಚ್ಚುಗೆಗೆ ಪಾತ್ರವಾಯ್ತು. ಚಾರ್ಲಿ ಪಾತ್ರವನ್ನ ಮಾಡಿರೋ ಶ್ವಾನದ ಆ್ಯಕ್ಟಿಂಗ್ ಅನ್ನ ಚಿತ್ರಪ್ರೇಮಿಗಳು ನೋಡಿ ಕೊಂಡಾಡಿದ್ರು. ಸದ್ಯ ಈ ಹಾಡು ಹೇಗೆ ರೆಕಾರ್ಡ್ ಮಾಡಿದ್ದು ಅನ್ನೋದನ್ನ ಚಿತ್ರತಂಡ ಮೇಕಿಂಗ್ ಮೂಲಕ ಬಿಚ್ಚಿಟ್ಟಿದೆ.

ಕಿರಣ್ ರಾಜ್ ಕೆ ನಿರ್ದೇಶನದ ಈ ಚಿತ್ರಕ್ಕೆ ನೋಬಿನ್ ಪೌಲ್ ಸಂಗೀತ ಸಂಯೋಜನೆ ಮಾಡಿದ್ದಾರೆ.. ಐದೈದು ಭಾಷೆಗಳಲ್ಲಿ 777 ಚಾರ್ಲಿ ಮೂಡಿ ಬರುತ್ತಿದೆ.

The post ಐದೈದು ಭಾಷೆಯಲ್ಲಿ ಚಾರ್ಲಿ ಸಿನಿಮಾದ ಹಾಡು ಹೇಗೆ ಮೂಡಿತು? ಇಲ್ಲಿದೆ ಮೇಕಿಂಗ್ ವಿಡಿಯೋ appeared first on News First Kannada.

Source: newsfirstlive.com

Source link