14ನೇ ಆವೃತ್ತಿಯ ಐಪಿಎಲ್​​ನ 2ನೇ ಹಂತದ ಪಂದ್ಯಗಳನ್ನ ಯುಎಇನಲ್ಲಿ ಮರು ಆಯೋಜನೆಗೊಳ್ಳಲಿದೆ. ಸೆಪ್ಟೆಂಬರ್-ಅಕ್ಟೋಬರ್ ನಡುವೆ 2ನೇ ಹಂತದ ಪಂದ್ಯಗಳು ನಡೆಸಲಿದ್ದು, ಯುಎಇ ಸರ್ಕಾರ ಕೈಗೊಂಡಿರುವ ತೀರ್ಮಾನ ಐಪಿಎಲ್ ಫ್ರಾಂಚೈಸಿಗಳಿಗೆ ತಲೆನೋವು ತಂದೊಡ್ಡಿವೆ. ಜುಲೈ 21ರ ತನಕ ಭಾರತ-ಯುಎಇ ನಡುವಿನ ವಿಮಾನಯಾನವನ್ನ ಯುಎಇ ಸರ್ಕಾರ ನಿಷೇಧಿಸಿದೆ. ಇದು ಐಪಿಎಲ್ ಫ್ರಾಂಚೈಸಿಗಳಿಗೆ ಸಮಸ್ಯೆಯಾಗಿ ಮಾರ್ಪಟ್ಟಿದೆ. ಈ ಕುರಿತಾಗಿ ಮಾತನಾಡಿರುವ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಸಿಇಒ ಕಾಶಿ ವಿಶ್ವನಾಥನ್​, ಹೋಟೆಲ್​ ಹುಡಕಾಟದ ಬಗ್ಗೆ ನಮಗೆ ಯಾವುದೇ ಸಮಸ್ಯೆ ಇಲ್ಲ.. ಯಾಕಂದ್ರೆ ಬಿಸಿಸಿಐ ದಿನಾಂಕ ಪ್ರಕಟಿಸುತ್ತಲೇ ನಾವು ಮಾತುಕತೆ ನಡೆಸಿ, ಹೋಟೆಲ್​​ಗಳನ್ನ ಕಾಯ್ದಿರಿಸಿದ್ದೇವೆ. ಆದ್ರೆ ಭಾರತ-ಯುಎಇ ನಡುವಿನ ವಿಮಾನಯಾನ ರದ್ದಿನಿಂದಾಗಿ, ನಮ್ಮ ಯೋಜನೆಗಳಿಗೆ ಅಡ್ಡಿಯಾಗಲಿದೆ ಎಂದು ತಿಳಿಸಿದ್ದಾರೆ.

The post ಐಪಿಎಲ್ PHASE 2​​ ಆರಂಭಕ್ಕೂ ಮುನ್ನ ಸಿಎಸ್​ಕೆ ಫ್ರಾಂಚೈಸಿಗೆ ಟೆನ್ಶನ್..! appeared first on News First Kannada.

Source: newsfirstlive.com

Source link