ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದ ಕೆ.ಎಲ್.ರಾಹುಲ್, ಈ ಬಾರಿ ಆಕ್ಷನ್ ಫುಲ್ಗೆ ಬರೋದು ಕನ್ಫರ್ಮ್. ದೊಡ್ಡ ಮೊತ್ತದ ಸೇಲಾಗೋ ಉತ್ಸಾಹದಲ್ಲಿದ್ದು, ನೂತನ ಫ್ರಾಂಚೈಸಿಗಳ ಪಾಲಾಗೋ ಸಾಧ್ಯತೆ ಇದೆ. ಆದರೆ ರಾಹುಲ್ ಕುರಿತು ಇದೀಗ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ, ಆಕ್ರೋಶ ವ್ಯಕ್ತಪಡಿಸಿದೆ.
IPL ಆಟಗಾರರ ರಿಟೈನ್ ಪ್ರಕ್ರಿಯೆ ಮುಗಿದಿದೆ. ಮೆಗಾ ಹರಾಜು ಕೂಡ ಶೀಘ್ರದಲ್ಲೇ ನಡೆಯುತ್ತೆ. ಸ್ಟಾರ್ ಆಟಗಾರರು ತಮ್ಮ ಫ್ರಾಂಚೈಸಿಗಳಿಂದ ಹೊರ ಬಂದಿದ್ದು, ಹರಾಜಿನಲ್ಲಿ ಪಾಲ್ಗೊಳ್ಳೋಕೆ ಸಿದ್ಧತೆ ನಡೆಸಿದ್ದಾರೆ. ಅದೇ ರೀತಿ ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್.ರಾಹುಲ್ ಕೂಡ ಫ್ರಾಂಚೈಸಿ ತೊರೆದಿದ್ದು, ಆಕ್ಷನ್ ಪೂಲ್ಗಿಳಿಯಲು ನಿರ್ಧರಿಸಿದ್ದಾರೆ. ಆದ್ರೆ ಕನ್ನಡಿಗ ರಾಹುಲ್ ನಿರ್ಧಾರಕ್ಕೆ, ಪಂಜಾಬ್ ಫ್ರಾಂಚೈಸಿ ಸಿಡಿಮಿಡಿಗೊಂಡಿದೆ.
ಆರ್.ಅಶ್ವಿನ್ ಬಳಿಕ ಪಂಜಾಬ್ ಕಿಂಗ್ಸ್ ನಾಯಕತ್ವ ವಹಿಸಿಕೊಂಡಿದ್ದು, ಕೆ.ಎಲ್.ರಾಹುಲ್. ನಾಯಕನಾಗಿ ಕಳೆದ ಎರಡು ಆವೃತ್ತಿಗಳಿಂದ ರಾಹುಲ್ಗೆ, ಸ್ವಾತಂತ್ರ್ಯ ನೀಡಲಾಗಿತ್ತು. ತಂಡವನ್ನ ಒಂದು ಬಾರಿ ಕೂಡ ಕ್ವಾಲಿಫೈಯರ್ಗೇರಿಸುವಲ್ಲಿ ವಿಫಲವಾದ ರಾಹುಲ್ರನ್ನ, ತಂಡದಲ್ಲೇ ಉಳಿಸಿಕೊಳ್ಳುವುದಾಗಿ ಪಂಜಾಬ್ ಹೇಳಿತ್ತು. ಮತ್ತೊಂದೆಡೆ ರಾಹುಲ್, ಪಂಜಾಬ್ ಕಿಂಗ್ಸ್ ತೊರೆದು ಹರಾಜಿಗೆ ಹೋಗುವುದಾಗಿ ಹೇಳಿದ್ರು. ಇದೆಲ್ಲದರ ನಡುವೆ ರಾಹುಲ್, ರಿಟೈನ್ ಪ್ರಕ್ರಿಯೆಗೂ ಮೊದಲೇ ನೂತನ ಫ್ರಾಂಚೈಸಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಇದು ಪಂಜಾಬ್ ಕಿಂಗ್ಸ್ ಮಾಲೀಕರು ಕಿಡಿಕಾರೋದಕ್ಕೆ ಕಾರಣವಾಗಿದೆ.
Here’s the @PunjabKingsIPL retention list
#VIVOIPLRetention pic.twitter.com/ABl5TWLFhG
— IndianPremierLeague (@IPL) November 30, 2021
ನಿಯಮ ಬಾಹಿರ ಕೆಲಸ..!
‘ರಾಹುಲ್ ಈಗಾಗಲೇ ಹೊಸ ಫ್ರಾಂಚೈಸಿ ಸಂಪರ್ಕಿಸಿದ್ದರೆ ಅದು ಅನೈತಿಕ. ರಿಟೆನ್ಷನ್ ಪ್ರಕ್ರಿಯೆಯಲ್ಲಿ ರಾಹುಲ್ರನ್ನು ತಂಡದಲ್ಲಿ ಉಳಿಸಿಕೊಳ್ಳುವ ಯತ್ನ ಮಾಡಿದೆವು. ಆದರೆ ರಾಹುಲ್ ಮೆಗಾ ಹರಾಜಿನಲ್ಲಿ ಭಾಗವಹಿಸಬೇಕೆಂಬ ಇಚ್ಛೆ ವ್ಯಕ್ತಪಡಿಸಿದರು. ಆದರೆ ರಿಟೆನ್ಷನ್ ಪ್ರಕ್ರಿಯೆಗೂ ಮುನ್ನ ರಾಹುಲ್ ಬೇರೆ ಯಾವುದೇ ಫ್ರಾಂಚೈಸಿ ಜೊತೆ ಖರೀದಿ ಕುರಿತಾಗಿ ಸಂಪರ್ಕ ಬೆಳೆಸಿದರೆ, ಅದೊಂದು ನಿಯಮ ಬಾಹಿರ ಕೆಲಸವಾಗಲಿದೆ’-ಪಂಜಾಬ್ ಕಿಂಗ್ಸ್ ಫ್ರಾಂಚೈಸಿ
ರಾಹುಲ್ ಆಗಮನದಿಂದ ಬ್ರ್ಯಾಂಡ್ ವಾಲ್ಯೂ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ಲಖನೌ ಫ್ರಾಂಚೈಸಿ, 20 ಕೋಟಿ ರೂಪಾಯಿ ಆಫರ್ ನೀಡಿದೆ ಎಂದು ವರದಿ ಆಗಿತ್ತು. ಆದರೆ ರಾಹುಲ್ ರಿಟೈನ್ ಪ್ರಕ್ರಿಯೆಗೂ ಮುನ್ನವೇ ಫ್ರಾಂಚೈಸಿಗಳನ್ನ ಸಂಪರ್ಕಿಸಿರೋದು, ಎಷ್ಟರ ಮಟ್ಟಿಗೆ ಸರಿ.? ಇದು ಐಪಿಎಲ್ ನಿಯಮಗಳಿಗೆ ವಿರುದ್ಧವಾದದ್ದು. ಹೀಗಾಗಿ ಬಿಸಿಸಿಐ ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ತನಿಖೆಯಲ್ಲಿ ರಾಹುಲ್ ಬೇರೆ ಫ್ರಾಂಚೈಸಿಗಳನ್ನ ಸಂಪರ್ಕಿಸಿದ್ದು ಸಾಬೀತಾದರೆ, ಒಂದು ವರ್ಷ IPLನಿಂದ ನಿಷೇಧಕ್ಕೆ ಒಳಗಾಗೋದು ಖಚಿತ.
ಒಟ್ನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯೇನೋ, ರಾಹುಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ ಇದು ನಿಜಾನಾ, ಸುಳ್ಳಾ ಅನ್ನೋದು, ಬಿಸಿಸಿಐ ತನಿಖೆ ಕೈಗೊಂಡ ಬಳಿಕವೇ ಗೊತ್ತಾಗಲಿದೆ.
The post ಐಪಿಎಲ್ ರೂಲ್ಸ್ ಬ್ರೇಕ್ ಮಾಡಿದ್ರಾ ಕೆ.ಎಲ್.ರಾಹುಲ್ -ಬ್ಯಾನ್ ಭೀತಿಯಲ್ಲಿ ಕರ್ನಾಟಕ ಬ್ಯಾಟರ್ appeared first on News First Kannada.