ಐಪಿಎಲ್​ ಹರಾಜಿನಲ್ಲಿ ₹8.25 ಕೋಟಿಗೆ ಸೇಲ್ ಆದ ಮೊದಲ ಆಟಗಾರ ಯಾರು ಗೊತ್ತಾ..?


ಇಂಡಿಯನ್ ಪ್ರೀಮಿಯರ್ ಲೀಗ್​ (ಐಪಿಎಲ್​) 2022 ಆಕ್ಷನ್​ ಪ್ರಕ್ರಿಯೆಯಲ್ಲಿ ಶಿಖರ್ ಧವನ್, ಹರಾಜ್​ ಆದ ಮೊದಲ ಆಟಗಾರರಾಗಿದ್ದಾರೆ. ಬೆಂಗಳೂರಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ, ಕಿಂಗ್ಸ್​ ಇಲೆವನ್ ಪಂಜಾಬ್, ಧವನ್​ರನ್ನ 8.25 ಕೋಟಿ ನೀಡಿ ಖರೀದಿಸಿದೆ.

ರಾಜಸ್ಥಾನ ರಾಯಲ್ಸ್​ 2 ಕೋಟಿಗೆ ಶಿಖರ್ ಧವನ್​ರನ್ನ ಬಿಡ್ಡಿಂಗ್ ಮಾಡಿತ್ತು. ಕೊನೆಯಲ್ಲಿ ಪಂಜಾಬ್ ತಂಡ ಅವರನ್ನ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ಧವನ್ ದೆಹಲಿ ಕ್ಯಾಪಿಟಲ್ಸ್​ ಪರ ಆಡುತ್ತಿದ್ದರು. ಧವನ್ ಇದುವರೆಗೆ 192 ಐಪಿಎಲ್ ಪಂದ್ಯಗಳನ್ನ ಆಡಿದ್ದು, 5784 ರನ್​ಗಳನ್ನ ಬಾರಿಸಿದ್ದಾರೆ. ವಿಶೇಷ ಅಂದ್ರೆ ದೆಹಲಿ, ಪಂಜಾಬ್, ರಾಜಸ್ಥಾನ್ ರಾಯಲ್ಸ್​ ಧವನ್​ರನ್ನ ಖರೀದಿಸಲು ಆಸಕ್ತಿ ತೋರಿಸಿದ್ದರು.

News First Live Kannada


Leave a Reply

Your email address will not be published.