ಯಶಸ್ಸಿಯಾಗಿ ಅರ್ಧ ಹಾದಿ ಕ್ರಮಿಸಿದ್ದ 14ನೇ ಆವೃತ್ತಿ ಇಂಡಿಯನ್​ ಪ್ರೀಮಿಯಲ್​ ಲೀಗ್​ಗೆ ಕೊರೊನಾ ಬ್ರೇಕ್​ ಹಾಕಿ ವಾರಗಳೇ ಉರುಳಿವೆ. ಬಯೋಬಬಲ್​ನಲ್ಲೂ ಕೊರೊನಾ ಕಂಟಕವಾಗಿ ಕಾಡಿದ್ದರಿಂದ ಐಪಿಎಲ್​ ಅನ್ನ ಬಿಸಿಸಿಐ ಮೊಟಕುಗೊಳಿಸಿತು. ಆದ್ರೆ, ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮುನ್ನವೇ ಹಲವು ಆಟಗಾರರು ಐಪಿಎಲ್​ ನಿಂದ ಹೊರ ಬಂದಿದ್ರು. ಅದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ನ ಕೇರಂ ಸ್ಪಿನ್ನರ್​​ ಆರ್​ ಅಶ್ವಿನ್​ ಕೂಡ ಒಬ್ಬರು. ಇದೀಗ ಅಂದು ತಂಡ ತೊರೆದ ನಿರ್ಧಾರದ ಬಗ್ಗೆ ಆ್ಯಷ್ ಮಾತನಾಡಿದ್ದು, ತನ್ನ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದ್ದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.

‘ಬಹುತೇಕ ನನ್ನ ಸ್ಥಳದ ಎಲ್ಲರೂ ಕೊರೊನಾ ಸೋಂಕಿಗೆ ತುತ್ತಾಗಿದ್ರು, ನನ್ನ ಕುಟುಂಬದ ಕೆಲ ಸದಸ್ಯರು ಆಸ್ಪತ್ರೆಗೆ ದಾಖಲಾಗಿದ್ರು. 8-9 ದಿನಗಳ ಕಾಲ ನನಗೆ ನಿದ್ದೆಯೇ ಬರಲಿಲ್ಲ. ನಿದ್ದೆಯಿಲ್ಲದೇ ನಾನು ಪಂದ್ಯಗಳನ್ನಾಡುತ್ತಿದೆ. ನಾನು ನಿದ್ದೆ ಮಾಡದ ದಿನದಿಂದ ನನಗೆ ಹೆಚ್ಚು ಆಯಾಸ ಆರಂಭವಾಯ್ತು. ಹೀಗಾಗಿ ನಾನು ಐಪಿಎಲ್​ ತೊರೆಯುವ ನಿರ್ಧಾರ ಮಾಡಿದೆ’. ಎಂದು ಅಶ್ವಿನ್​ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹೇಳಿಕೊಂಡಿದ್ದಾರೆ.

The post ಐಪಿಎಲ್​ನಿಂದ ಹಿಂದೆ ಸರಿಯುವ ಮುನ್ನ 8-9 ದಿನ ನಿದ್ರಿಸಿರಲಿಲ್ಲ..!- ಆರ್.ಅಶ್ವಿನ್​ appeared first on News First Kannada.

Source: newsfirstlive.com

Source link