ಐಪಿಎಲ್​ನಲ್ಲಿ ಅನ್ ಸೋಲ್ಡ್, 1 ರನ್​ನಿಂದ ಬಿಪಿಎಲ್ ಫೈನಲ್​ ಸೋಲು! ಈಗ ಮಂಡಳಿಯಿಂದ ಶಕೀಬ್​ಗೆ ಶೋಕಾಸ್ ನೋಟಿಸ್ | Shakib Al Hasan breaks BPL bio bubble franchise issued show cause notice by BCB


ಐಪಿಎಲ್​ನಲ್ಲಿ ಅನ್ ಸೋಲ್ಡ್, 1 ರನ್​ನಿಂದ ಬಿಪಿಎಲ್ ಫೈನಲ್​ ಸೋಲು! ಈಗ ಮಂಡಳಿಯಿಂದ ಶಕೀಬ್​ಗೆ ಶೋಕಾಸ್ ನೋಟಿಸ್

ಶಕೀಬ್ ಅಲ್ ಹಸನ್

ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ಆಡುತ್ತಿರುವ ಶಕೀಬ್ ಅಲ್ ಹಸನ್​ಗೆ ಕಂಟಕ ಎದುರಾಗಿದೆ. ವಾಸ್ತವವಾಗಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಶಕೀಬ್ ತಂಡದ ಫಾರ್ಚೂನ್ ಬಾರಿಶಾಲ್‌ಗೆ ಶೋಕಾಸ್ ನೋಟಿಸ್ ನೀಡಿದೆ. ಶಕೀಬ್ ಅಲ್ ಹಸನ್ ಬಯೋ ಬಬಲ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಾಂಗ್ಲಾದೇಶ ಕ್ರಿಕೆಟ್ ಅಧ್ಯಕ್ಷ ನಜ್ಮುಲ್ ಹಸನ್ ಕಿ ಮಾನೆ ಅವರಿಗೆ ಈ ನೋಟಿಸ್ ಕಳುಹಿಸಲಾಗಿದೆ. ಬಯೋಬಬಲ್‌ನ ಪ್ರೋಟೋಕಾಲ್ ಅನ್ನು ಉಲ್ಲಂಘಿಸಿ ಶಾಕಿಬ್ ಅಲ್ ಹಸನ್‌ಗೆ ಚಿತ್ರೀಕರಣಕ್ಕೆ ಸೇರಲು ಫ್ರಾಂಚೈಸಿ ಅನುಮತಿ ನೀಡಿತ್ತು. ಗುರುವಾರದ ಫೈನಲ್‌ಗೂ ಮುನ್ನ ನಾಯಕನೊಂದಿಗಿನ ಫೋಟೋ ಶೂಟ್ ಮತ್ತು ತರಬೇತಿಯಲ್ಲಿ ಶಕೀಬ್ ಅಲ್ ಹಸನ್ ಭಾಗವಹಿಸಲಿಲ್ಲ. ಬದಲಾಗಿ, ಸಾಫ್ಟ್ ಡ್ರಿಂಕ್ಸ್ ಕಂಪನಿಯ ಜಾಹೀರಾತು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ಘಟನೆ ಈಗ ಅವರಿಗೆ ಮುಳುವಾಗಿದೆ.

BCB ನೋಟಿಸ್

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, “ನಾವು ಈ ಬಗ್ಗೆ ಫ್ರಾಂಚೈಸಿಗೆ ಶೋಕಾಸ್ ನೋಟಿಸ್ ನೀಡಿದ್ದೇವೆ. ಶಕೀಬ್ ಬಯೋಬಬಲ್ ಪ್ರೋಟೋಕಾಲ್ ಅನ್ನು ಏಕೆ ಉಲ್ಲಂಘಿಸಿದ್ದಾರೆ ಎಂಬುದಕ್ಕೆ ಉತ್ತರ ಕೇಳಿದ್ದೇವೆ. ಯಾವ ಆಟಗಾರನೂ ಸಹ ಬಯೋಬಬಲ್ ಮುರಿಯದಂತೆ ನೋಡಿಕೊಳ್ಳಲು ನಾವು ಫ್ರಾಂಚೈಸಿಗಳನ್ನು ಕೇಳಿದ್ದೇವು. ಆದರೆ ಫ್ರಾಂಚೈಸಿ ನಿರ್ಲಕ್ಷ್ಯದಿಂದ ಹೀಗಾಗಿದೆ ಅದಕ್ಕಾಗಿಯೇ ನಾವು ಅವರಿಗೆ ನೋಟಿಸ್ ಕಳುಹಿಸಿದ್ದೇವೆ ಎಂದಿದ್ದಾರೆ.

ಅಂತಿಮ ಪಂದ್ಯಕ್ಕೂ ಮುನ್ನ ಶಕೀಬ್​ಗೆ ಕೊರೊನಾ ನೆಗೆಟಿವ್

ಫೈನಲ್‌ಗೂ ಮೊದಲು ಶಕೀಬ್ ಅಲ್ ಹಸನ್ ಅವರ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಅದರ ನಂತರವೇ ಅವರು ಕೊಮಿಲ್ಲಾ ವಿಕ್ಟೋರಿಯನ್ಸ್ ವಿರುದ್ಧ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನ ಫೈನಲ್‌ನಲ್ಲಿ ಆಡಿದರು ಎಂದು ಫಾರ್ಚೂನ್ ಬಾರಿಶಾಲ್ ಸಿಇಒ ಸಬ್ಬೀರ್ ಖಾನ್ ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಕ್ರಿಕ್‌ಬಝ್‌ಗೆ ತಿಳಿಸಿದರು.

ಫೈನಲ್‌ನಲ್ಲಿ ಶಕೀಬ್‌ ಪಡೆಗೆ ಸೋಲು

ಆದರೆ, ಫೈನಲ್ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಬಳಗ ಫಾರ್ಚೂನ್ ಬಾರಿಶಾಲ್​ಗೆ ಅಷ್ಟೊಂದು ಅದೃಷ್ಟ ಒಲಿಯಲಿಲ್ಲ. ಪಂದ್ಯವನ್ನು ಕೇವಲ 1 ರನ್‌ಗಳಿಂದ ಕಳೆದುಕೊಂಡಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಮಿಲ್ಲಾ ವಿಕ್ಟೋರಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 151 ರನ್ ಗಳಿಸಿತು. ಉತ್ತರವಾಗಿ ಫಾರ್ಚೂನ್ ಬಾರಿಶಾಲ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 150 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಲ್ಲಿ ಶಾಕಿಬ್ ಅಲ್ ಹಸನ್ 4 ಓವರ್ ಗಳಲ್ಲಿ 30 ರನ್ ನೀಡಿ 1 ವಿಕೆಟ್ ಪಡೆದು 7 ಎಸೆತಗಳಲ್ಲಿ 7 ರನ್ ಕಲೆ ಹಾಕಿದರು.

TV9 Kannada


Leave a Reply

Your email address will not be published. Required fields are marked *