ಚೆನ್ನೈ: 14ನೇ ಆವೃತ್ತಿಯ ಐಪಿಎಲ್ ಕೂಟ ಇಂದಿನಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆರ್ ಸಿಬಿ ಮತ್ತು ಮುಂಬೈ ತಂಡಗಳು ಸೆಣಸಾಡಲಿದೆ. ಇಂದಿನಿಂದ ಎರಡು ತಿಂಗಳ ಕಾಲ ಭಾರತದಲ್ಲಿ ಐಪಿಎಲ್ ಕಾವು ಏರಲಿದೆ.

ಪ್ರತಿ ವರ್ಷ ಅತೀ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ಮತ್ತು ಹೆಚ್ಚು ವಿಕೆಟ್ ಪಡೆದ ಬೌಲರ್ ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಇದಕ್ಕಾಗಿ ಪ್ರತೀ ಆಟಗಾರರು ಭಾರಿ ಸ್ಪರ್ಧೆ ನಡೆಸುತ್ತಾರೆ. ಈ ಬಾರಿ ಯಾರು ಈ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಒಡೆಯರಾಗುತ್ತಾರೆ ಎನ್ನುವ ಬಗ್ಗೆ ಅಭಿಮಾನಿಗಳು ಈಗಾಗಲೇ ಕಾತರರಾಗಿದ್ದಾರೆ.

ಇದನ್ನೂ ಓದಿ: ಸವಾಲುಗಳ ನಡುವೆ ಇಂದಿನಿಂದ ಐಪಿಎಲ್‌ ಸಂಭ್ರಮ

ಇದುವರೆಗೆ ನಾಲ್ಕು ಭಾರತೀಯರು ಮಾತ್ರ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಸಚಿನ್, ಉತ್ತಪ್ಪ, ವಿರಾಟ್ ಮತ್ತು ರಾಹುಲ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪರ್ಪಲ್ ಕ್ಯಾಪ್ ಕೂಡಾ ನಾಲ್ಕು ಬಾರಿಯಷ್ಟೇ ಭಾರತೀಯರ ಕೈಸೇರಿದೆ. ಆದರೆ ಭುವನೇಶ್ವರ್ ಕುಮಾರ್ ಎರಡು ಬಾರಿ ಪರ್ಪಲ್ ಕ್ಯಾಪ್ ಪಡೆದಿದ್ದಾರೆ

 

ಆರೇಂಜ್‌ ಕ್ಯಾಪ್‌ ವಿನ್ನರ್ :

ವರ್ಷ   ಬ್ಯಾಟ್ಸ್‌ಮನ್‌  ರನ್‌

2008       ಶಾನ್‌ ಮಾರ್ಷ್‌ 616

2009       ಮ್ಯಾಥ್ಯೂ ಹೇಡನ್‌        572

2010       ಸಚಿನ್‌ ತೆಂಡುಲ್ಕರ್‌       618

2011       ಕ್ರಿಸ್‌ ಗೇಲ್‌          608

2012       ಕ್ರಿಸ್‌ ಗೇಲ್‌          733

2013       ಮೈಕಲ್‌ ಹಸ್ಸಿ   733

2014       ರಾಬಿನ್‌ ಉತ್ತಪ್ಪ              660

2015       ಡೇವಿಡ್‌ ವಾರ್ನರ್‌         562

2016       ವಿರಾಟ್‌ ಕೊಹ್ಲಿ                973

2017       ಡೇವಿಡ್‌ ವಾರ್ನರ್‌         641

2018       ಕೇನ್‌ ವಿಲಿಯಮ್ಸನ್‌     735

2019       ಡೇವಿಡ್‌ ವಾರ್ನರ್‌         692

2020       ಕೆ.ಎಲ್‌. ರಾಹುಲ್‌           670

ಇದನ್ನೂ ಓದಿ:ಆರ್‌ಸಿಬಿ-ಮುಂಬೈ ಮೊದಲ ಜೈಕಾರಕ್ಕೆ ಕಾತರ

ಪರ್ಪಲ್‌ ಕ್ಯಾಪ್‌ ವಿನ್ನರ್ :

ವರ್ಷ   ಬೌಲರ್‌               ವಿಕೆಟ್‌

2008       ಸೊಹೈಲ್‌ ತನ್ವೀರ್‌         22

2009       ಆರ್‌.ಪಿ. ಸಿಂಗ್‌       23

2010       ಪ್ರಗ್ಯಾನ್‌ ಓಜಾ      21

2011       ಲಸಿತ ಮಾಲಿಂಗ       28

2012       ಮಾರ್ನೆ ಮಾರ್ಕೆಲ್‌    25

2013       ಡ್ವೇನ್‌ ಬ್ರಾವೊ         32

2014       ಮೋಹಿತ್‌ ಶರ್ಮ      23

2015       ಡ್ವೇನ್‌ ಬ್ರಾವೊ          26

2016       ಭುವನೇಶ್ವರ್‌ ಕುಮಾರ್‌ 23

2017       ಭುವನೇಶ್ವರ್‌ ಕುಮಾರ್‌ 26

2018       ಆ್ಯಂಡ್ರೂ ಟೈ    24

2019       ಇಮ್ರಾನ್‌ ತಾಹಿರ್‌           26

2020       ಕಾಗಿಸೊ ರಬಾಡ              30

ಕ್ರೀಡೆ – Udayavani – ಉದಯವಾಣಿ
Read More