
ಕರ್ನಾಟಕದ ಜಾನಪದ ಕಲಾ ತಂಡ
IPL 2022 Final: ಇಂದಿನ ಐಪಿಎಲ್ ಸಮಾರೋಪ ಸಮಾರಂಭದಲ್ಲಿ ಕರ್ನಾಟಕದ ಜಾನಪದ ಕಲಾ ತಂಡಗಳು ಕರ್ನಾಟಕದ ಜಾನಪದ ಕಲೆಯನ್ನು ಪ್ರದರ್ಶಿಸಲಿದ್ದು, ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆ ಚಿಕ್ಕ ಬೋರಯ್ಯ, ಸಂತೆ ಕಸಲಗೆರೆ ಬಸವರಾಜು ನೇತೃತ್ವದ ಜಾನಪದ ಕಲಾ ತಂಡಗಳು ಕಾರ್ಯಕ್ರಮ ನಡೆಸಿಕೊಡಲಿವೆ.
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇಂದು ಅದ್ಧೂರಿ ತೆರೆ ಬೀಳಲಿದೆ. ಅಂತಿಮ ಫೈನಲ್ ಕಾದಾಟದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ಟೈಟಾನ್ಸ್ ಹಾಗೂ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ (GT vs RR) ತಂಡಗಳು ಮುಖಾಮುಖಿ ಆಗಲಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ನರೇಂದ್ರ ಮೋದಿ ಮೈದಾನ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಪದಾರ್ಪಣೆ ಆವೃತ್ತಿಯಲ್ಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯೊಂದಿಗೆ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿರುವ ಗುಜರಾತ್ ತಂಡ ಮೊದಲ ಯತ್ನದಲ್ಲೇ ಚಾಂಪಿಯನ್ಪಟ್ಟ ಅಲಂಕರಿಸುವ ಕನಸಿನಲ್ಲಿದೆ. ಇತ್ತ ರಾಜಸ್ಥಾನ್ 2008ರ ಬಳಿಕ ಇದೀಗ ಮತ್ತೆ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು ಪ್ರಶಸ್ತಿ ಗೆದ್ದು ದಂತಕಥೆ ಶೇನ್ ವಾರ್ನ್ (Shane Warne) ಅವರಿಗೆ ಅರ್ಪಿಸಲು ಕಾತುರವಾಗಿದೆ. 15ನೇ ಆವೃತ್ತಿಯ ಐಪಿಎಲ್ಗೆ ಭರ್ಜರಿ ತೆರೆ ಬಿಳಲಿದ್ದು, ಇದನ್ನು ಅವಿಸ್ಮರಣೀಯಗೊಳಿಸಲು ಐಪಿಎಲ್ ಆಡಳಿತ ಮಂಡಳಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಸಮಾರೋಪ ಸಮಾರಂಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಭಾಗಿಯಾಗಲಿದ್ದಾರೆ. ಇವರ ಜೊತೆಗೆ ಹಲವು ಮನರಂಜನ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅದರ ಭಾಗವಾಗಿ ಕರ್ನಾಟಕದ ಜಾನಪದ ಕಲಾ ತಂಡಗಳು ಸಹ ಅಲ್ಲಿ ಬಿಡುಬಿಟ್ಟಿವೆ.
ಇಂದಿನ ಐಪಿಎಲ್ ಸಮಾರೋಪ ಸಮಾರಂಭದಲ್ಲಿ ಕರ್ನಾಟಕದ ಜಾನಪದ ಕಲಾ ತಂಡಗಳು ಕರ್ನಾಟಕದ ಜಾನಪದ ಕಲೆಯನ್ನು ಪ್ರದರ್ಶಿಸಲಿದ್ದು, ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆ ಚಿಕ್ಕ ಬೋರಯ್ಯ, ಸಂತೆ ಕಸಲಗೆರೆ ಬಸವರಾಜು ನೇತೃತ್ವದ ಜಾನಪದ ಕಲಾ ತಂಡಗಳು ಕಾರ್ಯಕ್ರಮ ನಡೆಸಿಕೊಡಲಿವೆ. ಈ ಕಾರ್ಯಕ್ರಮದಲ್ಲಿ ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಚರ್ಮ ವಾದ್ಯಗಳ ಕಲಾ ಪ್ರದರ್ಶನ ನಡೆಯಲಿದೆ. ಇವರ ಜೊತೆಗೆ ಝಾರ್ಖಂಡ್ನ ಪ್ರಸಿದ್ಧ ಛಾವು ನೃತ್ಯವೂ ಅಭಿಮಾನಿಗಳ ಗಮನ ಸೆಳೆಯಲಿದೆ. 10 ಸದಸ್ಯರ ತಂಡ ನೃತ್ಯ ಕಾರ್ಯಕ್ರಮ ನೀಡಲಿದೆ. ಈ ಸಂದರ್ಭ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಉಪಸ್ಥಿತರಿರಲಿದ್ದಾರೆ.

ಕರ್ನಾಟಕ ಜಾನಪದ ಕಲಾ ತಂಡ