ಐಪಿಎಲ್ ಫ್ರಾಂಚೈಸಿಗಳ ಮಾಸ್ಟರ್​ ಪ್ಲಾನ್​; ಬಿಬಿಲ್​ ತೊರೆಯಲು ಮುಂದಾದ15 ಆಸೀಸ್ ಆಟಗಾರರು! | Australia stunned by one move of IPL teams 15 players will leave for money


ಜೊತೆಗೆ ಆಸ್ಟ್ರೇಲಿಯಾದ ಅನೇಕ ಆಟಗಾರರು ಈ ಟೂರ್ನಿಯಲ್ಲಿ ಆಡಲು ಸಾಕಷ್ಟು ಹಣ ಪಡೆಯುತ್ತಿದ್ದಾರೆ. ಅಲ್ಲದೆ ಐಪಿಎಲ್ ಫ್ರಾಂಚೈಸಿಗಳು ಕೂಡ ಇಂಟರ್ನ್ಯಾಷನಲ್ ಲೀಗ್‌ನಲ್ಲಿ ಹೂಡಿಕೆ ಮಾಡಿವೆ.

ವಿಶ್ವದ ಅತ್ಯಂತ ಪ್ರಸಿದ್ಧ ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾದ ಬಿಗ್ ಬ್ಯಾಷ್​ಗೆ (Big Bash ) ದೊಡ್ಡ ಆಘಾತ ಎದುರಾಗಿದೆ. ಸುದ್ದಿಯ ಪ್ರಕಾರ, ಈ ಲೀಗ್‌ನಲ್ಲಿ ಆಡುವ ಅನೇಕ ಪ್ರಮುಖ ಆಟಗಾರರು ಯುಎಇಯಲ್ಲಿ (UAE) ಆರಂಭವಾಗುತ್ತಿರುವ ಇಂಟರ್‌ನ್ಯಾಶನಲ್ ಟಿ20 ಲೀಗ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದ ಅನೇಕ ಆಟಗಾರರು ಈ ಟೂರ್ನಿಯಲ್ಲಿ ಆಡಲು ಸಾಕಷ್ಟು ಹಣ ಪಡೆಯುತ್ತಿದ್ದಾರೆ. ಅಲ್ಲದೆ ಐಪಿಎಲ್ ಫ್ರಾಂಚೈಸಿಗಳು ಕೂಡ ಇಂಟರ್ನ್ಯಾಷನಲ್ ಲೀಗ್‌ನಲ್ಲಿ ಹೂಡಿಕೆ ಮಾಡಿವೆ. ಹೀಗಾಗಿ ಈಗ ಕಾಂಗರೂ ಆಟಗಾರರು ಬಿಬಿಎಲ್ ಬದಲಿಗೆ ಯುಎಇಯಲ್ಲಿ ಲೀಗ್ ಆಡಲು ಉಸ್ತುಕರಾಗಿದ್ದಾರೆ. ವರದಿಗಳ ಪ್ರಕಾರ, ಆಸ್ಟ್ರೇಲಿಯದ ಅಗ್ರ 15 ಆಟಗಾರರಿಗೆ ಇಂಟರ್‌ನ್ಯಾಶನಲ್ ಲೀಗ್ 7 ಲಕ್ಷ ಆಸ್ಟ್ರೇಲಿಯನ್ ಡಾಲರ್‌ಗಳನ್ನು ನೀಡಿದೆ, ಇದರಿಂದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಆತಂಕಕ್ಕೊಳಗಾಗಿದೆ.

ಬಿಗ್ ಬ್ಯಾಷ್ ಮತ್ತು ಇಂಟರ್ನ್ಯಾಷನಲ್ ಲೀಗ್ ಅನ್ನು ಒಂದೇ ಸಮಯದಲ್ಲಿ ಆಯೋಜಿಸಲಾಗುವುದು. ಬಿಗ್ ಬ್ಯಾಷ್ ಲೀಗ್ ಅನ್ನು ಡಿಸೆಂಬರ್ 13 ರಿಂದ ಫೆಬ್ರವರಿ 4 ರವರೆಗೆ ಆಡಲಾಗುತ್ತದೆ, ಆದರೆ IL T20 ನ ಮೊದಲ ಪಂದ್ಯಾವಳಿಯು ಜನವರಿ 6 ರಿಂದ ಫೆಬ್ರವರಿ 12 ರವರೆಗೆ ನಡೆಯಲಿದೆ. ಇದರಿಂದಾಗಿ ಆಸ್ಟ್ರೇಲಿಯಾದ ಆಟಗಾರರು ಎರಡೂ ಲೀಗ್‌ಗಳಿಗೆ ಸೇರಲು ಅಸಾಧ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಆಟಗಾರರು ಕೇವಲ ಒಂದು ಲೀಗ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಅಂತರಾಷ್ಟ್ರೀಯ ಲೀಗ್‌ನಲ್ಲಿ ಹಣ ಹೆಚ್ಚು ಇದ್ದರೆ, ಆಟಗಾರರು ಅದನ್ನು ಆಯ್ಕೆ ಮಾಡಬಹುದು.

ಆಸ್ಟ್ರೇಲಿಯದ ಆಟಗಾರನನ್ನು ಕ್ರಿಕೆಟ್ ಆಸ್ಟ್ರೇಲಿಯಾ ತಡೆಯಲು ಸಾಧ್ಯವಿಲ್ಲ

ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪ್ರಕಾರ, ಬಿಗ್ ಬ್ಯಾಷ್ ಲೀಗ್‌ನಿಂದ ಹಿಂದೆ ಸರಿಯಲು ಮತ್ತು ಯುಎಇ ಲೀಗ್‌ನಲ್ಲಿ ಆಡಲು ಕನಿಷ್ಠ 15 ಆಸ್ಟ್ರೇಲಿಯನ್ ಆಟಗಾರರಿಗೆ 700,000 ಆಸ್ಟ್ರೇಲಿಯನ್ ಡಾಲರ್‌ಗಳನ್ನು ನೀಡಲಾಗಿದೆ. ಆಸ್ಟ್ರೇಲಿಯಾದ ಅಗ್ರ ಆಟಗಾರರ ಪ್ರಸ್ತುತ ಕೇಂದ್ರ ಒಪ್ಪಂದದ ಪ್ರಕಾರ, ಯಾವುದೇ ಆಟಗಾರನನ್ನು BBL ನಲ್ಲಿ ಆಡಲು ಒತ್ತಾಯಿಸುವಂತಿಲ್ಲ. ಡೇವಿಡ್ ವಾರ್ನರ್ 2014 ರಲ್ಲಿ ಈ ಲೀಗ್‌ನಲ್ಲಿ ಆಡಲಿಲ್ಲ, ಅವರು ಈ ಬಾರಿಯೂ ಆಡುವುದು ಕಷ್ಟ. ಅಲ್ಲದೆ ಈ ಆಟಗಾರ ಇಂಟರ್ ನ್ಯಾಷನಲ್ ಲೀಗ್​ನಲ್ಲಿ ಆಡಬಹುದು ಎನ್ನಲಾಗುತ್ತಿದೆ. ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್ ಕ್ರಿಸ್ಟ್ ಕೂಡ ಈ ಬಗ್ಗೆ ತಮ್ಮ ಭಯವನ್ನು ವ್ಯಕ್ತಪಡಿಸಿದ್ದಾರೆ.

bbl ನಲ್ಲಿ ಕಡಿಮೆ ಹಣ

ಡಾರ್ಸಿ ಶಾರ್ಟ್ ಇಲ್ಲಿಯವರೆಗೆ BBL ನ ಹೆಚ್ಚಿನ ಹಣವನ್ನು ಪಡೆದುಕೊಂಡಿದ್ದಾರೆ. ಅವರಿಗೆ 3 ಲಕ್ಷದ 70 ಸಾವಿರ ಆಸ್ಟ್ರೇಲಿಯನ್ ಡಾಲರ್ ಸಂಭಾವನೆ ನೀಡಲಾಗಿದೆ. ಆದರೆ ಐಪಿಎಲ್‌ನಲ್ಲಿ ಇದಕ್ಕಿಂತ ಹೆಚ್ಚಿನ ಹಣವನ್ನು ಆಟಗಾರರಿಗೆ ನೀಡಲಾಗುತ್ತದೆ. ಈಗ ಇಂಟರ್‌ನ್ಯಾಶನಲ್ ಲೀಗ್‌ನಲ್ಲೂ ಆಟಗಾರರಿಗೆ 7 ಲಕ್ಷ ಡಾಲರ್‌ಗಿಂತ ದುಪ್ಪಟ್ಟು ಮೊತ್ತವನ್ನು ನೀಡುತ್ತಿರುವುದು ದೊಡ್ಡ ವಿಷಯವಾಗಿದೆ. ಇನ್ನು ಕ್ರಿಕೆಟ್ ಆಸ್ಟ್ರೇಲಿಯಾದ ಮುಂದಿನ ಹೆಜ್ಜೆ ಏನಾಗಲಿದೆ ಎಂಬುದು ಕಾದು ನೋಡಬೇಕಿದೆ.

TV9 Kannada


Leave a Reply

Your email address will not be published. Required fields are marked *