ಐಪಿಎಲ್ ಟು ಐಸಿಸಿ ಟೂರ್ನಮೆಂಟ್: ಖಾಲಿ ಕೈ ಕೊಹ್ಲಿ! ವಿರಾಟ್ ನಾಯಕತ್ವದ ಪ್ರಯಾಣ ಹ್ಯಾಪಿ ಎಂಡಿಂಗ್ ಕಾಣಲೇ ಇಲ್ಲ | T20 World Cup 2021 Virat Kohlis T20 captaincy ends without a trophy


ಐಪಿಎಲ್ ಟು ಐಸಿಸಿ ಟೂರ್ನಮೆಂಟ್: ಖಾಲಿ ಕೈ ಕೊಹ್ಲಿ! ವಿರಾಟ್ ನಾಯಕತ್ವದ ಪ್ರಯಾಣ ಹ್ಯಾಪಿ ಎಂಡಿಂಗ್ ಕಾಣಲೇ ಇಲ್ಲ

ವಿರಾಟ್ ಕೊಹ್ಲಿ

16 ಸೆಪ್ಟೆಂಬರ್ 2021 ರಂದು, ವಿರಾಟ್ ಕೊಹ್ಲಿ ICC T20 ವಿಶ್ವಕಪ್ 2021 ರ ನಂತರ ತಂಡದ ನಾಯಕತ್ವವನ್ನು ತೊರೆಯುವುದಾಗಿ ಘೋಷಿಸಿದಂತೆ, ಭಾರತೀಯ ಕ್ರಿಕೆಟ್ ತಂಡದಲ್ಲಿ ಬದಲಾವಣೆಗೆ ಅಡಿಪಾಯ ಹಾಕಲಾಯಿತು. ಮೂರು ದಿನಗಳ ನಂತರ IPL 2021 ಋತುವಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕತ್ವ ತೊರೆಯುವುದಾಗಿ ಕೊಹ್ಲಿ ಘೋಷಿಸಿದರು. ಇಂತಹ ಪರಿಸ್ಥಿತಿಯಲ್ಲಿ ಟಿ20 ಮಾದರಿಯಲ್ಲಿ ಕೊನೆಯ ಬಾರಿಗೆ ತಮ್ಮ ಫ್ರಾಂಚೈಸಿ ಮತ್ತು ಭಾರತ ತಂಡದ ನಾಯಕತ್ವ ವಹಿಸಲಿರುವ ಕೊಹ್ಲಿ, ಪ್ರಶಸ್ತಿಯೊಂದಿಗೆ ಪ್ರಯಾಣವನ್ನು ಅಂತ್ಯಗೊಳಿಸಲು ಬಯಸಿದ್ದರು. ಆದರೆ ಯುಎಇಯಲ್ಲಿ ಕೆಲವೇ ವಾರಗಳಲ್ಲಿ ಕೊಹ್ಲಿಯ ಈ ಕನಸು ಮತ್ತು ಭರವಸೆಗಳೆರಡೂ ನುಚ್ಚುನೂರಾದವು. ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್, ಆರ್​ಸಿಬಿ ತಂಡವನ್ನು ಐಪಿಎಲ್‌ನ ಎಲಿಮಿನೇಟರ್‌ನಲ್ಲಿ ಸೋಲಿಸಿತು. ನಂತರದ ಕೆಲವೇ ದಿನಗಳಲ್ಲಿ ಟಿ 20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಪ್ರಯಾಣವು ಎಲ್ಲಾ ನಿರೀಕ್ಷೆಗಳಿಗೆ ವಿರುದ್ಧವಾಗಿ ತ್ವರಿತವಾಗಿ ಕೊನೆಗೊಂಡಿತು. ಹೀಗಾಗಿ ಕೊಹ್ಲಿ ಟಿ20ಯಲ್ಲಿ ಪ್ರಶಸ್ತಿಯನ್ನು ತಮ್ಮ ಬ್ಯಾಗ್​ನಲ್ಲಿ ತುಂಬಿಕೊಳ್ಳುವ ಅವಕಾಶವನ್ನು ಕಳೆದುಕೊಂಡರು.

ವಿರಾಟ್ ಕೊಹ್ಲಿ 2013 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ಸಂಪೂರ್ಣವಾಗಿ ವಹಿಸಿಕೊಂಡರು. ಅಂದಿನಿಂದ ಅವರು ತಂಡದ ನಾಯಕರಾಗಿದ್ದರು. 2016 ರಲ್ಲಿ ಒಮ್ಮೆ ಮಾತ್ರ ಅವರು ಪ್ರಶಸ್ತಿಯನ್ನು ಗೆಲ್ಲುವ ಹತ್ತಿರ ಬಂದರು. ನಂತರ ಫೈನಲ್‌ನಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ಕೊಹ್ಲಿ ತಂಡವನ್ನು ಸೋಲಿಸಿ ಪ್ರಶಸ್ತಿ ಗೆಲ್ಲುವ ಕನಸನ್ನು ಮುರಿಯಿತು. ಇದರ ನಂತರ, ಕೊಹ್ಲಿ ನಾಯಕತ್ವದಲ್ಲಿ, RCB 2020 ಮತ್ತು 2021 ರಲ್ಲಿ ಪ್ಲೇಆಫ್ ತಲುಪಿತು. ಆದರೆ ಸತತ ಎರಡೂ ಋತುಗಳಲ್ಲಿ, ಬೆಂಗಳೂರು ಎಲಿಮಿನೇಟರ್ನಲ್ಲಿ ಸೋತ ನಂತರ ಹೊರಗುಳಿಯಬೇಕಾಯಿತು. ಅಂದಹಾಗೆ, ಸುಮಾರು 9 ಸೀಸನ್‌ಗಳ ಕಾಲ ನಿರಂತರವಾಗಿ ತಂಡದ ನಾಯಕತ್ವ ವಹಿಸಿದ್ದ ಕೊಹ್ಲಿ, ಪ್ರಶಸ್ತಿ ಇಲ್ಲದೆ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿಯಬೇಕಾಯಿತು.

ಧೋನಿ, ಮಾರ್ಗನ್, ವಿಲಿಯಮ್ಸನ್ ಅವರಿಗಿಂತ ಉತ್ತಮ ದಾಖಲೆ
ಐಪಿಎಲ್‌ನಲ್ಲಿ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ದಾಖಲೆಯೂ ಉತ್ತಮವಾಗಿಲ್ಲ ಮತ್ತು ತಂಡವು ತನ್ನ ಶೇಕಡಾ 50 ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಟೀಮ್ ಇಂಡಿಯಾಕ್ಕೆ ಕೊಹ್ಲಿ ಈ ಸ್ವರೂಪದಲ್ಲಿ ಸಾಕಷ್ಟು ಯಶಸ್ಸನ್ನು ನೀಡಿದ್ದಾರೆ. ಅವರ ಗೆಲುವಿನ ಶೇಕಡಾವಾರು ಭಾರತದ ವಿಶ್ವ ಚಾಂಪಿಯನ್ ನಾಯಕ ಎಂಎಸ್ ಧೋನಿಗಿಂತಲೂ ಉತ್ತಮವಾಗಿತ್ತು. ಕೊಹ್ಲಿ ನಾಯಕತ್ವದಲ್ಲಿ ಭಾರತವು T20 ಕ್ರಿಕೆಟ್‌ನಲ್ಲಿ 49 ಪಂದ್ಯಗಳನ್ನು (ನಮೀಬಿಯಾ ವಿರುದ್ಧದ ಪಂದ್ಯದ ಮೊದಲು) ಆಡಿದೆ, ಇದರಲ್ಲಿ ತಂಡವು 31 ಪಂದ್ಯಗಳನ್ನು ಗೆದ್ದಿದೆ (ಸೂಪರ್ ಓವರ್ ಗೆಲುವುಗಳು ಸೇರಿದಂತೆ), ಆದರೆ ತಂಡವು ಕೇವಲ 16 ಬಾರಿ ಸೋಲನ್ನು ಎದುರಿಸಬೇಕಾಗಿದೆ.

ಧೋನಿ (59.28%), ಆರನ್ ಫಿಂಚ್ (51.92%), ಇಯಾನ್ ಮೋರ್ಗನ್ (61.76%) ಮತ್ತು ಕೇನ್ ವಿಲಿಯಮ್ಸನ್ (51.88%) ಅವರಂತಹ ಲೆಜೆಂಡರಿ ನಾಯಕರಿಗಿಂತ ಕೊಹ್ಲಿ ನಾಯಕತ್ವದಲ್ಲಿ ಭಾರತದ ಗೆಲುವಿನ ಶೇಕಡಾವಾರು 63.82 ರಷ್ಟಿದ್ದು ಉಳಿದವರಿಗಿಂತ ಉತ್ತಮವಾಗಿದೆ.

ಚೊಚ್ಚಲ ಬಾರಿಗೆ ಟಿ20 ಟೂರ್ನಿಯಲ್ಲಿ ಟೀಂ ಇಂಡಿಯಾದ ನಾಯಕತ್ವ
ODI ಮತ್ತು ಟೆಸ್ಟ್‌ಗಳಲ್ಲಿ ಅವರ ನಾಯಕತ್ವದಲ್ಲಿ ಆಡಿದ ಪಂದ್ಯಾವಳಿಗಳಲ್ಲಿ, ತಂಡವು ಎರಡು ಬಾರಿ ಫೈನಲ್‌ಗೆ ಮತ್ತು ಒಮ್ಮೆ ಸೆಮಿಫೈನಲ್‌ಗೆ ತಲುಪಿತು. ಆದರೆ T20 ನಲ್ಲಿ ಮೊದಲ ಅವಕಾಶದಲ್ಲಿ, ಟೀಂ ಇಂಡಿಯಾ ಗುಂಪು ಹಂತದಿಂದ ಹೊರಬಿತ್ತು. ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡ ಯಾವುದೇ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೋತಿರಲಿಲ್ಲ. ಆದರೆ ಈ ಬಾರಿ ಬಾಬರ್ ಅಜಮ್ ತಂಡ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತು. ಇದಾದ ಬಳಿಕ ಐಸಿಸಿ ಟೂರ್ನಿಯಲ್ಲಿ ಭಾರತಕ್ಕೆ ದೊಡ್ಡ ಅಡ್ಡಿಯಾಗಿರುವ ನ್ಯೂಜಿಲೆಂಡ್ ಎದುರು 8 ವಿಕೆಟ್‌ಗಳಿಂದ ಸೋಲು ಕಂಡಿತ್ತು. ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನದ ಗೆಲುವೇ ತಂಡದ ಕೊನೆಯ ಭರವಸೆಯಾಗಿತ್ತು, ಆದರೆ ಕಿವೀಸ್ ತಂಡ ಟೀಂ ಇಂಡಿಯಾದ ಸೆಮಿ ಪೈನಲ್ ಬಾಗಿಲು ಮುಚ್ಚಿತು.

ಕ್ಯಾಪ್ಟನ್ ಕೊಹ್ಲಿ ಪರಂಪರೆ
ಈ ಮಾದರಿಯಲ್ಲಿಯೂ ತಂಡಕ್ಕೆ ಬ್ಯಾಟ್ಸ್‌ಮನ್ ಆಗಿ ಲಭ್ಯವಾಗಲಿದ್ದೇನೆ ಎಂದು ಸೆಪ್ಟೆಂಬರ್ 16 ರಂದು ನಾಯಕತ್ವವನ್ನು ತೊರೆಯುವುದಾಗಿ ಕೊಹ್ಲಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದು ಸಾಧ್ಯವೋ ಇಲ್ಲವೋ ಈಗ ಹೇಳುವುದು ಕಷ್ಟ. ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ ಅವರ ವೈಯಕ್ತಿಕ ದಾಖಲೆ ಯಾವಾಗಲೂ ಉತ್ತಮವಾಗಿರುತ್ತದೆ. ನಾಯಕತ್ವದಲ್ಲಿ ಅವರ ಒಟ್ಟಾರೆ ದಾಖಲೆಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ, ಆದರೆ ಪ್ರಶಸ್ತಿಗೆ ಬಂದಾಗ, ಕೊಹ್ಲಿಯ ಬ್ಯಾಗ್ ಯಾವಾಗಲೂ ಖಾಲಿಯಾಗಿರುತ್ತದೆ ಮತ್ತು ದುರದೃಷ್ಟವಶಾತ್ ಇದು ಅವರ ಪರಂಪರೆಯಾಗಿದೆ.

TV9 Kannada


Leave a Reply

Your email address will not be published.