ಕಿಲ್ಲರ್​ ಕೊರೊನಾ ಕಾರಣದಿಂದ ಕಲರ್​ಫುಲ್ ಟೂರ್ನಿ, ಅರ್ಧಕ್ಕೆ ಮೊಟಕುಗೊಂಡು ವಾರವೇ ಕಳೆದಿದೆ. ಈಗಾಗಲೇ ಟೂರ್ನಿಯಲ್ಲಿ ಭಾಗಿಯಾಗಿದ್ದ ವಿದೇಶಿ ಆಟಗಾರರು, ತಾಯ್ನಾಡಿಗೆ ಹಿಂತಿರುಗಿದ್ದಾರೆ. ಈ ನಡುವೆ ಅನಿರ್ದಿಷ್ಟಾವಧಿಗೆ ಮೂಂದೂಡಲಾಗಿರುವ ಐಪಿಎಲ್​​, ಮರು ಆಯೋಜನೆಗೆ ವಿಶ್ವದ ಶೀಮಂತ ಕ್ರಿಕೆಟ್​ ಮಂಡಳಿ ಸೂಕ್ತ ಸಮಯ, ಸ್ಥಳದ ಹುಡುಕಾಟ ನಡೆಸುತ್ತಿದೆ. ಆದ್ರೆ ಈ ಬೆನ್ನಲ್ಲೇ ಐಪಿಎಲ್​​ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್​ ಒಂದು ಹೊರ ಬಿದ್ದಿದೆ.

ಸೆಪ್ಟೆಂಬರ್​​ನಲ್ಲಿ ಮರು ಆಯೋಜನೆ ಆಗುತ್ತಾ ಐಪಿಎಲ್..?
ಪ್ರತಿ ವರ್ಷ ಯಶಸ್ವಿಯಾಗಿ ನಡೆಯುತ್ತಿದ್ದ ಇಂಡಿಯನ್ ಪ್ರೀಮಿಯರ್​ ಲೀಗ್​, ಈ ಬಾರಿ ಹೆಮ್ಮಾರಿಯ ಅಟ್ಟಹಾಸಕ್ಕೆ ಸ್ಥಗಿತಗೊಂಡಿದೆ. ಹಾಗಾಗಿ ಸೆಪ್ಟೆಂಬರ್​​​ನಲ್ಲಿ ಅಥವಾ ನವೆಂಬರ್​​ನಲ್ಲಿ ಉಳಿದ 31 ಪಂದ್ಯಗಳ ಆಯೋಜನೆಗೆ, ಬಿಸಿಸಿಐ ಚಿಂತನೆ ನಡೆಸುತ್ತಿದೆ. ಆದ್ರೆ ಐಪಿಎಲ್‌ ಯಾವಾಗ..? ಎಲ್ಲಿ..? ಹೇಗೆ ನಡೆಯಲಿದೆ ಎಂಬ ಬಗ್ಗೆ ಗೊತ್ತಿಲ್ಲ.!!! ಮೇಲ್ನೋಟಕ್ಕೆ ಬಿಸಿಸಿಐ ಮೂಲಗಳ ಪ್ರಕಾರ, ಸೆಪ್ಟೆಂಬರ್​​ ತಿಂಗಳಲ್ಲಿ ಮಿಲಿಯನ್ ಡಾಲರ್ ಟೂರ್ನಿ ಆಯೋಜನೆ ಆಗೋ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಐಪಿಎಲ್​​ಗೆ ಇಂಗ್ಲೆಂಡ್ ಆಟಗಾರರ ಅಲಭ್ಯತೆ​..!
ಒಂದು ವೇಳೆ ಸೆಪ್ಟೆಂಬರ್ ಅಥವಾ ನವೆಂಬರ್​​ನಲ್ಲಿ ಐಪಿಎಲ್​ ಟೂರ್ನಿ ಮರು ಆಯೋಜನೆಗೊಂಡರೆ, ಈ ಎರಡೂ ಸಮಯದಲ್ಲೂ ಇಂಗ್ಲೆಂಡ್​ ಆಟಗಾರರು ಬ್ಯುಸಿ ಇರಲಿದ್ದಾರೆ. ಸೆಪ್ಟೆಂಬರ್​​​​ನಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಪ್ರವಾಸದಲ್ಲಿದ್ದರೇ, ಅಕ್ಟೋಬರ್​ನಲ್ಲಿ ಐಸಿಸಿ ಟಿ20 ವಿಶ್ವಕಪ್‌, ನಂತರ ಆಸ್ಟ್ರೇಲಿಯಾ ವಿರುದ್ಧ ಪ್ರತಿಷ್ಠಿತ ಌಶಸ್‌ ಟೆಸ್ಟ್ ಸರಣಿ, ಇದಾದ ಬಳಿಕ ನ್ಯೂಜಿಲೆಂಡ್ ಸರಣಿಗೆ ಇಂಗ್ಲೆಂಡ್ ಆಟಗಾರರು ಲಭ್ಯರಾಗಲಿದ್ದಾರೆ. ಇದೇ ಕಾರಣಕ್ಕೆ ಇಂಗ್ಲೆಂಡ್ ಗುತ್ತಿಗೆ ಆಟಗಾರರು, ಐಪಿಎಲ್​ಗೆ ಗೈರಾಗಲಿದ್ದಾರೆ. ಇಂಗ್ಲೆಂಡ್‌ ಆಟಗಾರರ ಅಲಭ್ಯತೆ ಬಗ್ಗೆ ಇಂಗ್ಲೆಂಡ್‌ ತಂಡದ ವ್ಯವಸ್ಥಾಪಕ ನಿರ್ದೇಶಕ ಆಶ್ಲೆ ಜೈಲ್ಸ್ ತಿಳಿಸಿದ್ದಾರೆ.

‘ಇಂಗ್ಲೆಂಡ್ ಪಂದ್ಯಗಳಲ್ಲಿ ನಮ್ಮ ಆಟಗಾರರ ಪಾಲ್ಗೊಳ್ಳುವಿಕೆಯ ಬಗ್ಗೆ ನಾವು ಯೋಜಿಸುತ್ತಿದ್ದೇವೆ. ನಮಗೆ ಫ್ಯೂಚರ್ ಟೂರ್ ಪ್ರೋಗ್ರಾಮ್ ವೇಳಾಪಟ್ಟಿ ಸಿಕ್ಕಿದೆ. ಆದ್ದರಿಂದ ಪಾಕಿಸ್ತಾನ, ಬಾಂಗ್ಲಾದೇಶ ಪ್ರವಾಸಗಳು ಮುಂದುವರಿದರೆ, ನಮ್ಮ ಆಟಗಾರರು ಇರಬೇಕೆಂದು ನಾವು ನಿರೀಕ್ಷಿಸುತ್ತೇವೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಮಗೆ ಪ್ರಮುಖ ಸರಣಿಗಳಿವೆ. ಐಸಿಸಿ ಟಿ20 ವಿಶ್ವಕಪ್‌ ಹಾಗೂ ಆಸ್ಟ್ರೇಲಿಯಾ ವಿರುದ್ಧ ಌಶಸ್‌ ಸರಣಿ ನಮ್ಮ ಮುಂದಿದೆ. ಈ ಹಿನ್ನೆಲೆಯಲ್ಲಿ ನಮ್ಮ ಆಟಗಾರರ ಬಗ್ಗೆ ಕಾಳಜಿ ವಹಿಸುವುದು ಮುಖ್ಯ.’
ಆಶ್ಲೆ ಜೈಲ್ಸ್ , ಇಸಿಬಿ ನಿರ್ದೇಶಕ

ಇಂಗ್ಲೆಂಡ್ ಆಟಗಾರರ ಅಲಭ್ಯತೆ ಫ್ರಾಂಚೈಸಿಗಳಿಗೆ ನಷ್ಟ..!
ಇಂಗ್ಲೆಂಡ್ ತಂಡದ ಗುತ್ತಿಗೆ ಆಟಗಾರರು ಟೂರ್ನಿಯಲ್ಲಿ ಭಾಗಿಯಾಗದ ಕಾರಣ, ಐಪಿಎಲ್​ ಫ್ರಾಂಚೈಸಿಗಳಿಗೆ ನಷ್ಟವೇ ಆಗಲಿದೆ. ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್​, ಸ್ಯಾಮ್​ ಕರನ್​, ಜಾನಿ ಬೇರ್​ಸ್ಟೋ, ಜೇಸನ್​ ರಾಯ್​ ಸೇರಿದಂತೆ ಪ್ರಮುಖ ಆಟಗಾರರೇ, ಗೈರಾಗಲಿದ್ದಾರೆ.. ಹಾಗಾಗಿ ಇಂಗ್ಲೆಂಡ್‌ ಆಟಗಾರರ ಅಲಭ್ಯತೆ, ಐಪಿಎಲ್ ಫ್ರಾಂಚೈಸಿಗಳಿಗೆ ಭಾರೀ ಹೊಡೆತವನ್ನೇ ನೀಡಲಿದೆ. ಪ್ರಮುಖವಾಗಿ ಚೆನ್ನೈ ಸೂಪರ್ ಕಿಂಗ್ಸ್, ಕೊಲ್ಕತ್ತಾ ನೈಟ್​ ರೈಡರ್ಸ್​, ರಾಜಸ್ಥಾನ್ ರಾಯಲ್ಸ್​ಗೆ ತುಂಬಲಾರದ ನಷ್ಟವೇ ಆಗುತ್ತೆ.

ಇಂಗ್ಲೆಂಡ್ ಆಟಗಾರರು ಪಾಲ್ಗೊಳ್ಳಲು ಇದೆ ಒಂದೇ ದಾರಿ..!
ಇಂಗ್ಲೆಂಡ್ ತಂಡದ ಬ್ಯುಸಿ ಶೆಡ್ಯೂಲ್​ನಿಂದಾಗಿ ಆಟಗಾರರು ಗೈರಾಗಲಿದ್ದಾರೆ ಎಂದು ತಿಳಿದರೂ, ಇಂಗ್ಲೆಂಡ್ ಆಟಗಾರರು ಐಪಿಎಲ್​​ನಲ್ಲಿ ಭಾಗವಹಿಸಲು ಒಂದೇ ಒಂದು ದಾರಿ ಇದೆ. ಅದು ಸೆಪ್ಟೆಂಬರ್​ನಲ್ಲಿ ನಡೆಯಲಿರುವ ಪಾಕಿಸ್ತಾನ, ಬಾಂಗ್ಲಾದೇಶ ಪ್ರವಾಸ ರದ್ದಾಗೋದು..!! ಒಂದು ವೇಳೇ ಕಾರಾಣಾಂತರಗಳಿಂದ ಈ ಪ್ರವಾಸಗಳು ರದ್ದಾದರೇ, ಇಂಗ್ಲೆಂಡ್​​ ಆಟಗಾರರು ಐಪಿಎಲ್​ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಅದೇನೇ ಆಗಲಿ ಸದ್ಯಕ್ಕೆ ಕೊರೊನಾದಿಂದ ರದ್ದಾಗಿರೋ ಐಪಿಎಲ್, ಇದೇ ವರ್ಷ ನಡೆಸೋಕೆ ಬಿಸಿಸಿಐ ಬಿಗ್​ಬಾಸ್​​ಗಳ ಶತ ಪ್ರಯತ್ನ ನಡೆಸುತ್ತಿದ್ದು, ಯಾವಾಗ ನಡೆಸ್ತಾರೆ ಇನ್ನಷ್ಟೇ ಗೊತ್ತಾಗಬೇಕಿದೆ.

The post ಐಪಿಎಲ್-14 ಮತ್ತೆ ನಡೆದ್ರೆ ಇಂಗ್ಲೆಂಡ್ ಆಟಗಾರರು ಬರೋದಿಲ್ಲ..! appeared first on News First Kannada.

Source: newsfirstlive.com

Source link