ನವದೆಹಲಿ: ಐಪಿಎಲ್​​ -2021ನ ಮುಂದುವರಿದ ಪಂದ್ಯಗಳು ಯುಎಇ (United Arab Emirates )ನಲ್ಲಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಫೈನಲ್ ಪಂದ್ಯ ಅಕ್ಟೋಬರ್ 15 ರಂದು ನಡೆಯಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಇಂದು ತಿಳಿಸಿದೆ ಅಂತಾ ಎಎನ್​ಐ ಸುದ್ದಿಸಂಸ್ಥೆ ವರದಿ ತಿಳಿಸಿದೆ.

ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿವೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದರಿಂದ ಬಿಸಿಸಿಐ ಐಪಿಎಲ್​ ಪಂದ್ಯಾವಳಿಗಳನ್ನ ಸದ್ಯಕ್ಕೆ ರದ್ದು ಮಾಡಿ ಮುಂದೂಡಿತ್ತು. ಅದಾದ ಬಳಿಕ ಅಂದ್ರೆ ಮೇ 29 ರಂದು ಬಿಸಿಸಿಐ ಯುಎಇನಲ್ಲಿ ಪಂದ್ಯ ಆಯೋಜನೆ ಮಾಡಲು ಅಂತಿಮ ನಿರ್ಧಾರವನ್ನ ತೆಗೆದುಕೊಂಡಿತ್ತು.

ದುಬೈನಲ್ಲಿ 13ನೇ ಆವೃತ್ತಿ ಐಪಿಎಲ್​ ಆಯೋಜಿಸಿ ಬಿಸಿಸಿಐ ಯಶಸ್ಸು ಕಂಡಿತ್ತು. ಸದ್ಯ 14ನೇ ಆವೃತ್ತಿಯನ್ನು ಯುಎಇನ ಅಬುಧಾಬಿ, ಶಾರ್ಜಾ, ದುಬೈ ಮೈದಾನಗಳಲ್ಲಿ ಆಯೋಜನೆಗೆ ಸಿದ್ಧತೆ ನಡೆಸಿದೆ.

The post ಐಪಿಎಲ್​ ಹಣಾಹಣಿಗೆ ಡೇಟ್​ ಫಿಕ್ಸ್; ಅಕ್ಟೋಬರ್ 15ಕ್ಕೆ ಫೈನಲ್ appeared first on News First Kannada.

Source: newsfirstlive.com

Source link