ಐಪಿಎಲ್​ ಗುಂಗಲ್ಲೇ ಮೋದಿ ಸ್ಟೇಡಿಯಂಗೆ ಇಳಿದ ರೋಹಿತ್​ ಬಾಯ್ಸ್​


ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ, ಅಹಮದಾಬಾದ್​ನ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಹುಡುಗರು ಸರಣಿ ಕ್ಲೀನ್​ ಸ್ವೀಪ್​ ಮಾಡುವ ಗುರಿ ಹೊಂದಿದ್ದಾರೆ.

ಇನ್ನು ಈ ಪಂದ್ಯದ ಮೇಲೆ ಐಪಿಎಲ್​ ಹರಾಜು ಸಾಕಷ್ಟು ಪ್ರಭಾವ ಬೀರಲಿದೆ ಎನ್ನಲಾಗ್ತಿದೆ. ಹೌದು ಇನ್ನೊಂದು ದಿನ ಕಳೆದ್ರೆ ಐಪಿಎಲ್​ ಮೆಗಾ ಆಕ್ಷನ್ ನಡೆಯಲಿದೆ. ಐಪಿಎಲ್​ ಫ್ರಾಂಚೈಸಿಗಳ ಕಣ್ಣು ಎಲ್ಲಾ ಆಟಗಾರರ ಮೇಲೆ ಇರೋದ್ರಲ್ಲಿ ಅನುಮಾನವೇ ಇಲ್ಲ. ಇನ್ನು ಆಟಗಾರರ ತಲೆಯಲ್ಲಿಯೋ ಇದೇ ವಿಚಾರವಿದೆ.

ಹೀಗಾಗಿ ನರೇಂದ್ರ ಮೋದಿ ಅಂಗಳದಲ್ಲಿ ಸಖತ್​ ಪರ್ಫಾಮ್​ ಮಾಡಿ ಬೆಂಗಳೂರಿನಲ್ಲಿರೋ ಫ್ರಾಂಚೈಸಿಗಳನ್ನ ಇಂಪ್ರೆಸ್​​ ಮಾಡೋ ಪ್ರಯತ್ನಗಳಿಗೂ ಇಂದಿನ ಪಂದ್ಯ ಸಾಕ್ಷಿಯಾಗಲಿದೆ. ಈಗಾಗಲೇ ಸರಣಿ ಕೈ ಚೆಲ್ಲಿರುವ ವಿಂಡೀಸ್​ ತಂಡದಲ್ಲಿ ಕೊನೆಯ ಪಂದ್ಯವನ್ನಾದ್ರೂ ಗೆಲ್ಲೋ ಲೆಕ್ಕಾಚಾರವಿದೆ. ಅದರ ಜೊತೆಗೆ ಕೆರಬಿಯನ್​ ಕಲಿಗಳ ಮನದಲ್ಲೂ ಐಪಿಎಲ್​ ಆಕ್ಷನ್​ ಇದ್ದೇ ಇದೆ. ಹೀಗಾಗಿ ಇಂದಿನ ಪಂದ್ಯ ಟಫ್​ ಫೈಟ್​​ಗೆ ಸಾಕ್ಷಿಯಾದ್ರೂ ಅಚ್ಚರಿಯಿಲ್ಲ.

News First Live Kannada


Leave a Reply

Your email address will not be published.